ಅಪ್ಪಳಿಸಿದ ಕಾಪ್ಟರ್, ಪ್ರತಿಭಾ ಪಾಟೀಲ್ ಪಾರು
ಭುವನೇಶ್ವರ,
ಡಿ. 10 : ರಾಷ್ಟ್ರಪತಿ ಪ್ರತಿಭಾ ಪಾಟೀಲ್ ಹಾಗೂ ಅವರ ಪತಿ ದೇವಿಸಿಂಗ್ ಶೇಖಾವತ್ ಮತ್ತು ಒರಿಸ್ಸಾ ರಾಜ್ಯಪಾಲ ಎಂ ಸಿ ಭಂಡಾರಿ ಬುಧವಾರ (ನ 9) ಪ್ರಾಣಾಪಾಯದಿಂದ ಸ್ವಲ್ಪದರಲ್ಲೇ ಪಾರಾಗಿದ್ದಾರೆ. ಈ ಮೂವರು ಗಣ್ಯರು ಪ್ರಯಾಣಿಸುತ್ತಿದ್ದ ವಾಯುಪಡೆ ಹೆಲಿಕಾಪ್ಟರ್ ರೆಕ್ಕೆಗಳು ಭುವನೇಶ್ವರ ವಿಮಾನ ನಿಲ್ದಾಣದ ಶೆಡ್ ಗೆ ಅಪ್ಪಳಿಸಿ ಹಾನಿಗೊಂಡಿವೆ. id="toptextpromo">ಪ್ರತಿಭಾ
ಪಾಟೀಲ್ ಪುರಿಯಲ್ಲಿ ಕಾರ್ಯಕ್ರಮ ಮುಗಿಸಿ ಭುವನೇಶ್ವರಕ್ಕೆ ಮರಳುತ್ತಿದ್ದಾಗ ಈ ಘಟನೆ ಸಂಭವಿಸಿದೆ. 16 ಆಸನಗಳ ಈ ಹೆಲಿಕಾಪ್ಟರ್ ನ ಮೂರು ರೆಕ್ಕೆಗಳು ಹಾನಿಗೀಡಾಗಿವೆ. ಅದೃಷ್ಟವಶಾತ್ ಯಾರಿಗೂ ತೊಂದರೆಯಾಗಿಲ್ಲ. ರಾಷ್ಟ್ರಪತಿಗಳು ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್ ಇಳಿಯುವ ಸ್ಥಳವನ್ನು ವಾಯುಪಡೆ ಅಧಿಕಾರಿಗಳೇ ಆಯ್ಕೆ ಮಾಡಿದ್ದರು. ಈ ಘಟನೆ ಭದ್ರತಾ ಲೋಪ ಎಂದು ಪರಿಗಣಿಸಿರುವ ಆಡಳಿತ ತನಿಖೆಗೆ ಆದೇಶ ನೀಡಿದೆ. id='are-slot-1' class='oiad oi-axt oiadv'> id='top-searched-articles'>(ಏಜನ್ಸೀಸ್)












Click it and Unblock the Notifications