ಕಿಂಗ್ಸ್11 ನಾಯಕತ್ವದಿಂದ ಯುವರಾಜ್ ಔಟ್
ನವದೆಹಲಿ,
ಡಿ. 8 : ಕಿಂಗ್ಸ್ 11 ಪಂಜಾಬ್ ತಂಡದ ನಾಯಕತ್ವದಿಂದ ಯುವರಾಜ್ ಸಿಂಗ್ ಗೆ ಗೇಟ್ ಪಾಸ್ ನೀಡಲು ಫ್ರಾಂಚೈಸ್ ಮಾಲೀಕರು ನಿರ್ಧರಿಸಿದ್ದಾರೆಂದು ಇಂಡಿಯಾ ಟುಡೇ ಆನ್ ಲೈನ್ ಪತ್ರಿಕೆ ವರದಿ ಮಾಡಿದೆ. ಇನ್ನೇನು ಶುರುವಾಗಲಿರುವ ಐಪಿಎಲ್ ಸೀಸನ್ 3 ರಿಂದ ಕಿಂಗ್ಸ್11 ಪಂಜಾಬ್ ತಂಡ ಹೊಸ ನಾಯಕನಡಿಯಲ್ಲಿ ಆಡಲಿದೆ. ಆದರೆ ನೂತನ ನಾಯಕನ ಆಯ್ಕೆ ಇನ್ನೂ ಅಂತಿಮಗೊಂಡಿಲ್ಲ. id="toptextpromo">ಯುವರಾಜ್
ಬಗೆಗಿನ ನಿರ್ಧಾರವನ್ನು ಅಂತಿಮವಾಗಿ ಪ್ರಕಟಿಸಿಲ್ಲವಾದರೂ, ಫ್ರಾಂಚೈಸ್ ಮಾಲೀಕರ ನಿರ್ಧಾರವನ್ನು ಈಗಾಗಲೇ ಯುವರಾಜ್ ಸಿಂಗ್ ಗೆ ತಿಳಿಸಲಾಗಿದೆ ಎಂದು ವರದಿಯಾಗಿದೆ. 2008ರ ಐಪಿಎಲ್ ನಲ್ಲಿ ಪಂಜಾಬ್ ತಂಡ ಉಪಾಂತ್ಯ ತಲುಪಿತ್ತು. 2009ರ ಟೂರ್ನಿಯಲ್ಲಿ ಕಳಪೆ ಪ್ರದರ್ಶನ ನೀಡಿತ್ತು ಆದರೂ ಯುವರಾಜ್ ಉತ್ತಮಆಲ್ ರೌಂಡ್ ಪ್ರದರ್ಶನ ನೀಡಿದ್ದರು. id='are-slot-1' class='oiad oi-axt oiadv'> id='top-searched-articles'>(ಏಜನ್ಸೀಸ್)












Click it and Unblock the Notifications