ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಕ್ರಮ ಸಕ್ರಮ ಮುಕ್ತಿ ನೀಡಿದ ಸರಕಾರ

By Staff
|
Google Oneindia Kannada News

R Ashok
ಬೆಂಗಳೂರು, ಡಿ. 4 : ಅಕ್ರಮ-ಸಕ್ರಮ ಯೋಜನೆಗೆ ಕೊನೆಗೂ ಮಕ್ತಿ ಸಿಕ್ಕಿದೆ. ಅನೇಕ ವರ್ಷದಿಂದ ನೆನಗುದಿಗೆ ಬಿದ್ದಿದ್ದ ಈ ಯೋಜನೆ ಜಾರಿಗೆ ರಾಜ್ಯ ಸಚಿವ ಸಂಪುಟ ಸಭೆ ಗುರುವಾರ ಹಸಿರು ನಿಶಾನೆ ತೋರಿದೆ.

ಸಾರಿಗೆ ಸಚಿವ ಆರ್ ಅಶೋಕ್ ಅಧ್ಯಕ್ಷತೆಯ ಸಂಪುಟ ಉಪಸಮಿತಿ ಸಲ್ಲಿಸಿದ್ದ ಎಲ್ಲ ಶಿಫಾರಸ್ಸುಗಳ ಜಾರಿಗೆ ಸಮ್ಮತಿಲಾಗಿದೆ. ಗೆಜೆಟ್ ಪ್ರಕಟಣೆವರೆಗಿನ ಎಲ್ಲ ಅಕ್ರಮಗಳ ಸಕ್ರಮಕ್ಕೆ ಕ್ರಮಕೈಗೊಳ್ಳಬಹುದು ಎಂಬ ಬದಲು, ಸಂಪುಟ ಸಭೆಯಲ್ಲಿ ನಿರ್ಣಯ ಕೈಗೊಂಡ ಡಿ.3ರವರೆಗಿನ ಎಲ್ಲ ಅಕ್ರಮ ಸಕ್ರಮಗಳ ಅವಕಾಶ ನೀಡುವ ತೀರ್ಮಾನ ಕೈಗೊಳ್ಳಲಾಗಿದೆ. ಕಳೆದ ಎರಡೂವರೆ ದಶಕಗಳಿಂದ ಆತಂಕದಲ್ಲೇ ದಿನ ಕಳೆಯುತ್ತಿದ್ದ ಸಾರ್ವಜನಿಕರಿಗೆ ಈ ನಿರ್ಧಾರ ನೆಮ್ಮದಿ ದೊರೆಕಿಸಿದೆ.

ಬಿಬಿಎಂಪಿ ಸೇರಿದಂತೆ ರಾಜ್ಯದ ಎಲ್ಲ ಸ್ಥಳೀಯ ಸಂಸ್ಥೆಗಳು ಈ ನಿರ್ಧಾರದಿಂದ ಆರ್ಥಿಕವಾಗಿ ಸದೃಡವಾಗಲಿವೆ. ಬೆಂಗಳೂರಿನಲ್ಲಿ ಕನಿಷ್ಠ ಐದು ಸಾವಿರ ಕೋಟಿ ರುಪಾಯಿ, ರಾಜ್ಯದ ಇತರೆ ನಗರ, ಪಟ್ಟಣಗಳಲ್ಲೂ ಅಷ್ಟೇ ಮೊತ್ತದೊಂದಿಗೆ ದಂಡ ಶುಲ್ಕ ರೂಪದಲ್ಲಿ ಕನಿಷ್ಠ ಹತ್ತು ಸಾವಿರ ಕೋಟಿ ರುಪಾಯಿ ಸಂಗ್ರಹವಾಗು ನಿರೀಕ್ಷೆಯಿದೆ ಎಂದು ಅಶೋಕ್ ವಿವರಿಸಿದರು.

ಸಂಪುಟದ ಇತರೆ ತೀರ್ಮಾನಗಳು

ತುಮಕೂರು ನಗರಕ್ಕೆ ಮಹಾನಗರ ಪಾಲಿಕೆ ಭಾಗ್ಯ, ಚಾಮಲಾಪುರ ಶಾಖೋತ್ಪನ್ನ ಯೋಜನೆ ಸಂಪೂರ್ಣ ರದ್ದು, ಪಿಪಿಪಿ ಮಾದರಿಯಲ್ಲಿ ತದಡಿ ಬಂದರು ನಿರ್ಮಾಣ, ಕೇಂದ್ರದ ನೆರವಿನಲ್ಲಿ ಐದು ನೀರಾವರಿ ಯೋಜನೆ ಜಾರಿ, ರಾಜ್ಯಾಂದ್ಯತ ಇ ಸ್ಪಾಂಪಿಂಗ್ ಯೋಜನೆಯ ವಿಸ್ತರಣೆ, ಬನ್ನೇರುಘಟ್ಟ ರಾತ್ರಿ ಸಫಾರಿಗೂ ಅನುಮತಿ, ಬಿಸಿಎಂಟಿ ಬಸ್ ಖರೀದಿಗೆ 160 ಕೋಟಿ ಸಾಲ ಪಡೆಯಲು ಅನುಮತಿ, 3,242 ಕೋಟಿ ರುಪಾಯಿ ವೆಚ್ಚದಲ್ಲಿ ಬಿಬಿಎಂಪಿಯ 12 ರಸ್ತೆಗಳ ಅಭಿವೃದ್ಧಿ.

(ದಟ್ಸ್ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X