ಉಕ್ಕು ಘಟಕ : ಅರ್ಸೆಲರ್ ನಂತರ ಫೋಸ್ಕೋ

ಅಷ್ಟೆ ಅಲ್ಲ ದಕ್ಷಿಣ ಕೋರಿಯಾ ಮೂಲದ ಫೋಸ್ಕೋ ಕಂಪನಿ ಪ್ರತಿನಿಧಿಗಳು ಈಗಾಗಲೇ ಒಂದು ಸುತ್ತು ಬೇಟಿ ನೀಡಿ ಉಕ್ಕು ಉತ್ಪಾದನೆ ಸ್ಥಾವರ ನಿರ್ಮಾಣ, ಗಣಿಗಾರಿಕೆಗೆ ಭೂಮಿ ಲಭ್ಯತೆ ಬಗ್ಗೆ ಪರಿಶೀಲನೆ ಮಾಡಿ ಹೋಗಿದ್ದಾರೆ. ಫೋಸ್ಕೋ ಕಂಪನಿ ರಾಜ್ಯದಲ್ಲಿ ಸುಮಾರು ವಾರ್ಷಿಕ 6 ದಶಲಕ್ಷ ಟನ್ ಸಾಮರ್ಥ್ಯದ ಉಕ್ಕು ಸ್ಥಾವರ ಸ್ಥಾಪಿಸಲು ಉದ್ದೇಶಿಸಿದೆ.
ಫೋಸ್ಕೋ ಹೂಡಿಕೆ ಮಾಡಲಿರುವ ಮೊತ್ತ ಸುಮಾರು 20 ರಿಂದ 25 ಸಾವಿರ ಕೋಟಿ ರುಪಾಯಿಗಳು. 2005ರಲ್ಲಿ ಭಾರತಕ್ಕೆ ಕಾಲಿಟ್ಟಿರುವ ಫೋಸ್ಕೋ ಕಂಪನಿ ಈಗಾಗಲೇ ಒರಿಸ್ಸಾಗ ಜಗತ್ ಸಿಂಗ್ ಜಿಲ್ಲೆಯ ಪರಾದೀಪ್ ನಲ್ಲಿ 12 ದಶಲಕ್ಷ ಟನ್ ಸಾಮರ್ಥ್ಯದ ಘಟಕ ಸ್ಥಾಪಿಸಿದೆ. ಇದಕ್ಕಾಗಿ 55,500 ಕೋಟಿ ರುಪಾಯಿಗಳನ್ನು ವಿನಿಯೋಗಿಸಿದೆ, ಅರ್ಸೆಲರ್ ಮಿತ್ತಲ್ ಕಂಪನಿ 50,000 ಕೋಟಿ ರುಪಾಯಿಗಳ ಬಂಡವಾಳ ನಿರ್ಧರಿಸಿದ್ದು, ಆರಂಭದಲ್ಲಿ 30,000 ಕೋಟಿ ರುಪಾಯಿಗಳನ್ನು ವಿನಿಯೋಗಿಸಲಿದೆ.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications