ಈಕವಿ ಬೆಂಗಳೂರು ಸಭೆ ಈ ಭಾನುವಾರ

ಭಾನುವಾರದ ಸಭೆಯಲ್ಲಿ ಉತ್ತರ ಕರ್ನಾಟಕ ನೆರೆ ಸಂತ್ರಸ್ತರಿಗೆ ಪರಿಹಾರ, ಈಕವಿ ಚರ್ಚಾಸ್ಪರ್ಧೆ, ಕವನ ಸ್ಪರ್ಧೆ ಮತ್ತು ಈಕವಿ ದತ್ತು ತೆಗೆದುಕೊಂಡಿರುವ ಶಾಲೆಗಳ ಬಗೆಗೆ ವಿಸ್ತೃತ ಸಮಾಲೋಚನೆ ನಡೆಸಲಾಗುತ್ತದೆ ಎಂದು ಈಕವಿಯ ವಕ್ತಾರ ಮಂಜು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಈಕವಿ ಎಂದರೆ ಎಲ್ಲ ಕನ್ನಡ ಮನಸ್ಸುಗಳನ್ನ ಬೆಸೆಯುವ ಒಂದು ಕನ್ನಡಪರ ಪ್ರಗತಿಪರ ಮನಸ್ಸುಗಳ ಮಿಲನದ ಹೂರಣ.
ಸಭೆ ಜರಗುವ ಸ್ಥಳ : 12, ಸುಮೇರು, ಬಸವನಗುಡಿ, ಸರ್ ಎಂ ಎನ್ ಕೃಷ್ಣರಾವ್ ರಸ್ತೆ, ಬೆಂಗಳೂರು- 560004. ದಿನಾಂಕ ಡಿಸೆಂಬರ್ 6ರ ಸಂಜೆ 4ರಿಂದ 7 ಗಂಟೆ. ದಾರಿಯ ವಿವರಗಳಿಗೆ ಮತ್ತು ಈಕವಿ ಕಾರ್ಯಕ್ರಮಗಳ ಬಗೆಗೆ ಹೆಚ್ಚಿನ ವಿವರಗಳಿಗೆ ನೋಡಿ http://ekavikarnataka.ning.com/ ದೂರವಾಣಿ : ಕಿರಣ್ 98863 02085, ಮಂಜು 97424 95837
(ದಟ್ಸ್ ಕನ್ನಡ ಸಭೆ-ಸಮಾರಂಭ)












Click it and Unblock the Notifications