ದೇಶದಲ್ಲಿ ಗೋಹತ್ಯೆ ನಿಷೇಧಿಸಿ, ಸಿಂಘಾಲ್

ನಗರದಲ್ಲಿ ಏರ್ಪಡಿಸಲಾಗಿದ್ದ ವಿರಾಟ ಜನಜಾಗರಣ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಗೋಹತ್ಯೆ ಹಾಗೂ ಗ್ರಾಮ ಸಂರಕ್ಷಣೆಗಾಗಿ ದೇಶದಲ್ಲಿ ವಿಶ್ವಮಂಗಲ ಗೋ-ಗ್ರಾಮ ಯಾತ್ರೆ ಸಂಘಟಿಸಲಾಗಿದೆ. ಈ ಯಾತ್ರೆಯು ಕುರುಕ್ಷೇತ್ರದಿಂದ ಹೊರಟು ನಾಗಪುರದವರೆಗೆ ಸಾಗಲಿದೆ ಎಂದರು. ಗೋಹತ್ಯೆಯನ್ನು ಗುಜರಾತ್ ಸರಕಾರ ನಿಷೇಧಿಸಿದೆ. ಇದೇ ರೀತಿ ಕೇಂದ್ರ ಸರಕಾರ ದೇಶದಲ್ಲಿ ಗೋಹತ್ಯೆ ನಿಷೇಧಿಸುವ ಕಾನೂನು ಜಾರಿಗೆ ತರಬೇಕು ಎಂದು ಅವರು ಒತ್ತಾಯಿಸಿದರು.
ಗೋಹತ್ಯೆ ನಿಷೇಧ ಕಾನೂನು ಜಾರಿಗೆ ತರಲು ಕೇಂದ್ರ ಸರಕಾರದ ಮೇಲೆ ಒತ್ತಡ ಹೇರಲು ದೊಡ್ಡ ಆಂದೋಲನವನ್ನೇ ಸಂಘಟಿಸಲಾಗಿದೆ. 2010 ರಲ್ಲಿ ನಡೆಯುವ ಕುಂಭ ಮೇಳದ ವೇಳೆ ಗೋಹತ್ಯೆ ನಿಷೇಧ ಕಾನೂನು ಜಾರಿಗೆ ಆಗ್ರಹಿಸಿ, ಎಲ್ಲಾ ಸಾಧು-ಸಂತರು ಒಂದೇ ಕಡೆ ಸೇರಿ ಕೇಂದ್ರದ ಮೇಲೆ ಒತ್ತಡ ತರಬೇಕು. ಗೋವುಗಳು ಮತ್ತು ನಮ್ಮ ಹಳ್ಳಿಗಳು ದೇಶದ ಸಂಸ್ಕೃತಿ. ಇವುಗಳ ರಕ್ಷಣೆ ಆಗಬೇಕು ಎಂದು ಸಿಂಘಾಲ್ ಹೇಳಿದರು.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications