ಗಣಿಗಾರಿಕೆ ನಿಲ್ಲಿಸುವಂತೆ ಕೇಂದ್ರದಿಂದ ಆದೇಶ
ನವದೆಹಲಿ,
ಡಿ. 1 : ಸುಪ್ರೀಂಕೋರ್ಟ್ ನ ಉನ್ನತಾಧಿಕಾರ ಸಮಿತಿ ನೀಡಿದ್ದ ವರದಿಯನ್ನಾಧರಿಸಿ ಕರ್ನಾಟಕ ಪ್ರವಾಸೋಧ್ಯಮ ಸಚಿವ ಜನಾರ್ಧನ ರೆಡ್ಡಿ ಮಾಲೀಕತ್ವದ ಒಬಳಾಪುರಂ ಮೈನಿಂಗ್ ಕಂಪನಿ ಸೇರಿದಂತೆ ಆರು ಗಣಿಗಳ ಕಾರ್ಯಾಚರಣೆಯನ್ನು ತಕ್ಷಣದಿಂದಲೇ ಅಮಾನತುಗೊಳಿಸಿ ಕೇಂದ್ರ ಪರಿಸರ ಇಲಾಖೆ ಆದೇಶ ಹೊರಡಿಸಿದೆ. ಈ ಎಲ್ಲಾ ಗಣಿಗಳಿಗೆ ನೀಡಿದ್ದ ಪರಿಸರ ಮಂಜುರಾತಿಯನ್ನು ರದ್ದುಗೊಳಿಸಿ ಹೊಸ ಸಮೀಕ್ಷೆ ಮುಗಿಯುವವರೆಗೆ ಗಣಿಗಾರಿಕೆ ನಡೆಸುವಂತಿಲ್ಲ ಎಂದು ಕೇಂದ್ರ ಪರಿಸರ ಇಲಾಖೆ ಹೇಳಿಕೆ ನೀಡಿದೆ. id="toptextpromo">ಸರ್ವೋಚ್ಚ
ನ್ಯಾಯಾಲಯ ಉನ್ನತಾಧಿಕಾರ ಸಮಿತಿ ತನ್ನ ಶಿಫಾರಸ್ಸನ್ನು ಸಂಬಂಧಪಟ್ಟ ರಾಜ್ಯ ಸರಕಾರ ಮತ್ತು ಪರಿಸರ ಇಲಾಖೆಗೆ ಈ ಹಿಂದೆ ನೀಡಿತ್ತು. ಇದಕ್ಕೆ ಕೂಡಲೇ ಸ್ಪಂದಿಸಿದ ಆಂಧ್ರಪ್ರದೇಶ ಸರಕಾರ ಓಬಳಾಪುರಂ ಮತ್ತು ಇತರ ಕಂಪೆನಿಗಳಿಗೆ ನೋಟಿಸ್ ಜಾರಿ ಮಾಡಿ ಗಣಿಗಾರಿಕೆ ಸ್ಥಗಿತಗೊಳಿಸುವಂತೆ ಆದೇಶ ನೀಡಿತ್ತು. id='are-slot-1' class='oiad oi-axt oiadv'> id='top-searched-articles'>(ದಟ್ಸ್
ಕನ್ನಡ ವಾರ್ತೆ)











Click it and Unblock the Notifications