ಸಿಇಟಿ 2010 ರ ಸಿಇಟಿ ವೇಳಾ ಪಟ್ಟಿ ಪ್ರಕಟ

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಂದಿನ ವರ್ಷ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಸಿಇಟಿ ಬರೆಯಲಿ ಎಂಬ ಕಾರಣಕ್ಕೆ ಮೊದಲೇ ವೇಳಾಪಟ್ಟಿಬಿಡುಗಡೆ ಮಾಡಲಾಗಿದೆ. ಒಟ್ಟು 228 ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದೆ. ಬೆಂಗಳೂರು, ಹುಬ್ಬಳ್ಳಿ, ಗುಲ್ಬರ್ಗದ ಜತೆಗೆ ಮಂಗಳೂರು, ಶಿವಮೊಗ್ಗ ಮತ್ತು ದಾವಣಗೆರೆಯಲ್ಲಿ ಸೀಟು ಆಯ್ಕೆ ಪ್ರಕ್ರಿಯೆ (ಕೌನ್ಸೆಲಿಂಗ್) ನಡೆಯಲಿದೆ ಎಂದರು.
ಸಿಇಟಿ ತರಬೇತಿ ಕೇಂದ್ರ : ಸರಕಾರ ಪ್ರಾಯೋಗಿಕವಾಗಿ ಜಾರಿಗೊಳಿಸಿರುವ ಗ್ರಾಮೀಣ ಸಿಇಟಿ ತರಬೇತಿ ಕೇಂದ್ರ ಯೋಜನೆಗೆ ಅಭೂತಪೂರ್ವ ಪ್ರತಿಕ್ರಿಯೆ ವ್ಯಕ್ತವಾಗಿದೆ. ಆರಂಭದಲ್ಲಿ 86 ಕೇಂದ್ರಗಳನ್ನು ತೆರೆಯುವ ಉದ್ದೇಶ ಇತ್ತು. ಆದರೆ, ಬೇಡಿಕೆ ಹೆಚ್ಚಾದ ಕಾರಣ 102ಕ್ಕೆ ಏರಿಕೆಯಾಗಿದ್ದು, 14 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ತರಬೇತಿ ಪಡೆಯುತ್ತಿದ್ದಾರೆ. ಇನ್ನೂ ಹೆಚ್ಚಿನ ಕಡೆ ಕೇಂದ್ರಗಳನ್ನು ತೆರೆಯಲು ಒತ್ತಾಯ ಬಂದಿದ್ದು ಪರಿಶೀಲಿಸಿ ತೀರ್ಮಾನಕೈಗೊಳ್ಳಲಾಗುವುದು ಎಂದು ಹೇಳಿದರು.
ಹೆಚ್ಚು ಹಣ-ತನಿಖೆ : ಹಾಸನ ಮತ್ತು ರಾಮನಗರದಲ್ಲಿ ಎಂಜಿನಿಯರಿಂಗ್ ಕಾಲೇಜು ಕಟ್ಟಡ ಕಾಮಗಾರಿ ನಡೆಯುತ್ತಿದೆ. ಆದರೆ ಎರಡೂ ಕಟ್ಟಡಗಳಿಗೆ ಅಗತ್ಯಕ್ಕಿಂತ ಹೆಚ್ಚು ಹಣ ಬಿಡುಗಡೆಯಾಗಿದೆ. ಹಾಸನ ಕಾಲೇಜಿಗೆ 38, ರಾಮನಗರ ಕಾಲೇಜಿಗೆ 27 ಕೋಟಿ ರೂ. ಬಿಡುಗಡೆಯಾಗಿದೆ. ಹೆಚ್ಚಿನ ಹಣ ಬಿಡುಗಡೆ ಮಾಡಿರುವ ಬಗ್ಗೆ ಪರಿಶೀಲಿಸಿ ವರದಿ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. ವರದಿ ಬಂದ ಬಳಿಕ ತನಿಖೆ ಆರಂಭಿಸಲಾಗುವುದು ಎಂದರು.
ಏ. 28 ರ ಬೆಳಗ್ಗೆ 10.30 ರಿಂದ 11.50 ಜೀವಶಾಸ್ತ್ರ,
ಮಧ್ಯಾಹ್ನ 2.30 ರಿಂದ 3.50 ಗಣಿತ,
ಏ. 29 ರ ಬೆಳಗ್ಗೆ 10.30 ರಿಂದ 11.50 ಭೌತಶಾಸ್ತ್ರ,
ಮಧ್ಯಾಹ್ನ 2.30 ರಿಂದ 3.50 ರಸಾಯನ ಶಾಸ್ತ್ರ.
ಏ. 30 ರ ಬೆಳಗ್ಗೆ 11 ಗಡಿನಾಡು ಕನ್ನಡಿಗರು ಮತ್ತು
ಮಾರ್ಚ್ 1. ಹೊರನಾಡು ಕನ್ನಡಿಗರಿಗೆ ಕನ್ನಡ ಭಾಷೆ ಪರೀಕ್ಷೆ.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications