ಹುಬ್ಬಳ್ಳಿ : ಅಂಬೇಡ್ಕರ್ ನಾಮಫಲಕ ತೆರವು, ದಾಂದಲೆ

ಹಳೇಹುಬ್ಬಳ್ಳಿ ಪೊಲೀಸ್ ಠಾಣೆ ಎದುರು ಸುಮಾರು ಮೂರು ತಾಸು ರಸ್ತೆ ತಡೆ ನಡೆಸಿದ ಕಾರ್ಯಕರ್ತರು ಕಲ್ಲು ತೂರಾಟ ನಡೆಸಿದ್ದರು. ಈ ವೇಳೆ ಸಾರಿಗೆ ಸಂಸ್ಥೆಯ 8 ಬಸ್, 3 ಲಾರಿ, 2 ಜೀಪುಗಳ ಗಾಜುಗಳು ಒಡೆದಿದ್ದು, ರಸ್ತೆ ಪಕ್ಕ ನಿಂತಿದ್ದ ಆರಕ್ಕೂ ಹೆಚ್ಚು ಬಸ್‌ಗಳ ಗಾಲಿಯ ಗಾಳಿ ತೆಗೆದಿದ್ದಾರೆ. ರಸ್ತೆ ತಡೆಯಿಂದ ವಾಹನ ಸಂಚಾರ ಸ್ಥಗಿತಗೊಂಡು ಕಾರವಾರ ರಸ್ತೆಯಲ್ಲಿ ಎರಡ್ಮೂರು ಕಿ.ಮೀ. ವರೆಗೆ ವಾಹನಗಳು ಸಾಲುಗಟ್ಟಿ ನಿಂತಿದ್ದವು.
ಕಾರವಾರ ರಸ್ತೆ ಮೂಲಕ ತೆರಳುವ ಪ್ರಯಾಣಿಕರು ತೀವ್ರ ತೊಂದರೆ ಅನುಭವಿಸಿದರು. ಯಾರೊಬ್ಬರ ಗಮನಕ್ಕೂ ಬಾರದಂತೆ ನಾಮಫಲಕ ತೆರವುಗೊಳಿಸಿದ್ದ ಪಾಲಿಕೆ ಹಾಗೂ ಪೊಲೀಸ್ ಇಲಾಖೆ ಸಿಬ್ಬಂದಿ ಕೊನೆಗೆ ದಲಿತ ಮುಖಂಡರ ತೀವ್ರ ಪ್ರತಿಭಟನೆಗೆ ಮಣಿದು, ಮಧ್ಯಾಹ್ನ 1.30ರ ಸುಮಾರಿಗೆ ಮೊದಲಿದ್ದ ಜಾಗದಲ್ಲಿಯೇ ಅಳವಡಿಸಿದರು.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications