ವೈದ್ಯರು ಯಮನ ಏಜೆಂಟರು: ರಾಮಚಂದ್ರ ಗೌಡ

Doctors feeding poison: Ramchandra Gowda
ಬೆಂಗಳೂರು, ನ. 20 : ಜನರಿಗೆ ಸೂಕ್ತ ಚಿಕಿತ್ಸೆ ನೀಡಬೇಕಿರುವ ವೈದ್ಯರು ಸೇವೆಯ ಬದಲು ವ್ಯಾಪಾರದ ಉದ್ದೇಶಕ್ಕೆ ಬಳಸಿಕೊಳ್ಳುತ್ತಿದ್ದಾರೆ. ಹೀಗಾಗಿ ವೈದ್ಯರು ಯಮನ ಏಜೆಂಟರಾಗಿದ್ದಾರೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ರಾಮಚಂದ್ರ ಗೌಡ ಟೀಕಿಸಿದ್ದಾರೆ.

ಹೀಲಿಂಗ್ ತಜ್ಞರ ಸಮಾವೇಶವನ್ನು ಉದ್ಘಾಟಿಸಿ ಮಾತನಾಡುತ್ತಿದ್ದ ಗೌಡ, ಸಾಂಪ್ರದಾಯಿಕ ವೈದ್ಯರ ಸಮಸ್ಯೆಗೆ ಸರಕಾರ ಸಕರಾತ್ಮಕವಾಗಿ ಸ್ಪಂದಿಸಲಿದೆ. ಹಳ್ಳಿ ವೈದ್ಯರು ತಮ್ಮ ವೈದ್ಯ ಪದ್ದತಿಯನ್ನು ಬೇರೆಯವರಿಗೆ ಹೇಳಿ ಕೊಡುವುದಿಲ್ಲ ಇದರಿಂದ ಈ ಪದ್ಧತಿ ಒಂದು ಕುಟುಂಬಕ್ಕೆ ಸೀಮಿತವಾಗಿದೆ ಎಂದು ಸಚಿವರು ವಿಷಾದ ವ್ಯಕ್ತಪಡಿಸಿದ್ದಾರೆ.

ಹಳ್ಳಿ ವೈದ್ಯರು ತಮ್ಮ ವೈದ್ಯ ಪದ್ದತಿಯನ್ನು ಅನ್ಯರಿಗೂ ತಿಳಿಸಿಕೊಡಬೇಕು. ಇದರಿಂದ ಪದ್ಧತಿ ಜನಪ್ರಿಯವಾಗುತ್ತದೆ. ಹೀಲಿಂಗ್ ವೈದ್ಯ ಪದ್ದತಿಗೆ ಅಧಿಕೃತ ಮಾನ್ಯತೆ ಸಿಕ್ಕಿಲ್ಲ. ಸ್ಥಳೀಯರ ಜ್ಞಾನ ಆಧರಿಸಿರುವ ಈ ಕ್ಷೇತ್ರಕ್ಕೆಸಾಕಷ್ಟು ಸಮಸ್ಯೆ ಎದುರಿಸುತ್ತಿದೆ ಎಂದು ತಿಳಿದಿದೆ. ವೈದ್ಯರ ಸಮಸ್ಯೆಗಳಿಗೆ ಸರಕಾರ ಸಕರಾತ್ಮಕವಾಗಿ ಸ್ಪಂದಿಸಲಿದೆ ಎಂದು ಹೇಳಿದ್ದಾರೆ.

(ದಟ್ಸ್ ಕನ್ನಡ ವಾರ್ತೆ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+