ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇದು ರಿವರ್ಸ್ ಲವ್ ಜಿಹಾದ್ !

By Staff
|
Google Oneindia Kannada News

Reverse Love Jihad
ಇದು ಲವ್ ಜಿಹಾದ್‌ನ ಪರಿವರ್ತಿತ ರೂಪ. ಮುಸ್ಲಿಂ ಜನಾಂಗದ ಯುವತಿಯನ್ನು ಪ್ರೀತಿಸಿದನೆಂಬ ಕಾರಣಕ್ಕೆ ಹೆಣವಾಗಿ ಹೋದ ರಿಯಲ್ ಎಸ್ಟೇಟ್ ಉದ್ಯಮಿಯ ದಾರುಣ ಕತೆ ಇದು.

ಅನಾಥ ಶವ ಎಂದು ಬಿ ರಿಪೋರ್ಟ್ ಹಾಕಿ ಕೈ ಚೆಲ್ಲುತ್ತಿದ್ದ ಪೊಲೀಸರು ಅಪರೂಪಕ್ಕೆ ತೋರಿದ ಸಮಯ ಪ್ರಜ್ಞೆಯಿಂದ 8 ತಿಂಗಳ ಹಿಂದೆ ನಡೆದ ನರಹತ್ಯೆ ಪ್ರಕರಣ ಬೆಳಕಿಗೆ ಬಂದಿದೆ. ತಮ್ಮ ಜನಾಂಗದ ಯುವತಿಯನ್ನು ಪ್ರೀತಿಸುತ್ತಿದ್ದ ಯುವಕನನ್ನು ಕೊಲೆ ಮಾಡಿದ 9 ಆರೋಪಿಗಳನ್ನು 8 ತಿಂಗಳ ನಂತರ ತಿಲಕನಗರ ಪೊಲೀಸರು ಬಂಧಿಸಿದ್ದಾರೆ.

ತಿಲಕನಗರ ಎಸ್‌ಆರ್‌ಕೆ ಗಾರ್ಡನ್ ಬಳಿಯಿರುವ ಗ್ರೀನ್ ಆರ್ಚಿಡ್ ಬಳಿ ಅನಾಥ ಶವವಾಗಿ ಬಿದ್ದಿದ್ದ ಯುವಕ ಮಡಿವಾಳದ ರಿಯಲ್ ಎಸ್ಟೇಟ್ ಉದ್ಯಮಿ ತಮಿಳುನಾಡು ಮೂಲದ ಮಾದೇಯನ್(30) ಎಂದು ಪತ್ತೆ ಹಚ್ಚಿದ್ದಾರೆ. ಕೊಲೆ ಸಂಬಂಧ ನ್ಯೂಗುರಪ್ಪನ ಪಾಳ್ಯದ ಖಾಜಾ ಮೊಹಿನುದ್ದೀನ್(32),ಅಬ್ದುಲ್ ರೆಹಮಾನ್(23), ಹರ್ಷದ್(24),ಆನೇಕಲ್‌ನ ಜಹೀರ್‌ಖಾನ್ (23), ಬಿಸ್ಮಿಲ್ಲಾ ನಗರದ ಸೈಯದ್ ನ್ಯಾಮತ್(22), ಇಮ್ರಾನ್ ಖಾನ್(24), ಬಾಲಾಜಿನಗರದ ಸಫೀರ್ ಅಹ್ಮದ್ ಸಫೀರ್ (24), ಹಬೀಬುಲ್ ರೆಹಮಾನ್(24) ಬಂಧಿತರು.

ಏಕೆ ಕೊಲೆ : ಮೃತ ಮಾದೇಯನ್ ಸುಭಾಷ ನಗರದ ಹಾಜೀರಾ ಎಂಬ ಯುವತಿಯನ್ನು ಪ್ರೀತಿಸುತ್ತಿದ್ದ. ತಮಿಳುನಾಡಿನ ಮಾಣಿಕ್ಯಪುದೂರು ಗ್ರಾಮದ ಈತ 8 ವರ್ಷದ ಹಿಂದೆ ಮಡಿವಾಳಕ್ಕೆ ಬಂದು ರಿಯಲ್ ಎಸ್ಟೇಟ್ ವ್ಯವಹಾರ ಆರಂಭಿಸಿದ್ದ. ಈತನಿಗೆ ಮದುವೆಯಾಗಿದ್ದು, ಹೆಣ್ಣು ಮಕ್ಕಳಿದ್ದಾರೆ. ಫೆ. 18 ರಂದು ಹಾಜೀರಾ ಜತೆ ತಾವರೆಕೆರೆಯ ಪೆಟ್ರೋಲ್ ಬಂಕ್ ಹಿಂಭಾಗದ ಪಾರ್ಕ್‌ನಲ್ಲಿ ಕುಳಿತು ಮಾತನಾಡುತ್ತಿದ್ದಾಗ ಖಾಜಾ ಮೊಹಿನುದ್ದೀನ್ ನೇತೃತ್ವದ 9 ಜನರ ತಂಡ, ದಾಳಿ ನಡೆಸಿ ಮಾದೇಯನ್‌ನನ್ನು ಅಪಹರಿಸಿ ಕರೆದೊಯ್ದರು.

ನಮ್ಮ ಧರ್ಮದ ಹುಡುಗಿಯನ್ನು ಪ್ರೀತಿ ಮಾಡುತ್ತೀಯಾ ಎಂದು ಆಕ್ಷೇಪಿಸಿ ಕಲ್ಲು ಹಾಗೂ ಮರದ ಪಟ್ಟಿಯಿಂದ ಹೊಡೆದು ಕೊಲೆ ಮಾಡಿದ್ದರು. ಈ ಗುಂಪು ಪೋಷಕರಿಗೆ ತಿಳಿಸದೆ ಹಾಜೀರಾಳ ಅಪಹರಿಸಿ ಖಲೀಲ್ ಹಾಗೂ ಹಬೀಬ್ ಎಂಬುವರ ಮನೆಯಲ್ಲಿ ಇರಿಸಿದರು. ನಂತರ ಆಕೆಯನ್ನು ಪುಂಗನೂರಿನಲ್ಲಿರುವ ಮದರಸಾಕ್ಕೆ ಸೇರಿಸಿದ್ದರು. ನಂತರ ಕೆಂಗೇರಿ, ವೈರೆಡ್ಡಿಪಲ್ಲಿ ಹಾಗೂ ನಾಗೂರಿನಲ್ಲಿ ತಲೆಮರೆಸಿಕೊಂಡಿದ್ದರೆಂಬುದು ಬೆಳಕಿಗೆ ಬಂದಿದೆ.

ಅನಾಥ ಶವ : 2 ತಿಂಗಳು ಮಾದೇಯನ್ ಪ್ರಕರಣವನ್ನು ಅಪರಿಚಿತ ವ್ಯಕ್ತಿಯ ಕೊಲೆ ಎಂದೇ ಪರಿಗಣಿಸಲಾಗಿತ್ತು. ಮೃತನ ಚಹರೆ ಪತ್ತೆಗಾಗಿ ಎಲ್ಲ ಜಿಲ್ಲೆಗಳಿಗೆ ಚಿತ್ರ ಕಳುಹಿಸಲಾಗಿತ್ತು. ನಗರದ ಮಿಸ್ಸಿಂಗ್ ಬ್ಯೂರೋದಲ್ಲಿ ನಾಪತ್ತೆಯಾದ ವ್ಯಕ್ತಿಗಳ ಚಿತ್ರ ಪರಿ ಶೀಲಿಸಿದಾಗ ಮಡಿವಾಳದಲ್ಲಿ ಜ.1 ರಂದು ನಾಪತ್ತೆಯಾದ ಮಾದೇಯನ್‌ಗೆ ಹೋಲಿಕೆಯಾಗುತ್ತಿತ್ತು. ದೂರು ನೀಡಿದ ದೂರು ನೀಡಿದ್ದ ಕೆ. ಗೋಪಿಯೂಮಾದೇಯನ್ ಶವ ಎಂದು ಗುರುತಿಸಿದ.

(ದಟ್ಸ್ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X