ಮೇಲ್ಮನೆಯ 25 ಸ್ಥಾನಕ್ಕೆ ಡಿ.18 ರಂದು ಚುನಾವಣೆ

ಮೇಲ್ಮನೆಯ ಹಾಲಿ ಪ್ರತಿಪಕ್ಷ ನಾಯಕ ವಿ.ಎಸ್. ಉಗ್ರಪ್ಪ , ಎಸ್.ಎಂ.ಶಂಕರ್ ಸೇರಿದಂತೆ 25 ಸದಸ್ಯರ ಸದಸ್ಯತ್ವದ ಅವಧಿ ಮುಂದಿನ ಜ.5ರಂದು ಕೊನೆಗೊಳ್ಳಲಿದೆ. ರಾಜ್ಯದ 20 ವಿವಿಧ ಸ್ಥಳೀಯ ಸಂಸ್ಥೆಗಳ ಕ್ಷೇತ್ರದಿಂದ ಒಟ್ಟು 25 ಸದಸ್ಯರು ಆಯ್ಕೆಯಾಗಬೇಕಿದ್ದು ಹಾಲಿ ಸದಸ್ಯರಲ್ಲಿ ಹೆಚ್ಚಿನವರು ಕಾಂಗ್ರೆಸ್‌ಗೆ ಸೇರಿದವರಾಗಿದ್ದಾರೆ.ಡಿ.16ಕ್ಕೆ ಮತದಾನ: ಪ್ರಕಟಿಸಲಾಗಿರುವ ವೇಳಾಪಟ್ಟಿಯಂತೆ ನ.24ರಂದು ಚುನಾವಣಾ ಅಧಿಸೂಚನೆ ಪ್ರಕಟವಾಗಲಿದ್ದು, ಅಂದೇ ನಾಮಪತ್ರ ಸಲ್ಲಿಕೆಗೆ ಚಾಲನೆ ದೊರೆಯಲಿದೆ. ನಾಮಪತ್ರ ಸಲ್ಲಿಸಲು ಡಿ.1 ಕೊನೆಯ ದಿನವಾಗಿರುತ್ತದೆ.
ಮತ ಎಣಿಕೆ ಡಿ.21ರಂದು ನಡೆದು ಅಂದೇ ಫಲಿತಾಂಶ ಹೊರಬೀಳಲಿದೆ ಎಂದು ಚುನಾವಣಾ ಆಯೋಗ ತಿಳಿಸಿದೆ. ವಿಧಾನ ಪರಿಷತ್ ನಿವೃತ್ತರಾಗಲಿರುವ ಸದಸ್ಯರು ಸಿದ್ದು ನ್ಯಾಮಗೌಡ, ಎಸ್.ಆರ್.ಪಾಟೀಲ್, ಅಮಾತ್ಯಪ್ಪ ಕಂದಕೂರು, ಬಸವರಾಜ್ ಎಚ್.ಪಾಟೀಲ್, ಶಶಿಕಾಂತ ಅಕ್ಕಪ್ಪ ನಾಯಕ, ವೀರಕುಮಾರ್ ಪಾಟೀಲ್, ಶುಭಲತಾ ವಸಂತ್‌ಆಸ್ನೋಟಿಕರ್, ಶಿವರಾಜ ಸಜ್ಜನ್, ಎ.ಎಂ.ಹಿಂಡಸಗೇರಿ, ಎಚ್.ಆರ್.ಶ್ರೀನಾಥ್, ಕೆ.ಎಸ್. ಎಲ್.ಸ್ವಾಮಿ, ಬಿ.ಟಿ. ಚನ್ನಬಸಪ್ಪ (ಇತ್ತೀಚಿಗಷ್ಟೇ ನಿಧನರಾಗಿದ್ದರು), ಮೀರ್ ಅಜೀಜ್ ಅಹಮದ್, ಕೋಟಾ ಶ್ರೀನಿವಾಸ ಪೂಜಾರಿ, ಕೆ.ಪ್ರತಾಪ್‌ಚಂದ್ರ ಶೆಟ್ಟಿ , ಡಿ.ಎಂ.ಪುಟ್ಟೇಗೌಡ, ಎಸ್.ಎಂ.ಆನಂದ್, ವಿ.ಎಸ್. ಉಗ್ರಪ್ಪ , ಎಸ್.ಎಂ.ಶಂಕರ್, ಕೆ.ಬಿ.ಮುನಿವೆಂಕಟ ರೆಡ್ಡಿ , ಎಸ್.ರವಿ,ನಸೀರ್ ಅಹಮದ್, ಎಸ್.ಜಿ.ಮೇದಪ್ಪ, ಬಿ.ಚಿದಾನಂದ,ಎನ್.ಮಂಜುನಾಥ್.
ಚುನಾವಣಾ ವೇಳಾಪಟ್ಟಿ:
* ಅಧಿಸೂಚನೆ ಪ್ರಕಟಣೆ - ನ.24
* ನಾಮಪತ್ರ ಸಲ್ಲಿಸಲು ಕೊನೆ ದಿನ- ಡಿ.1
* ನಾಮಪತ್ರ ಪರಿಶೀಲನೆ - ಡಿ.2
* ಹಿಂತೆಗೆತಕ್ಕೆ ಕೊನೆ ದಿನ - ಡಿ.4
* ಮತದಾನ ದಿನ - ಡಿ.18
* ಸಮಯ:ಬೆ.8ರಿಂದ ಸಂ.4ರ ವರೆಗೆ
* ಮತ ಎಣಿಕೆ - ಡಿ.21
(ದಟ್ಸ್ ಕನ್ನಡವಾರ್ತೆ)












Click it and Unblock the Notifications