ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮರೀಬೇಡಿ ಸೋಮವಾರ ಕಡಲೆಕಾಯಿ ಪರಿಷೆ!

|
Google Oneindia Kannada News

Basavanagudi Groun Net Fare From Nov 16
ಬೆಂಗಳೂರು, ನ.15: ಪ್ರತಿ ವರ್ಷದಂತೆ ಕಾರ್ತೀಕ ಮಾಸದ ಕಡೆಯ ಸೋಮವಾರ (ನ.16) ಬಸವನಗುಡಿಯಲ್ಲಿ ಕಡಲೆಕಾಯಿ ಪರಿಷೆ ನಡೆಯಲಿದೆ. ಸೋಮವಾರ ಬೆಳಗ್ಗೆ 10ಗಂಟೆಗೆ ಸಂಸದ ಅನಂತಕುಮಾರ್ ಮತ್ತು ಸಾರಿಗೆ ಸಚಿವ ಆರ್.ಅಶೋಕ್ ಅವರು ಕಡಲೆಕಾಯಿ ಜಾತ್ರೆಗೆ ಚಾಲನೆ ನೀಡಲಿದ್ದಾರೆ.

ಸಮಾರಂಭದ ಅಧ್ಯಕ್ಷತೆಯನ್ನು ಶಾಸಕ ಎಲ್.ಎ.ರವಿಸುಬ್ರಹ್ಮಣ್ಯ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಸಚಿವ ಕಟ್ಟಾ ಸುಬ್ರಹ್ಮಣ್ಯ ನಾಯ್ಡು, ಶಾಸಕರಾದ ಬಿ.ಎನ್.ವಿಜಯಕುಮಾರ್, ಡಾ.ಪ್ರೇಮಚಂದ್ರ ಸಾಗರ್, ಎಂಎಲ್ ಸಿಗಳಾದ ಪ್ರೊ.ಎಂ.ಆರ್.ದೊರೆಸ್ವಾಮಿ, ಡಾ.ದೊಡ್ಡರಂಗೇಗೌಡ, ಡಾ.ಎಸ್.ಆರ್.ಲೀಲಾವತಿ ಮತ್ತಿತರರು ಭಾಗವಹಿಸಿದಲಿದ್ದಾರೆ.

ಸಂಜೆ 6ಗಂಟೆಗೆ ಟಿ.ಆರ್.ಶಾಮಣ್ಣ ಉದ್ಯಾನವನದಲ್ಲಿ(ಬ್ಯೂಗಲ್ ರಾಕ್) ವಿದ್ಯಾಶಂಕರ್ ಮತ್ತು ಶಿಷ್ಯ ವೃಂದದಿಂದ ಸಪ್ತ ಮಾತೃಕಾ ನೃತ್ಯ ರೂಪಕ ಹಾಗೂ ನಂದಿನಿ ವಿಜಯವಿಠಲ ಮತ್ತ್ತು ತಂಡದವರಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.

ನ.7ರಂದು ಸಂಜೆ ಆರು ಗಂಟೆಗೆ ಶ್ರೀನಗರದ ಮದ್ದೂರಮ್ಮ ಆಟದ ಮೈದಾನದಲ್ಲಿ ಲಯತರಂಗ ತಂಡದವರಿಂದ ವಾದ್ಯ ಸಂಗೀತ, ಕತ್ರಿಗುಪ್ಪೆಯ ಕೆ.ಎಸ್.ನರಸಿಂಹಸ್ವಾಮಿ ಉದ್ಯಾನದಲ್ಲಿ ವಿದುಷಿ ಶೋಭಾ ನಾಗರಾಜ್ ಅವರಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ ಹಾಗೂ ದೇವರನಾಮ ಗಾಯನ ನಡೆಯಲಿದೆ.

ಬಾದಾಮಿ, ಗೋಡಂಬಿ ತಿನ್ನಲು ಸಾಧ್ಯವಾಗದ ಬಡವರಿಗೆ ಕಡಲೇಕಾಯಿಯೇ ಬಾದಾಮಿ - ಗೋಡಂಬಿ ಎಲ್ಲ. ಹೀಗಾಗೇ ಇದಕ್ಕೆ ಬಡವರ ಬಾದಾಮಿ ಎಂಬ ಹೆಸರು. ಕಡಲೇಕಾಯಿ ತಿನ್ನುತ್ತಾ, ಚುಮುಚುಮು ಚಳಿಯಲ್ಲಿ ಗೆಳೆಯರೊಂದಿಗೆ ಹರಟೆಹೊಡೆಯುತ್ತಾ ಬಸವನಗುಡಿಯಲ್ಲಿ ಅಲೆಯುವುದೇ ಒಂದು ಮಜಾ... ನೀವು ಪರಿಷೆಗೆ ಬರುತ್ತೀರಾ ತಾನೆ?

(ದಟ್ಸ್ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X