ಎಚ್1ಎನ್1 : ಗುಣಮುಖರಾದ ನರೇಂದ್ರ ಮೋದಿ
ನವದೆಹಲಿ,
ನ. 4 : ಎಚ್1ಎನ್1 ಸೋಂಕಿನಿಂದ ಕೊನೆಗೂ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಮುಕ್ತರಾಗಿದ್ದಾರೆ. ಕಳೆದ ವಾರ ವಿದೇಶಿ ಪ್ರಯಾಣದಿಂದ ಹಿಂತಿರುಗಿದ್ದ ಮೋದಿಗೆ ಎಚ್ 1ಎನ್ 1 ಸೋಂಕು ಕಾಣಿಸಿಕೊಂಡಿತ್ತು. id="toptextpromo">ರಷ್ಯಾ
ಪ್ರಯಾಣ ಮುಗಿಸಿ ಸ್ವದೇಶಕ್ಕೆ ವಾಪಾಸ್ಸಾಗಿದ್ದ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಅವರಿಗೆ ಎಚ್1ಎನ್1 ಸೋಂಕಿರುವುದು ದೃಢಪಟ್ಟಿತ್ತು. ಕಳೆದೆರಡು ದಿನಗಳಿಂದ ತೀವ್ರ ಜ್ವರ, ಕೆಮ್ಮು, ನೆಗಡಿ ಮತ್ತು ಆಯಾಸದಿಂದ ಬಳಲುತ್ತಿದ್ದ ಮೋದಿ ಅವರ ರಕ್ತ ತಪಾಸಣೆ ನಡೆಸಿದಾಗ ಎಚ್1ಎನ್1 ಸೋಂಕಿರುವುದು ಪತ್ತೆಯಾಗಿತ್ತು. ಮೋದಿ ಅವರಿಗೆ ಅವರ ನಿವಾಸದಲ್ಲಿ ಚಿಕಿತ್ಸೆ ನೀಡಲಾಗಿದ್ದು, ಇದೀಗ ಸಂಪೂರ್ಣ ಗುಣಮುಖರಾಗಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ. id='are-slot-1' class='oiad oi-axt oiadv'> id='top-searched-articles'>(ಏಜನ್ಸೀಸ್)












Click it and Unblock the Notifications