ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿಮಾನಕ್ಕೆ ಹುಸಿ ಬಾಂಬ್ ಇಟ್ಟ ಇನ್ಫಿ ಟೆಕ್ಕಿ

|
Google Oneindia Kannada News

 Infosys techie raises bomb scare on GoAir flight, arrested
ನವದೆಹಲಿ, ಅ. 26 : ಇತ್ತೀಚಿನ ದಿನಗಳಲ್ಲಿ ಪ್ರಯಾಣಿಕರಲ್ಲಿ ಭಯಾನಕ ಪ್ರವೃತ್ತಿಯೊಂದು ಕಾಣಿಸಿಕೊಳ್ಳತೊಡಗಿದೆ. ಕೆಲಸದ ಒತ್ತಡದಲ್ಲಿರುವುದರಿಂದ ರೈಲ್ವೆ, ವಿಮಾನ ನಿಲ್ದಾಣಕ್ಕೆ ನಿಗದಿತ ಸಮಯಕ್ಕೆ ತಲುಪದಿದ್ದರೆ, ತಕ್ಷಣ ಸಂಬಂಧಿಸಿದ ಇಲಾಖೆಗೆ ದೂರವಾಣಿ ಮಾಡಿ ಬಾಂಬ್ ಇದೆ ಎಂದು ಭಯ ಹುಟ್ಟಿಸುವ ಕೆಲಸ ಆರಂಭವಾಗಿದೆ.

ಇತ್ತೀಚೆಗೆ ಮುಂಬೈ ಮೂಲದ ವೈದ್ಯನೊಬ್ಬ ಕೆಲಸದ ಒತ್ತಡದಿಂದ ವಿಮಾನ ನಿಲ್ದಾಣಕ್ಕೆ ಸಮಯ ಸರಿಯಾಗಿ ಬರಲು ಸಾಧ್ಯವಾಗದಿದ್ದರಿಂದ ವಿಮಾನದಲ್ಲಿ ಬಾಂಬ್ ಇದೆ ಎಂಬ ಹುಸಿ ಕರೆ ಮಾಡಿ ಪೊಲೀಸರ ಅತಿಥಿಯಾಗಿರುವ ಘಟನೆ ಬೆಂಗಳೂರಿನಲ್ಲಿ ನಡೆದಿತ್ತು. ಇದರ ಬೆನ್ನಲ್ಲೇ ಬೆಂಗಳೂರಿನ ಇನ್ಫೋಸಿಸ್ ನಲ್ಲಿ ಸಾಫ್ಟ್ ವೇರ್ ಇಂಜಿನಿಯರ್ ಆಗಿರುವ ವ್ಯಕ್ತಿಯೊಬ್ಬ ವಿಮಾನದಲ್ಲಿ ಬಾಂಬ್ ಇರಿಸಲಾಗಿದೆ ಎಂದು ಹುಸಿ ಕರೆ ಮಾಡಿ ಪೊಲೀಸರ ಅತಿಥಿಯಾದ ಘಟನೆ ನವದೆಹಲಿಯಲ್ಲಿ ಭಾನುವಾರ ನಡೆದಿದೆ.

ಅಭಿಷೇಕ್ ಗುಪ್ತಾ (25) ವಿಮಾನದಲ್ಲಿ ಬಾಂಬ್ ಇದೆ ಎಂದು ಹುಸಿ ಕರೆ ಮಾಡಿರುವ ಭೂಪ. ಲಖನೌದಲ್ಲಿದ್ದ ಈತ ರೈಲಿನಲ್ಲಿ ದೆಹಲಿಗೆ ಬರಬೇಕಿತ್ತು. ಆ ಬಳಿಕ ವಿಮಾನದಲ್ಲಿ ಬೆಂಗಳೂರು ತಲುಪಬೇಕಿತ್ತು. ಲಖನೌ ರೈಲು ಬೆಳಗ್ಗೆ 6 ಗಂಟೆಗೆ ತಲುಪುತ್ತದೆ. ಬೆಳಗ್ಗೆ 8.45ಕ್ಕೆ ದಿಲ್ಲಿಯಿಂದ ಬೆಂಗಳೂರಿಗೆ ಗೋ ಏರ್ ವಿಮಾನ ಸೇವೆ ಇದೆ. ಅಭಿಷೇಕ್ ಪ್ರಯಾಣ ನಿಗದಿಪಡಿಸಿಕೊಂಡಿದ್ದ. ಆದರೆ, 6ಕ್ಕೆ ದಿಲ್ಲಿ ತಲುಪಬೇಕಿದ್ದ ರೈಲು ಆಗಮನ ವಿಳಂಬವಾಗಿದೆ.

ತಾನು ವಿಮಾನ ನಿಲ್ದಾಣಕ್ಕೆ ಹೋಗುವಷ್ಟರಲ್ಲಿ ಗೋ ಏರ್ ವಿಮಾನ ಹಾರಿಹೋಗುತ್ತದೆ ಎನ್ನುವುದನ್ನು ಅರಿತ ಅಭಿಷೇಕ್ ವಿಮಾನಯಾನ ಸಂಸ್ಥೆಯ ಕಾಲ್ ಸೆಂಟರ್ ಗೆ ಫೋನಾಯಿಸಿ ವಿಳಂಬದ ಬಗ್ಗೆ ವಿವರಿಸಿದ್ದಾನೆ. ಮೊದಲ ವಿಮಾನದ ಬದಲಿಗೆ ಎರಡನೇ ವಿಮಾನದಲ್ಲಿ ಬೆಂಗಳೂರಿಗೆ ಕಳುಹಿಸಲು ವ್ಯವಸ್ಥೆ ಮಾಡಿ ಎಂದ ಕೇಳಿದ, ಗೋ ಏರ್ ಸಿಬ್ಬಂದಿ ಅದನ್ನು ತಿರಸ್ಕರಿಸಿದೆ. ಹೀಗಾಗಿ ಇನ್ನೊಂದು ಸಾರಿ ಕಾಲ್ ಸೆಂಟರ್ ಗೆ ಫೋನ್ ಮಾಡಿ ವಿಮಾನದಲ್ಲಿ ಬಾಂಬ್ ಇದೆ ಎಂದು ಹುಸಿ ಕರೆ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಅಭಿಷೇಕ್ ನನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದಾರೆ.

(ಏಜನ್ಸೀಸ್)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X