ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ತ್ಯಾಜ್ಯ ವಿಲೇವಾರಿಗೆ ಉಚಿತ ಸಹಾಯವಾಣಿ

|
Google Oneindia Kannada News

Bharat lal meena
ಬೆಂಗಳೂರು, ಅ. 25: ಪರಿಸರ ಮಾಲಿನ್ಯ, ಕುಂಠಿತವಾಗಿರುವ ರಸ್ತೆ ದುರಸ್ತಿ ಕಾಮಗಾರಿ, ಪ್ಲಾಸ್ಟಿಕ್ ತ್ಯಾಜ್ಯ ನಿರ್ವಹಣೆ, ಟ್ರಾಫಿಕ್ ಸಮಸ್ಯೆ ಹೀಗೆ ವಿವಿಧ ವಿಷಯಗಳನ್ನು ಕುರಿತ ಅನೇಕಾನೇಕ ಪ್ರಶ್ನೆಗಳ ಬಾಣವನ್ನು ಬಿಬಿಎಂಪಿ ಆಯುಕ್ತ ಭರತ್ ಲಾಲ್ ಮೀನಾ ಅವರು ಎದುರಿಸಬೇಕಾಯಿತು. ಮಹಾನಗರಪಾಲಿಕೆ ಸಹಭಾಗಿತ್ವದಲ್ಲಿ ಮಲ್ಲೇಶರಂನ ಮಹಾರಾಣಿ ಲಕ್ಷ್ಮೀ ಅಮ್ಮಣ್ಣಿ ಕಾಲೇಜು ಶನಿವಾರ ಆಯೋಜಿಸಿದ್ದ ಪರಿಸರ ಮತ್ತು ಪೌರಸಮಸ್ಯೆಗಳ ಕುರಿತ, ವಿದ್ಯಾರ್ಥಿನಿಗಳೊಂದಿಗಿನ ಸಂವಾದ ಕಾರ್ಯಕ್ರಮವಿತ್ತು.

ನಗರದ ಎಲ್ಲಾ ಪ್ರದೇಶಗಳಲ್ಲಿ ಪೂರ್ಣಪ್ರಮಾಣದ ಸ್ವಚ್ಛತೆ ಕಾಪಾಡುವ ನಿಟ್ಟಿನಲ್ಲಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ 24/7 ತಾಸುಗಳ ಉಚಿತ ಸಹಾಯವಾಣಿಯೊಂದನ್ನು ಆರಂಭಿಸಿದ್ದು, ನಗರದ ಯಾವ ಭಾಗದಲ್ಲಾದರೂ ಸ್ವಚ್ಛತೆಗೆ ಅಡ್ಡಿಯುಂಟುಮಾಡುವ ತ್ಯಾಜ್ಯ ವಸ್ತುಗಳ ರಾಶಿ, ಅಥವಾ ಪಾಲಿಕೆ ಅಧಿಕಾರಿಗಳ ನಿರ್ಲಕ್ಷ್ಯ ಕಂಡುಬಂದಲ್ಲಿ ದೂ.080-22660000/22221188ಗೆ ಕರೆ ಮಾಡಿ ದೂರು ದಾಖಲಿಸಿದರೆ ಕೆಲವೇ ತಾಸುಗಳಲ್ಲಿ ಸಮಸ್ಯೆ ಇತ್ಯರ್ಥಗೊಳ್ಳುತ್ತದೆ.ಎಂದು ಪಾಲಿಕೆ ಆಯುಕ್ತ ಭರತ್‌ಲಾಲ್ ಮೀನಾ ತಿಳಿಸಿದರು.

ಭವಿಷ್ಯದಲ್ಲಿ ಉದ್ಯಾನಗರಿ ಬೆಂಗಳೂರನ್ನು ಸ್ವಚ್ಛತೆಯ ಮಾದರಿ ನಗರವನ್ನಾಗಿ ಪರಿವರ್ತಿಸುವ ಸಲುವಾಗಿ ಈ ಸಂಖ್ಯೆಯನ್ನು ಕಾರ್ಯರೂಪಕ್ಕೆ ತರಲಾಗಿದೆ. ನಗರಾಭಿವೃದ್ಧಿಗೆ ರಾಜ್ಯ ಸರ್ಕಾರ 22 ಸಾವಿರ ಕೋಟಿ ರು ಮಂಜೂರು ಮಾಡಿದೆ. ಅದರ ಸದುಪಯೋಗ ಆಗುವ ಯೋಜನೆಗಳು ಸಿದ್ಧವಿದೆ ಎಂದರು. ನಗರದ ಯಾವುದೇ ಪ್ರದೇಶಗಳಲ್ಲಿ ತ್ಯಾಜ್ಯ ವಸ್ತುಗಳು ಕಂಡು ಬಂದರೆ ಈ ಎರಡೂ ಸಹಾಯವಾಣಿಗೆ ದೂರು ನೀಡಬಹುದು. ದಿನದ 24 ತಾಸುಗಳಲ್ಲಿ ಇವು ಕಾರ್ಯರೂಪದಲ್ಲಿರುತ್ತವೆ. ಸಕಾಲದಲ್ಲಿ ಇವು ದೊರೆಯದಿದ್ದ ಪಕ್ಷದಲ್ಲಿ ನನ್ನ ಮೊಬೈಲ್ ಸಂಖ್ಯೆಗೂ ಸಂದೇಶ ರವಾನಿಸುವ ವ್ಯವಸ್ಥೆಯನ್ನು ಶೀಘ್ರವೇ ಕಲ್ಪಿಸಲಾಗುವುದು ಎಂದರು. ರಾಜ್ಯ ಪತ್ರಿಕೋದ್ಯಮ ಹಾಗೂ ಸಂವಹನ ಶಿಕ್ಷಕರ ಒಕ್ಕೂಟದ ಅಧ್ಯಕ್ಷ ಡಾ.ಬಿ.ಕೆ.ರವಿ, ಕಾಲೇಜಿನ ಪದವಿ ವಿಭಾಗದ ಪ್ರಾಂಶುಪಾಲರಾದ ಕೆ.ಎಸ್.ಭಾರತಿ, ಮತ್ತು ಪದವಿಪೂರ್ವ ವಿಭಾಗದ ಪ್ರಾಂಶುಪಾಲರಾದ ಅನುರಾಧ ಉಪಸ್ಥಿತರಿದ್ದರು.

(ಏಜೆನ್ಸೀಸ್)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X