ಮಹಾರಾಷ್ಟ್ರ, ಗೆದ್ದ 'ಪಂಚ ಕನ್ನಡಿಗರು'

ಮಹಾರಾಷ್ಟ್ರದ ಅಧಿಕಾರ ಚುಕ್ಕಾಣಿ ಹಿಡಿಯಬೇಕು ಎನ್ನುವ ಬಿಜೆಪಿ-ಶಿವಸೇನೆಯ ಕನಸು ಮತ್ತೊಮ್ಮೆ ನುಚ್ಚುನೂರಾಗಿದೆ. ಆಡಳಿತರೂಢ ಕಾಂಗ್ರೆಸ್ ಪಕ್ಷ ಮತ್ತೆ ಪಾರಮ್ಯ ಮರೆದಿದೆ. ಸತತ ಮೂರನೇ ಬಾರಿ ಕಾಂಗ್ರೆಸ್ ಪಕ್ಷ ಮಹಾರಾಷ್ಟ್ರದ ಗದ್ದುಗೆ ಏರಿದಂತಾಗಿದೆ. ಆದರೆ, ಈ ಸಲದ ವಿಶೇಷವೆಂದರೆ ಮಹಾರಾಷ್ಟ್ರ ವಿಧಾನಸಭೆಗೆ ಐವರು ಕನ್ನಡಿಗರು ಪ್ರವೇಶ ಪಡೆದಿರುವುದು ಸಂತಸದ ಸಂಗತಿ. ಈ ಪೈಕಿ ನಾಲ್ವರು ಉಡುಪಿ ಜಿಲ್ಲೆಯವರಾಗಿದ್ದಾರೆ.
1. ಸುರೇಶ್ ಶೆಟ್ಟಿ
ಪಕ್ಷ - ಕಾಂಗ್ರೆಸ್
ಕ್ಷೇತ್ರ - ಅಂಧೇರಿ ಪೂರ್ವ
ಮಹಾರಾಷ್ಟ್ರ ಸರಕಾರದಲ್ಲಿ ವೈದ್ಯಕೀಯ ಶಿಕ್ಷಣ ಸಚಿವರಾಗಿ ಸೇವೆ ಸಲ್ಲಿಸುತ್ತಿರುವ ಇವರು ಮೂಲತಃ ಉಡುಪಿ ಜಿಲ್ಲೆಯ ಮಣಿಪಾಲದವರು. 2004ರ ವಿಧಾನಸಭಾ ಚುನಾವಣೆಯಲ್ಲಿ ಇದೇ ಕ್ಷೇತ್ರದಿಂದ ಆಯ್ಕೆಯಾಗಿದ್ದರು.
2. ಜಗನ್ನಾಥ್ ಶೆಟ್ಟಿ
ಪಕ್ಷ - ಕಾಂಗ್ರೆಸ್
ಕ್ಷೇತ್ರ - ಸಯಾನ್ ಕೋಲಿವಾಡ
ಉಡುಪಿ ಜಿಲ್ಲೆ ಕಾಪುವಿನವರಾದ ಜಗನ್ನಾಥ್ ಈ ಕ್ಷೇತ್ರದಿಂದ ಸತತ ಎರಡನೇ ಬಾರಿ ಆಯ್ಕೆಯಾಗಿದ್ದಾರೆ.
3. ಕೃಷ್ಣ ಹೆಗ್ಡೆ
ಪಕ್ಷ - ಕಾಂಗ್ರೆಸ್
ಕ್ಷೇತ್ರ - ಪೂರ್ವ ವಿಲೆಪಾರ್ಲೆ
ಮುಂಬೈನ ಮಾಜಿ ಮೇಯರ್ ಮತ್ತು ಶಿವಸೇನೆಯ ಮಾಜಿ ಶಾಸಕ ರಮೇಶ್ ಪ್ರಭು ಅವರ ಅಳಿಯರಾಗಿರುವ ಕೃಷ್ಣ ಹೆಗ್ಡೆ, ಉಡುಪಿ ಜಿಲ್ಲೆ ಕಾರ್ಕಳ ತಾಲೂಕಿನವರು.
4. ಗೋಪಾಲ್ ಶೆಟ್ಟಿ
ಪಕ್ಷ - ಬಿಜೆಪಿ
ಕ್ಷೇತ್ರ - ಬೋರಿವಲಿ
ಈ ಕ್ಷೇತ್ರದಿಂದ ಎರಡನೇ ಬಾರಿಗೆ ಆಯ್ಕೆಯಾಗುತ್ತಿರುವ ಇವರು ಉಡುಪಿ ಜಿಲ್ಲೆ ಪಡುಬಿದ್ರೆ ಮೂಲದವರು. ಮುಂಬೈ ಮಹಾನಗರಿಯ ಉಪಮೇಯರ್ ಆಗಿದ್ದ ಏಕೈಕ ಕನ್ನಡಿಗ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದವರು.
5. ಗಿಲ್ಬರ್ಟ್ ಜಾನ್ ಮೆಂಡೋನಾ
ಪಕ್ಷ - ಎನ್ಸಿಪಿ
ಕ್ಷೇತ್ರ - ಮೀರಾ ಭಯಂದರ್
ಮಿನಿ ಮಂಗಳೂರು ಎಂದೇ ಖ್ಯಾತಿಯಾಗಿರುವ ಮೀರಾ ರಸ್ತೆ ಈ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುತ್ತದೆ. ತುಳು, ಕನ್ನಡಿಗ ಮತ್ತು ಕೊಂಕಣಿ ಜನರೊಂದಿಗೆ ಮೆಂಡೋನಾ ಉತ್ತಮ ಸಂಬಂಧಹೊಂದಿದ್ದಾರೆ.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications