ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹೆಣ್ಣೂರಿಗೆ ಬಿಡಿಎ ಬುಲ್ಡೋಜರ್,ಆಸ್ತಿ ವಶ

|
Google Oneindia Kannada News

BDA demolition operation Hennuru Banaswadi
ಬೆಂಗಳೂರು, ಅ. 22 : ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು ತನ್ನ ಆಸ್ತಿಯನ್ನು ಮರುವಶಪಡಿಸಿಕೊಳ್ಳುವ ಮುಂದುವರೆದ ಕಾರ್ಯಾಚರಣೆಯಲ್ಲಿ ಇಂದು ಹೆಣ್ಣೂರಿಗೆ ಬುಲ್ ಡೋಜರುಗಳನ್ನು ತೆಗೆದುಕೊಂಡು ಹೋಗಿತ್ತು. ನೋಡುವುದಕ್ಕೆ ಡೈನೋಜರ್ ರೀತಿ ಕಾಣಿಸುವ , ಕಟ್ಟಡಗಳನ್ನು ಕ್ಷಣಾರ್ಧದಲ್ಲಿ ನುಂಗಿ ನೀರು ಕುಡಿಯುವ ಈ ಬಿಡಿಎ ದೈತ್ಯ ಪ್ರತಿದಿನ ನಗರದಲ್ಲಿ ಒಂದಲ್ಲ ಒಂದು ಕಡೆ ಆಹಾರ ಹುಡುಕಿ ಹೋಗುವುದು ವಾಡಿಕೆ.

ಹೆಣ್ಣೂರಿನಲ್ಲಿ ಅಕ್ರಮವಾಗಿ ಮನೆ ನಿರ್ಮಿಸಿದ್ದ ಸುಮಾರು 61,500 ಚದರ ಅಡಿ (ಬೆಲೆ ಸುಮಾರು 30 ಕೋಟಿ ರೂ) ಆಸ್ತಿಯನ್ನು ಬಿಡಿಎ ವಶಪಡಿಸಿಕೊಂಡಿತು. ಹೆಣ್ಣೂರು ಬಾಣಸವಾಡಿ ಬಡಾವಣೆ ನಿರ್ಮಾಣಕ್ಕಾಗಿ ಗ್ರಾಮದ ಸರ್ವೆ ನಂ.46 ಮತ್ತು 56 ರಲ್ಲಿದ್ದ ಒಂದು ಎಕರೆ ಆರು ಗುಂಟೆ ಪ್ರದೇಶದಲ್ಲಿ ಅಕ್ರಮ ನಿರ್ಮಾಣಗಳು ತಲೆಯೆತ್ತಿದ್ದವು.

ಆರ್.ಸಿ.ಸಿ. ಮನೆ, ಒಂಬತ್ತು ತಾತ್ಕಾಲಿಕ ಶೆಡ್‌ಗಳು ಹಾಗೂ ಕಾಂಪೌಂಡ್ ಗೋಡೆಯನ್ನು ಇಂದು ಮುಂಜಾನೆ ನಡೆಸಿದ ಕಾರ್ಯಾಚರಣೆಯಲ್ಲಿ ನೆಲಸಮಗೊಳಿಸಲಾಯಿತು. ವಶಪಡಿಸಿಕೊಂಡ ಪ್ರದೇಶಕ್ಕೆ ತಂತಿ ಬೇಲಿ ಹಾಕಿ ಭದ್ರಪಡಿಸಲಾಯಿತು. ಈ ಕಾರ್ಯಾಚರಣೆಯನ್ನು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಹಾಗೂ ಎಸ್ಟೇಟ್ ಅಧಿಕಾರಿಗಳು ಹಾಗೂ ಸ್ಥಳೀಯ ಪೊಲೀಸ್ ಬೆಂಗಾವಲಿನಲ್ಲಿ ಕೈಗೊಳ್ಳಲಾಯಿತು.

ಸಾರ್ವಜನಿಕ ಸಂಪರ್ಕಾಧಿಕಾರಿ
ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ
ಬೆಂಗಳೂರು 560 020

ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ
ಟಿ.ಚೌಡಯ್ಯ ರಸ್ತೆ, ಕುಮಾರಪಾರ್ಕ್ ಪಶ್ಚಿಮ, ಬೆಂಗಳೂರು
ದೂ:080-2346 4064, ಫ್ಯಾಕ್ಸ್: 080-2356 7210
ಇಮೇಲ್ : [email protected]

(ದಟ್ಸ್ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X