ಹೆಚ್ಚುವರಿ ಕೆಲಸ ಮಾಡಲ್ಲ : ಭೈರಪ್ಪ

ಸರಕಾರದ ಸುತ್ತೊಲೆಯನ್ನು ಖಂಡಿಸಿರುವ ಸರಕಾರಿ ನೌಕರರು ಯಾವುದೇ ಕಾರಣಕ್ಕೂ ಹೆಚ್ಚುವರಿಯಾಗಿ ಕೆಲಸ ಮಾಡಲು ಸಾಧ್ಯವಿಲ್ಲ ಎಂದು ಖಡಾಖಂಡಿತವಾಗಿ ಹೇಳಿದ್ದಾರೆ. ಈ ಮಧ್ಯೆ ಸ್ಪಷ್ಟನೆ ನೀಡಿರುವ ಯಡಿಯೂರಪ್ಪ ಹೆಚ್ಚುವರಿ ಕೆಲಸ ಮಾಡುವಂತೆ ನೌಕರರ ಮೇಲೆ ಯಾವುದೇ ಒತ್ತಡ ಹೇರುವುದಿಲ್ಲ. ಭೀಕರ ಪ್ರವಾಹಕ್ಕೆ ತುತ್ತಾಗಿರುವ ಪ್ರದೇಶಗಳ ಲಕ್ಷಾಂತರ ಜನಕ್ಕೆ ಪುನರ್ವಸತಿ ಸವಾಲಿನ ಕೆಲಸದಲ್ಲಿ ಸರಕಾರಿ ನೌಕರರು ಸ್ವಯಂಪ್ರೇರಿತರಾಗಿ ಸರಕಾರದ ಜೊತೆಗೆ ಕೈಜೋಡಿಸಬೇಕು ಎಂದು ಮನವಿ ಮಾಡಿದ್ದಾರೆ.
ಈ ಬಗ್ಗೆ ಇಂದು ಮುಖ್ಯ ಕಾರ್ಯದರ್ಶಿ ಎಸ್ ವಿ ರಂಗನಾಥ್ ಅವರು ಸರಕಾರಿ ನೌಕರರ ಸಂಘದ ಪದಾಧಿಕಾರಿಗಳೊಂದಿಗೆ ಮಾತುಕತೆ ನಡೆಸುವ ಸಾಧ್ಯತೆ ಇದೆ. ಬೆಂಗಳೂರು, ಮೈಸೂರು ಸೇರಿದಂತೆ ಮತ್ತಿತರ ನಗರ ಪ್ರದೇಶಗಳ ಸರಕಾರಿ ನೌಕರರು ಪರಸ್ಥಳದಿಂದ ಬಂದು ಕೆಲಸ ಮಾಡಿ ಹೋಗುತ್ತಾರೆ. ಸರಕಾರ ಬೆಳಗ್ಗೆ 9 ಗಂಟೆಗೇ ಕಚೇರಿ ಆರಂಭಿಸಿದರೆ ದೂರದ ಊರುಗಳಿಂದ ಅವರು ಬರಲು ಸಾಧ್ಯವೇ. ಹೀಗಾಗಿ ಸರಕಾರ ಈ ಪ್ರಸ್ತಾವನೆಯನ್ನು ಕೈಬಿಡಬೇಕು ಎಂದು ಸಂಘದ ಅಧ್ಯಕ್ಷ ಭೈರಪ್ಪ ಒತ್ತಾಯಿಸಿದ್ದಾರೆ.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications