ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

2012ರ ಪ್ರಳಯ ಶುದ್ಧ ಸುಳ್ಳು : ನಾಸಾ

|
Google Oneindia Kannada News

David Marrison
ವಾಷಿಂಗ್ ಟನ್, ಅ. 15 : 2009 ರಿಂದ 2012ರ ವರೆಗೆ ವಿಶ್ವದಲ್ಲಿ ಪ್ರಳಯಾಂತಕಾರಿ ಘಟನೆಗಳು ನಡೆದು 2012 ಡಿಸೆಂಬರ್ 21ಕ್ಕೆ ಜಗತ್ತು ಸರ್ವನಾಶ ಹೊಂದಲಿದೆ ಎಂಬ ಹೇಳಿಕೆ ಬರೀ ಬೊಗಳೆ. ಇಂತಹ ಅರ್ಥವಿಲ್ಲದ ಹೇಳಿಕೆಗಳಿಗೆ ಕಿವಿಗೊಡಬೇಡಿ. 2012 ರಲ್ಲಿ ಅಂತಹ ಯಾವುದೇ ಘಟನೆಗಳು ನಡೆಯಲು ಸಾಧ್ಯವಿಲ್ಲ ಎಂದು ನಾಸಾ ಸ್ಪಷ್ಟಪಡಿಸಿದೆ.

2012 ರ ಡಿಸೆಂಬರ್ 21 ರಂದು ಪ್ರಳಯವಾಗಲಿದೆ. ಇಡೀ ವಿಶ್ವವೇ ಸರ್ವನಾಶವಾಗಲಿದೆ ಎಂಬ ಹೇಳಿಕೆಯನ್ನು 'ಕಾಲಜ್ಞಾನಿ' ನಾಸ್ಟ್ರಡಾಮಸ್ ಹೇಳಿರುವುದು ಪತ್ರಿಕೆಗಳಲ್ಲಿ ವರದಿಯಾಗಿತ್ತು. ಪ್ರಳಯಾಂತಕಾರಿ ಘಟನೆಗಳು ಸಂಭವಿಸಬಹುದು. ಪರಿಸರ ನಾಶ, ಜಾಗತಿಕ ತಾಪಮಾನದ ಹೆಚ್ಚಳ, ಹೊಸ ರೋಗಗಳು, ದೇಶಗಳ ಅಣ್ವಸ್ತ್ರ ದಾಹ, ಯುದ್ಧ ದಾಹ ಇವುಗಳನ್ನೆಲ್ಲ ಗಮನಿಸಿದರೆ ಸನಿಹದಲ್ಲೇ ಭಾರೀ ಕೇಡುಗಾಲ ಇದೇ ಎಂಬ ಅನುಮಾನ ಬರುವುದು ಸಹಜ. ಆದರೆ, ಇಡೀ ವಿಶ್ವವೇ ನಾಶವಾಗಲಿದೆ ಎನ್ನುವುದು ಸಂಗತಿ ಎಲ್ಲರೂ ಒಪ್ಪಿಲ್ಲ. ಆದರೆ, ಭಯವನ್ನಂತೂ ಹುಟ್ಟಿಸಿದ್ದು ನಿಜ.

ಇದೇ ವಿಷಯಕ್ಕೆ ಸಂಬಂಧಿಸಿದಂತೆ ನಾಸಾ ಕಚೇರಿಗೂ ಈಮೇಲ್ ಗಳು, ದೂರವಾಣಿಗಳು ಕರೆ ಬಂದಿವೆ. ಇದಕ್ಕೆ ಸ್ಪಷ್ಟನೆ ನೀಡಿರುವ ನಾಸಾ ವಿಜ್ಞಾನಿ ಡೆವಿಡ್ ಮಾರಿಸನ್, 2012 ರಲ್ಲಿ ವಿಶ್ವವೇ ನಾಶವಾಗಲಿದೆ ಎಂಬ ಹೇಳಿಕೆಯಲ್ಲಿ ಅರ್ಥವಿಲ್ಲ. ಇದು ಪ್ರಚಾರಕ್ಕಾಗಿ ಮಾಡಿಕೊಂಡಿರುವ ಶುದ್ಧ ಬೊಗಳೆ ಕೆಲಸ. 2012ರ ಕುರಿತು ಅನೇಕ ಉಹಾಪೋಹಗಳು ಇಂಟೆರ್ನೆಟ್, ಪತ್ರಿಕೆ ಹಾಗೂ ಟಿವಿಗಳಲ್ಲಿ ಪ್ರಸಾರವಾಗುತ್ತಿವೆ. ತಿಳುವಳಿಕೆ ಕೊರತೆಯಿಂದ ಸಾರ್ವಜನಿಕರಿಗೆ ಭಯ ಹುಟ್ಟಿಸುವ ಕೆಲಸ ನಡೆದಿದೆ. ಆದರೆ, ಒಂದಂತೂ ಸ್ಪಷ್ಟ ಯಾವ ಕಾರಣಕ್ಕೂ ಪ್ರಳಯವಾಗಲಿ, ಸರ್ವನಾಶವಾಗಲಿ ನಡೆಯಲು ಸಾಧ್ಯವಿಲ್ಲ ಎಂದು ಖಡಾಖಂಡಿತವಾಗಿ ಅವರು ಸ್ಪಷ್ಟಪಡಿಸಿದ್ದಾರೆ.

(ಏಜೆನ್ಸೀಸ್)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X