ಪಾಕ್ ನಿಂದ ಅಕ್ರಮ ನುಸುಳುವಿಕೆ ಹೆಚ್ಚಿದೆ : ಚಿದು

ಮಂಗಳವಾರ ಜಮ್ಮು ಕಾಶ್ಮೀರ ಪ್ರವಾಸ ಕೈಗೊಂಡಿರುವ ಅವರು, ಸರಕಾರ ಇದನ್ನು ಗಂಭೀರವಾಗಿ ಪರಿಗಣಿಸಿದ್ದು, ಈ ಚಳಿಗಾಲ ಆರಂಭವಾಗುವುದರೊಳಗೆ ಅಕ್ರಮ ನುಸುಳುವಿಕೆಗೆ ಸಂಪೂರ್ಣ ಕಡಿವಾಣ ಹಾಕಲಾಗುವುದು ಎಂದು ಪತ್ರಿಕಾಗೋಷ್ಠಿಯಲ್ಲಿ ಹೇಳಿದರು. ಪಾಕ್ ಬೆಂಬಲಿತ ವ್ಯಕ್ತಿಗಳು ಭಾರತದೊಳಗೆ ನುಗ್ಗಿ ಶಾಂತಿ ಕದಡುವ ಯತ್ನಕ್ಕೆ ಕೈಹಾಕಲು ಯತ್ನಿಸುತ್ತಿದ್ದಾರೆ. ಆದರೆ, ಅಂತಹ ಕೃತ್ಯಗಳನ್ನು ಸಮರ್ಥವಾಗಿ ಎದುರಿಸಲು ಸರಕಾರ ಸಿದ್ದವಾಗಿದೆ ಎಂದು ಚಿದಂಬರಂ ವಿಶ್ವಾಸ ವ್ಯಕ್ತಪಡಿಸಿದರು.
ಅರುಣಾಚಲ ಪ್ರದೇಶ ಭಾರತದ ಅವಿಭಾಜ್ಯ ಅಂಗ. ಚೀನಾ ಹೇಳಿಕೆ ದುರದೃಷ್ಟಕರ ಎಂದರು. ಚುನಾವಣಾ ಪ್ರಚಾರಕ್ಕೆಂದು ತೆರಳಿದ್ದ ಪ್ರಧಾನಮಂತ್ರಿ ಮನಮೋಹನ್ ಸಿಂಗ್ ಅವರ ಭೇಟಿಗೆ ಚೀನಾ ಆಕ್ಷೇಪ ಎತ್ತಿತ್ತು. ಅರುಣಾಚಲ ಪ್ರದೇಶ ವಿವಾದಿತ ಪ್ರದೇಶವಾಗಿದ್ದರಿಂದ ಅಲ್ಲಿಗೆ ಭಾರತೀಯ ನಾಯಕರು ಭೇಟಿ ಸರಿಯಲ್ಲ ಎಂದು ಚೀನಾ ಅಸಮಾಧಾನ ವ್ಯಕ್ತಪಡಿಸಿತ್ತು.
(ಏಜನ್ಸೀಸ್)












Click it and Unblock the Notifications