ಅಧಿಕಾರಿಗಳಿಗೆ ಬೆದರಿಕೆ ಒಡ್ಡಿದ ನ್ಯಾ. ದಿನಕರನ್ ?

ತಮಿಳುನಾಡಿನ ತಿರುವಲ್ಲೂರ್ ಜಿಲ್ಲೆಯ ಕಾವೇರಿ ರಾಜಪುರಂ ಗ್ರಾಮದಲ್ಲಿ ಸರಕಾರಿ ಭೂಮಿ ಹೊಂದಿರುವ ಬಗ್ಗೆ ಕಂದಾಯ ಇಲಾಖೆ ಅಧಿಕಾರಿಗಳು ತನಿಖೆ ನಡೆಸಲು ಅಲ್ಲಿಗೆ ತೆರಳಿದಾಗಿ ದಿನಕರನ್ ಅವರು ತಮ್ಮ ಸ್ಥಳೀಯ ಪ್ರತಿನಿಧಿ ಮೂಲಕ ಬೆದರಿಕೆ ಹಾಕಿದ್ದಾರೆ. ನ್ಯಾಯಮೂರ್ತಿ ಅವರ ಖಾಸಗಿ ಜಮೀನಿಗೆ ಅವರ ಅನುಮತಿ ಇಲ್ಲದೆ ಪ್ರವೇಶಿಸಿದರೆ ಕ್ರಿಮಿನಲ್ ಕ್ರಮ ಕೈಗೊಳ್ಳಲಾಗುವುದಾಗಿ ಎಚ್ಚರಿಕೆ ನೀಡಲಾಗಿದೆ ಎಂದು ವರದಿಯಾಗಿದೆ.
ನ್ಯಾಯಮೂರ್ತಿಗಳ ವಿಶಾಲ ಪಟ್ಟಾ ಜಮೀನಿನ ನಡುವೆ ಸುಮಾರು 200 ಎಕರೆಗಳಷ್ಟು ಪರಂಬೋಕ್ (ಸರಕಾರಿ) ಭೂಮಿ ಇದೆ. ಈ ಜಾಗವನ್ನು ಅಕ್ರಮವಾಗಿ ಸ್ವಾಧೀನಪಡಿಸಿಕೊಂಡು ಬೇಲಿ ಹಾಕಲಾಗಿತ್ತು ಎಂಬ ಆರೋಪ ಅವರ ಮೇಲಿದೆ. ದಿನಕರನ್ ಅವರ ಜಮೀನಿನ ತನಿಖೆಗೆ ಕಂದಾಯ ಅಧಿಕಾರಿ ಮತ್ತು ತಹಸೀಲ್ದಾರ್ ರು ತೆರಳಿದ್ದರು.
(ಏಜನ್ಸೀಸ್)












Click it and Unblock the Notifications