ಪಾಕ್ ಸೇನಾ ಕಚೇರಿ ನುಗ್ಗಲೆತ್ನಿಸಿದ ಉಗ್ರರ ಹತ್ಯೆ

ರಾವಳಪಿಂಡಿಯಲ್ಲಿರುವ ಸೇನಾ ಕೇಂದ್ರ ಕಚೇರಿಗೆ ಇಂದು ಬೆಳಿಗ್ಗೆ ಸೇನಾ ಸಮವಸ್ತ್ರದಲ್ಲೇ ನುಗ್ಗಲು ಉಗ್ರರು ಯತ್ನಿಸಿದ್ದರು. ಅವರನ್ನು ತಡೆಯಲೆತ್ನಿಸಿದ ಇಬ್ಬರು ಸೈನಿಕರನ್ನು ಉಗ್ರರು ಹತ್ಯೆಗೈದಿದ್ದಾರೆ. ಈ ದಾಳಿಯಲ್ಲಿ ಹಲವಾರು ಸೈನಿಕರು ಗಾಯಗೊಂಡಿದ್ದಾರೆ ಎಂದು ಹಿರಿಯ ಅಧಿಕಾರಿ ತಿಳಿಸಿದ್ದಾರೆ.
ಕಾರಿನಲ್ಲಿ ಬಂದ ಭಯೋತ್ಪಾದಕರು ಏಕಾಏಕಿ ಕೇಂದ್ರ ಕಚೇರಿಯ ರಕ್ಷಣಾ ಸಿಬ್ಬಂದಿಯ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ. ಒಬ್ಬ ಗ್ರೆನೇಡ್ ಎಸೆದರೆ, ಉಳಿದವರು ಯದ್ವಾತದ್ವಾ ಗುಂಡು ಹಾರಿಸಲು ಪ್ರಾರಂಭಿಸಿದ್ದಾರೆ. ನಂತರ 45 ನಿಮಿಷಗಳ ಕಾಲ ನಡೆದ ಗುಂಡಿನ ದಾಳಿ ಮತ್ತು ಪ್ರತಿದಾಳಿಯಲ್ಲಿ ನಾಲ್ವರು ಉಗ್ರರು ಸಾವಿಗೀಡಾಗಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಉಗ್ರರು ನಡೆಸುತ್ತಿರುವ ಮೂರನೇ ಪ್ರಮುಖ ದಾಳಿ ಇದಾಗಿದೆ. ಶುಕ್ರವಾರ ಪೇಶಾವರದಲ್ಲಿ ನಡೆದ ಕಾರ್ ಬಾಂಬ್ ದಾಳಿಯಲ್ಲಿ 49 ಜನ ಹತ್ಯೆಗೀಡಾಗಿದ್ದರು. ಇಸ್ಲಾಮಾಬಾದಿನಲ್ಲಿ ನಡೆದ ಇನ್ನೊಂದು ದಾಳಿಯಲ್ಲಿ ಐವರು ಸಾವಿಗೀಡಾಗಿದ್ದರು.
(ಏಜೆನ್ಸೀಸ್)












Click it and Unblock the Notifications