ಲೋಕಮೋರ್ಚಾ ನಾಯಕರಾಗಿ ಜಸ್ವಂತ್ ಸಿಂಗ್

ನಾವು ಸರಕಾರಕ್ಕೆ ನಿರ್ಣಾಯಕ ವಿರೋಧಪಕ್ಷವಾಗುವ ನಿಟ್ಟಿನಲ್ಲಿ ಗುಂಪೊಂದನ್ನು ರಚಿಸಿದ್ದೇವೆ ಎಂಬುದಾಗಿ ಲೋಕಮೋರ್ಚಾ' ಎಂಬ ಈ ಗುಂಪಿನ ನಾಯಕ ಹಾಗೂ ಮಾಜಿ ಸಚಿವರೂ ಆಗಿರುವ ದಿಗ್ವಿಜಯ್ ಸಿಂಗ್ ತಿಳಿಸಿದರು. ಜಾರ್ಖಂಡ್‌ನ ಮಾಜಿ ಸ್ಪೀಕರ್ ಇಂದರ್ ಸಿಂಗ್ ನಾಮಧಾರಿ (ಛಾತ್ರಾ ಎಂಪಿ) ಗುಂಪಿನ ಉಪನಾಯಕರಾಗಲಿದ್ದಾರೆ.
ಕೊಲ್ಹಾಪುರದ ಎಂಪಿ ರಾಜುಶೆಟ್ಟಿ ಕೂಡಾ ಇದರಲ್ಲಿ ಇರುತ್ತಾರೆ. ಪತ್ರಕರ್ತರಾದ ಎಂ.ಜೆ.ಅಕ್ಬರ್, ಪ್ರಭಾಶ್ ಜೋಷಿ ಇದರ ಜೊತೆ ಇರುತ್ತಾರೆ. ತಾನು ಮೋರ್ಚಾದ ಅಖಿಲ ಭಾರತೀಯ ಸಂಚಾಲಕನಾಗಿ ಆಯ್ಕೆಯಾಗಿರುವುದಾಗಿ ಸಿಂಗ್ ಹೇಳಿದರು. ಸಿಂಗ್ ಈ ಹಿಂದೆ ಜೆಡಿಯು ನಾಯಕರಾಗಿದ್ದರು. ಪ್ರತಿಪಕ್ಷದ ನೆಲೆಯಲ್ಲಿ ಬಿಜೆಪಿಯಲ್ಲಿದ್ದ ವೇಳೆ ತನಗೆ ನೀಡಲಾದ ಸ್ಥಾಯೀ ಸಮಿತಿಯ ಅಧ್ಯಕ್ಷತೆಯನ್ನು ಬಿಟ್ಟುಕೊಡಲು ಜಸ್ವಂತ್ ಸಿಂಗ್ ನಿರಾಕರಿಸಿರುವುದನ್ನು ಇಲ್ಲಿ ಸ್ಮರಿಸಬಹುದು.
(ಏಜನ್ಸೀಸ್)











Click it and Unblock the Notifications