ರಂಗನಾಥ್ , ಹಮೀದ್ ಟಿವಿ9ಗೆ ಗುಡ್ ಬೈ

ಬ್ರೇಕಿಂಗ್ ನ್ಯೂಸ್ ಖ್ಯಾತಿಯ "ಉತ್ತಮ ಸಮಾಜಕ್ಕಾಗಿ" ಘೋಷವಾಕ್ಯದ ಟಿವಿ9 ವಾಹಿನಿಯಲ್ಲಿ ಪಳಗಿ ಪ್ರೇಕ್ಷಕರಿಗೆ ಚಿರಪರಿಚಿತವಾದ ಈ ಎರಡು ಮುಖಗಳು ಇನ್ನು ಮುಂದೆ ಸುದ್ಧಿಸ್ಫೋಟ ಖ್ಯಾತಿಯ "ನೇರ ದಿಟ್ಟ ನಿರಂತರ" ಘೋಷವಾಕ್ಯದ ಸುವರ್ಣ ಸುದ್ದಿ ತೆರೆಯ ಮೇಲೆ ಕಾಣಿಸಿಕೊಳ್ಳಲಿವೆ. ವೃತ್ತಿ ಆಕಾಂಕ್ಷೆಗಳ ಬೆಂಬತ್ತಿ ಪ್ರತಿಸ್ಪರ್ಧಿ ಕನ್ನಡ ವಾಹಿನಿಯತ್ತ ಇವರಿಬ್ಬರು ಮುಖ ಮಾಡಿದ್ದಾರೆ.
ವಿಶ್ವಸನೀಯ ಮೂಲಗಳ ಪ್ರಕಾರ ರಂಗನಾಥ ಮತ್ತು ಹಮೀದ್ ಈಗಾಗಲೇ ಟಿವಿ9ಕ್ಕೆ ತಮ್ಮ ರಾಜಿನಾಮೆಗಳನ್ನು ಕೊಟ್ಟಿದ್ದಾರೆ. ಸುವರ್ಣ ಚಾನಲ್ಲಿಗೆ ಅವರಿಬ್ಬರು ನೌಕರರಾಗಿ ಅಧಿಕೃತವಾಗಿ ಸೇರ್ಪಡೆಗೊಂಡಿದ್ದಾರೆ ಕೂಡ. ಆದರೆ, ಇವರನ್ನು ಸುವರ್ಣ ತೆರೆಯ ಮೇಲೆ ನೋಡಲು ಪ್ರೇಕ್ಷಕರು ನವೆಂಬರ್ 1ರ ತನಕ ಕಾಯಬೇಕಾಗುವುದು.
ಹೆಚ್ಚುವರಿ ಬಂಡವಾಳ ಹಾಕಿ, ಹೆಚ್ಚುವರಿ ನೌಕರವರ್ಗವನ್ನು ತೊಡಗಿಸಿ ಬಹುಕೋಟಿ ಪ್ರೇಕ್ಷಕರನ್ನು ತಲುಪುವ ವಾಣಿಜ್ಯ ಉತ್ಸಾಹದಿಂದ ಚಾನಲ್ ವಿಸ್ತರಣೆಗೆ ಸುವರ್ಣ ಆಡಳಿತ ಅನೇಕ ಕಾರ್ಯಕ್ರಮಗಳನ್ನು ರೂಪಿಸಿಕೊಂಡಿದೆ. ಇದೇ ನವೆಂಬರ್ 1 ರ ರಾಜ್ಯೋತ್ಸವ ದಿನದಂದು ಸುವರ್ಣ ವಾಹಿನಿಯನ್ನು ಪುನಃ ಆರಂಭಿಸುವ (Relaunch) ಯೋಜನೆ ಪಕ್ಕಾ ಆಗಿದೆ. 53 ನೇ ಕನ್ನಡ ರಾಜ್ಯೋತ್ಸವದ ಸುದ್ದಿ ಸಮಾಚಾರಗಳನ್ನು ಪ್ರೇಕ್ಷಕರಿಗೆ ತಲುಪಿಸುವುದರೊಂದಿಗೆ ರಂಗನಾಥ ಮತ್ತು ಹಮೀದ್ ಅವರ ಸುವರ್ಣ ಅಧ್ಯಾಯ ಆರಂಭಗೊಳ್ಳುತ್ತದೆ.
(ದಟ್ಸ್ ಕನ್ನಡ ವಾರ್ತೆ)
-
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್ -
ಮೈಸೂರು, ಬೆಂಗಳೂರು, ವಿಜಯಪುರ ರೈಲು ಪ್ರಯಾಣಿಕರೇ ಗಮನಕ್ಕೆ; ರೈಲುಗಳ ಸಂಚಾರ ಭಾಗಶಃ ರದ್ದು -
NWKRTC ಬಸ್ಗಳಿಗೆ ಟ್ರ್ಯಾಕಿಂಗ್ ಸಿಸ್ಟಮ್ ಅಳವಡಿಕೆಗೆ 'ಆಡಿಟ್' ಬಿಸಿ: ಜಗದೀಶ್ ಶೆಟ್ಟರ್ಗೆ ನಿತಿನ್ ಗಡ್ಕರಿ ಪತ್ರ -
Gold Rate Today: ಸತತ ನಾಲ್ಕನೇ ದಿನವು ಚಿನ್ನ-ಬೆಳ್ಳಿ ದರ ಭರ್ಜರಿ ಇಳಿಕೆ, ಇಂದಿನ ದರವೆಷ್ಟು? -
ಆರ್ಸಿಬಿಗೆ ಚಾರ್ಟರ್ಡ್ ಫ್ಲೈಟ್ ಸೌಲಭ್ಯದ ಬೇಡಿಕೆ ಆರೋಪ: ಒಂದೇ ಎಮೋಜಿ ಹಾಕಿ ಕಿಂಗ್ ಕೊಹ್ಲಿ ಸಷ್ಟನೆ -
Devanahalli accident: ದೇವನಹಳ್ಳಿ ಬಳಿ ಭೀಕರ ಅಪಘಾತ: ಕಾಶಿಯಾತ್ರೆಗೆ ಹೊರಟಿದ್ದ ತಿಪಟೂರಿನ ಮೂವರು ಮಹಿಳೆಯರು ಸಾವು -
March 22 Horoscope: ಇಂದು ನಿಮ್ಮ ಧನ, ಆರೋಗ್ಯ, ಉದ್ಯೋಗದ ಭವಿಷ್ಯ ಹೇಗಿದೆ? -
ಅಮೆರಿಕ ಪಾಕಿಸ್ತಾನದ ಮೇಲೆ ದಾಳಿ ಮಾಡಿದರೆ ನಾವು ಮುಂಬೈ, ದೆಹಲಿ ಮೇಲೆ ಬಾಂಬ್ ಹಾಕ್ತೀವಿ: ಪಾಕ್ ಮಾಜಿ ರಾಯಭಾರಿ ವಿವಾದಾತ್ಮಕ ಹೇಳಿಕೆ -
ಮಾರ್ಚ್ 22ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
IPL 2026 Ticket: ಐಪಿಎಲ್ ಟಿಕೆಟ್ ಖರೀದಿ ಕುರಿತು ಬೆಂಗಳೂರು ಪೊಲೀಸರಿಂದ ಕ್ರಿಕೆಟ್ ಪ್ರೇಮಿಗಳಿಗೆ ಮಹತ್ವದ ಸಲಹೆ -
By-Election: ದಾವಣಗೆರೆ ದಕ್ಷಿಣದಲ್ಲಿ ಮೊದಲ ಬಾರಿ ಬಿಜೆಪಿ ಗೆಲುವು ನಿಶ್ಚಿತ; ಬಸವರಾಜ ಬೊಮ್ಮಾಯಿ ವಿಶ್ವಾಸ -
ಆರ್ಸಿಬಿ ವಿರುದ್ಧದ ಪಂದ್ಯಕ್ಕೂ ಮುನ್ನ ಕೇವಲ 42 ಎಸೆತಗಳಲ್ಲಿ 94 ರನ್ ಸಿಡಿಸಿದ ಅಭಿಷೇಕ್ ಶರ್ಮಾ: ಭಾರೀ ವೈರಲ್












Click it and Unblock the Notifications