ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಾರಾಟ ಹೆಚ್ಚಳಕ್ಕೆ ಕೆಎಂಎಫ್ ರೆಡಿ : ರೆಡ್ಡಿ

By Staff
|
Google Oneindia Kannada News

Somashekar Reddy
ಬೆಂಗಳೂರು, ಸೆ. 30 : ಮಾರಾಟ ಹೆಚ್ಚಳಕ್ಕೆ ಕರ್ನಾಟಕ ಹಾಲು ಉತ್ಪಾದನಾ ನಿಗಮವು ರಾಜ್ಯದ ಪ್ರಮುಖ 50 ಪಟ್ಟಣಗಳಲ್ಲಿ ಕೆಎಂಎಫ್ ಮಾರಾಟ ಮಳಿಗೆಯಲ್ಲಿ ತೆರೆಯಲು ನಿರ್ಧರಿಸಲಾಗಿದೆ ಎಂದು ಕೆಎಂಎಫ್ ಅಧ್ಯಕ್ಷ ಸೋಮಶೇಖರರೆಡ್ಡಿ ಹೇಳಿದರು.

ಬುಧವಾರ ಬೆಳಗ್ಗೆ ಕೆಎಂಎಫ್ ಕಚೇರಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಈಗಾಗಲೇ ಬೆಂಗಳೂರಿನಲ್ಲಿ ಸುಮಾರು 12 ಕೆಎಂಎಫ್ ಮಾರಾಟ ಮಳಿಗೆಯನ್ನು ತೆರೆಯಲಾಗಿದ್ದು, ಮುಂದಿನ ಒಂದು ವರ್ಷದೊಳಗೆ ಇದನ್ನು ಬೇಡಿಕೆಗೆ ಅನುಗುಣವಾಗಿ ರಾಜ್ಯಾದ್ಯಂತ ವಿಸ್ತರಿಸಲಾಗುವುದು ಎಂದರು.

ಗ್ರಾಮೀಣಾಭಿವೃದ್ಧಿ ಮತ್ತು ಆಡಳಿತ ಕಚೇರಿಗೆ 6 ಕೋಟಿ ರುಪಾಯಿಗಳನ್ನು ಬಿಡುಗಡೆ ಮಾಡಲಾಗಿದೆ. ಶೀಘ್ರದಲ್ಲಿ ಸ್ಥಳ ಗುರುತಿಸಿ ಕಾಮಗಾರಿ ಆರಂಭಿಸಲಾಗುವುದು ಎಂದು ಹೇಳಿದರು. ಅಕ್ಟೋಬರ್ 2 ರಂದು ಉತ್ಪಾದಕರ ಸಭೆಯನ್ನು ಕರೆಯಲಾಗಿದೆ ಎಂದು ಸೋಮಶೇಖರರೆಡ್ಡಿ ವಿವರಿಸಿದರು.

(ದಟ್ಸ್ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X