ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಐಸಿಸಿ ಶ್ರೇಯಾಂಕ, ಎರಡನೇ ಸ್ಥಾನದಲ್ಲಿ ಭಾರತ

By Staff
|
Google Oneindia Kannada News

Team India
ದುಬೈ ಸೆ 21: ಇಂಗ್ಲೆಂಡ್ ವಿರುದ್ದದ ಏಕದಿನ ಸರಣಿಯನ್ನು 'ಕ್ಲೀನ್ ಸ್ವೀಪ್' ಮಾಡಿಕೊಳ್ಳುವಲ್ಲಿ ಆಸ್ಟ್ರೇಲಿಯಾ ವಿಫಲವಾಗಿರುವುದರಿಂದ ಭಾರತ ಮೂರನೇ ಸ್ಥಾನದಿಂದ ಎರಡನೇ ಸ್ಥಾನಕ್ಕೆ ಜಿಗಿದಿದೆ. ಎರಡನೇ ಸ್ಥಾನದಲ್ಲಿದ್ದ ದಕ್ಷಿಣ ಆಫ್ರಿಕಾ ಮತ್ತೆ ಮೊದಲನೇ ಸ್ಥಾನಕ್ಕೇರಿದ್ದರೆ, ಮೊದಲನೇ ಸ್ಥಾನದಲ್ಲಿದ್ದ ಆಸ್ಟ್ರೇಲಿಯಾ ಮೂರನೇ ಸ್ಥಾನಕ್ಕೆ ಕುಸಿದಿದೆ.

ಐಸಿಸಿ ಸೋಮವಾರ (ಸೆ 21) ಪ್ರಕಟಿಸಿದ ನೂತನ ಪಟ್ಟಿಯಲ್ಲಿ ಮೊದಲ ಮೂರು ತಂಡಗಳ ನಡುವಿನ ಅಂಕಗಳಲ್ಲಿ ಕೇವಲ ಎರಡು ಅಂಕಗಳ ವ್ಯತ್ಯಾಸಗಳಿರುವುದರಿಂದ ಪಟ್ಟಿಯಲ್ಲಿ ಮತ್ತೆ ಏರುಪೇರುಗಳಾಗಬಹುದು ಎಂದು ತಿಳಿಸಿದೆ. ಪಾಕಿಸ್ತಾನ, ಶ್ರೀಲಂಕಾ, ಇಂಗ್ಲೆಂಡ್, ನ್ಯೂಜಿಲೆಂಡ್, ವೆಸ್ಟ್ ಇಂಡೀಸ್, ಬಾಂಗ್ಲಾದೇಶ, ಜಿಂಬಾವ್ವೆ, ಐರ್ಲೇಂಡ್ ಮತ್ತು ಕೀನ್ಯಾ ನಂತರದ ಸ್ಥಾನದಲ್ಲಿದೆ.

ಅಭ್ಯಾಸ ಪಂದ್ಯದಲ್ಲಿ ಭಾರತಕ್ಕೆ ಸೋಲು
ಈ ಮಧ್ಯೆ ದಕ್ಷಿಣಆಫ್ರಿಕಾದ ಪೊಟ್ಚೆಸ್ಟ್ರೋಮ್ ನಲ್ಲಿ ನಡೆದ ಅಭ್ಯಾಸ ಪಂದ್ಯದಲ್ಲಿ ಭಾರತ ನ್ಯೂಜಿಲೆಂಡ್ ವಿರುದ್ಧ 103 ರನ್‌ಗಳ ಅಂತರದಿಂದ ಹೀನಾಯ ಸೋಲು ಅನುಭವಿಸಿದೆ. 301 ರನ್ ಗಳ ಗುರಿ ಬೆನ್ನಟ್ಟಿದ ಭಾರತ 41 ಓವರ್ ಗಳಲ್ಲಿ 198 ರನ್ ಗಳಿಗೆ ಎಲ್ಲಾ ವಿಕೆಟ್ ಕಳೆದು ಕೊಂಡಿತು. ಎಂಟು ದೇಶಗಳು ಭಾಗವಹಿಸುವ ಐಸಿಸಿ ಚಾಂಪಿಯನ್ ಟ್ರೋಫಿ ಮಂಗಳವಾರ(ಸೆ 22) ದಿಂದ ಆರಂಭಗೊಳ್ಳಲಿದೆ.

(ದಟ್ಸ್ ಕನ್ನಡ ಕ್ರೀಡಾ ವಾರ್ತೆ)
ಐಸಿಸಿ ಚಾಂಪಿಯನ್ ಟ್ರೋಫಿ ವೇಳಾಪಟ್ಟಿ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X