ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪಟ್ಟಾಯದ ಜಗಮಗಿಸುವ ಕಾಲುದಾರಿ

By Staff
|
Google Oneindia Kannada News

Walking Street, Pattaya
ಕರ್ನಾಟಕದ ಬೆಂಗಳೂರಿನಿಂದ ಪ್ರತೀದಿನ ರಾತ್ರಿ 12.20ಕ್ಕೆ ಬ್ಯಾಂಕಾಕ್‌ಗೆ ಹೋಗುವ ವಿಮಾನದಲ್ಲಿ 330 ಮಂದಿ ಇರುತ್ತಾರೆ. ಇವರಲ್ಲಿ ಹೆಚ್ಚಿನವರು ಬ್ಯಾಂಕಾಕ್‌ನಲ್ಲಿ ಇಳಿದು ಕಾರನ್ನೇರಿ ನೇರವಾಗಿ ಹೋಗುವುದೇ ಪಟ್ಟಾಯಕ್ಕೆ. ರಾತ್ರಿ ಹತ್ತುಗಂಟೆಗೆ ಪಟ್ಟಾಯದ ವಾಕಿಂಗ್ ಸ್ಟ್ರೀಟ್‌ಗೆ ಹೋದರೆ ಸಾಕು ಒಂದಷ್ಟುಮಂದಿ ಕನ್ನಡಿಗರು ಸಿಗುತ್ತಾರೆ, ಇದು ಪಟ್ಟಾಯದಲ್ಲಿ ಕರ್ನಾಟಕ ಪ್ರವಾಸಿಗರಿಗೆ ದೊರಕುವ ಇನ್ನೊಂದು ಆಕರ್ಷಣೆ!

* ಚಿದಂಬರ ಬೈಕಂಪಾಡಿ, ಮಂಗಳೂರು

ಜಗತ್ತಿನಲ್ಲೇ ಪ್ರವಾಸಿಗರ ಸ್ವರ್ಗವೆಂದರೆ ಅದು ಥೈಲ್ಯಾಂಡ್ ದೇಶ ಎನ್ನುವುದರಲ್ಲಿ ಎರಡು ಮಾತಿಲ್ಲ. ಈ ದೇಶದ ಮುಖ್ಯ ಆರ್ಥಿಕ ಗಳಿಕೆಗಿರುವ ದಾರಿಯೂ ಕೂಡಾ ಪ್ರವಾಸೋದ್ಯಮ. ಸುಂದರವಾದ ಬೀಚುಗಳನ್ನು ಪ್ರವಾಸಿಗರಿಗೆ ಕಲ್ಪಿಸುವ ಮೂಲಕ ವರ್ಷದ ಎಲ್ಲಾ ಕಾಲದಲ್ಲೂ ಸಂಪಾದನೆ ಮಾಡುವ ದೇಶವಿದು. ಥೈಲ್ಯಾಂಡ್ ದೇಶದ ಪ್ರವಾಸಿಗ ರಾಜಧಾನಿ ಬ್ಯಾಂಕಾಕ್‌ನಿಂದ ಸುಮಾರು ನೂರೈವತ್ತು ಕಿ.ಮೀ ದೂರದಲ್ಲಿರುವ ಪಟ್ಟಾಯ ನಗರಕ್ಕೆ ಹೋಗದಿದ್ದರೆ ಪ್ರವಾಸ ವೇಸ್ಟ್.

ಅದೇನಪ್ಪಾ ಅಂಥ ಆಕರ್ಷಣೆ ಅಂತೀರಾ? ಪಟ್ಟಾಯ ಎನ್ನುವುದು ಪುಟ್ಟ ಪರ್ಯಾಯ ದ್ವೀಪ ಮತ್ತು ಥೈಲ್ಯಾಂಡ್ ದೇಶದ ಬಹುಮುಖ್ಯನಗರ ಕೂಡಾ. ಇಲ್ಲಿ ಪ್ರವಾಸಿಗ ನೋಡಬೇಕಾದ ಅನೇಕ ಸ್ಥಳಗಳಲ್ಲಿ ಪಟ್ಟಾಯದ 'ವಾಕಿಂಗ್ ಸ್ಟ್ರೀಟ್" ಪ್ರಮುಖವಾದುದು. ಸುಮಾರು ಒಂದು ಕಿ.ಮೀ ಉದ್ದವಿರುವ ಈ ಸ್ಟ್ರೀಟ್‌ನ್ ವೈಶಿಷ್ಟ್ಯವೆಂದರೆ ವಾಹನಗಳಿಗೆ ಪ್ರವೇಶವಿಲ್ಲ. ಅದೆಷ್ಟೇ ದೊಡ್ಡವ್ಯಕ್ತಿಯಾದರೂ ನಡೆದುಕೊಂಡೇ ಹೋಗಬೇಕು.

ಈ ರಸ್ತೆಯ ಇಕ್ಕೆಲಗಳಲ್ಲಿ ರೆಸ್ಟೋರೆಂಟ್‌ಗಳು, ಲೇಡೀಸ್ ಬಾರ್‌ಗಳು, ಡಿಜೆ ಬಾರ್, ಒಂದಷ್ಟು ಖರೀದಿಗೆ ಅಂಗಡಿಗಳು. ಇಲ್ಲಿರುವ ಪ್ರತಿಯೊಂದು ಮಳಿಗೆಯ ಮುಂದೆ ಬೊಂಬೆಯಂಥ 'ಥಾಯ್"ಹುಡುಗಿಯರು ನಿಮ್ಮನ್ನು ತಮ್ಮ ಮಳಿಗೆಗಳಿಗೆ, ಬಾರ್‌ಗಳಿಗೆ ಕರೆಯುತ್ತಾರೆ. ಒತ್ತಾಯ ಅವರಿಂದ ಸಹಜವಾಗಿಯೇ ಬರುತ್ತದೆ, ಆದರೆ ನೀವು ಅವರ ಮಳಿಗೆಗೆ, ಬಾರ್‌ಗೆ ಹೋಗಬಹುದು ಅಥವಾ ಹೋಗದೆಯೂ ಇರಬಹುದು. ಅದು ನಿಮ್ಮ ಸ್ವಾತಂತ್ರ್ಯ.

ಹಗಲು ಹೊತ್ತಲ್ಲಿ ಈ ವಾಕಿಂಗ್ ಸ್ಟ್ರೀಟ್ ನಿರ್ಜೀವ. ಇಲ್ಲಿ ಕಳೆಕಟ್ಟುವುದೇ ಮುಸ್ಸಂಜೆ ಆಗುತ್ತಿದ್ದಂತೆ. ಬೆಳಗಿನಜಾವ ಮೂರುಗಂಟೆವರೆಗೂ ವಾಕಿಂಗ್ ಸ್ಟ್ರೀಟ್ ಝಗಮಗಿಸುತ್ತಿರುತ್ತದೆ. ಪ್ರತೀ ರಾತ್ರಿಯೂ ಈ ಸ್ಟ್ರೀಟ್‌ನಲ್ಲಿ ಸುಮಾರು ಒಂದು ಲಕ್ಷ ಜನರು ತಿರುಗಾಡುತ್ತಾರೆ ಅಂದರೆ ಉತ್ಪ್ರೇಕ್ಷೆ ಅಂದುಕೊಳ್ಳುತ್ತೀರಿ, ಆದರೆ ನೀವು ಒಂದು ರಾತ್ರಿ ಅಲ್ಲಿ ಅಡ್ಡಾಡಿದರೆ ನಿಮಗೇ ಅರ್ಥವಾಗುತ್ತದೆ. ಶನಿವಾರ ಮತ್ತು ಭಾನುವಾರ ಈ ಸಂಖ್ಯೆಯಲ್ಲಿ ಗಣನೀಯ ಹೆಚ್ಚಳವಿರುತ್ತದೆ.

ಕರ್ನಾಟಕದ ಬೆಂಗಳೂರಿನಿಂದ ಪ್ರತೀದಿನ ರಾತ್ರಿ 12.20ಕ್ಕೆ ಬ್ಯಾಂಕಾಕ್‌ಗೆ ಹೋಗುವ ವಿಮಾನದಲ್ಲಿ 330 ಮಂದಿ ಇರುತ್ತಾರೆ. ಇವರಲ್ಲಿ ಹೆಚ್ಚಿನವರು ಬ್ಯಾಂಕಾಕ್‌ನಲ್ಲಿ ಇಳಿದು ಕಾರನ್ನೇರಿ ನೇರವಾಗಿ ಹೋಗುವುದೇ ಪಟ್ಟಾಯಕ್ಕೆ. ರಾತ್ರಿ ಹತ್ತುಗಂಟೆಗೆ ಪಟ್ಟಾಯದ ವಾಕಿಂಗ್ ಸ್ಟ್ರೀಟ್‌ಗೆ ಹೋದರೆ ಸಾಕು ಒಂದಷ್ಟುಮಂದಿ ಕನ್ನಡಿಗರು ಸಿಗುತ್ತಾರೆ, ಇದು ಪಟ್ಟಾಯದಲ್ಲಿ ಕರ್ನಾಟಕ ಪ್ರವಾಸಿಗರಿಗೆ ದೊರಕುವ ಇನ್ನೊಂದು ಆಕರ್ಷಣೆ!

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X