ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

'ಬೆಳಗಾವಿ ಪಾಂಥರ್ಸ್'ಗೆ ಎಂಇಎಸ್ ವಿರೋಧ

By Staff
|
Google Oneindia Kannada News

MES opposes naming the team as Belagavi Panthers
ಬೆಳಗಾವಿ, ಸೆ.7: ಕರ್ನಾಟಕ ಪ್ರೀಮಿಯರ್ ಲೀಗ್ ಪಂದ್ಯಾವಳಿಯಲ್ಲಿ ಬೆಳಗಾವಿ ತಂಡಕ್ಕೆ 'ಬೆಳಗಾವಿ ಪಾಂಥರ್ಸ್' ಎಂದು ಹೆಸರಿಟ್ಟಿರುವ ಬಗ್ಗೆ ಮಾರಾಠಿ ಪರ ಸಂಘಟನೆ ಮಹಾರಾಷ್ಟ್ರಏಕೀಕರಣ ಸಮಿತಿ(ಎಂಇಎಸ್) ಆಕ್ಷೇಪ ವ್ಯಕ್ತಪಡಿಸಿದೆ.

ಈ ಸಂಬಂಧ ವಕೀಲ ಮತ್ತ್ತು ಎಂಇಎಸ್ ಕಾರ್ಯಕರ್ತ ಮಾಧವ ಚವಾಣ್ ಅವರು ಬಿಸಿಸಿಐನ ಅಧ್ಯಕ್ಷ ಮತ್ತು ಕೇಂದ್ರ ಕೃಷಿ ಸಚಿವ ಶರದ್ ಪವಾರ್ ಅವರಿಗೆ ಪತ್ರ ಬರೆದಿದ್ದಾರೆ. 'ಬೆಳಗಾವಿ ಪಾಂಥರ್ಸ್' ಎಂದು ಹೆಸರಿಟ್ಟಿರುವ ಕರ್ನಾಟಕ ರಾಜ್ಯ ಕ್ರಿಕೆಟ್ ಮಂಡಳಿ (ಕೆಎಸ್ ಸಿಎ) ಹಾಗೂ ಬೆಳಗಾವಿ ಜಿಲ್ಲಾ ಕ್ರಿಕೆಟ್ ಮಂಡಳಿ ವಿರುದ್ಧ ಕ್ರಮ ತೆಗೆದುಕೊಳ್ಳಿ ಎಂದು ಅವರು ಪತ್ರದಲ್ಲಿ ತಿಳಿಸಿದ್ದಾರೆ.

ಈ ಹಿಂದೆ ಚವನ್ ಅವರು ಬೆಳಗಾಂ ಹೆಸರನ್ನು ಬದಲಿಸಿ ಬೆಳಗಾವಿ(2008ರಲ್ಲಿ ನಾಮಕರಣ) ಎಂದು ನಾಮಕರಣ ಮಾಡಿದ ಕರ್ನಾಟಕ ಸರಕಾರ ವಿರುದ್ಧ ಕರ್ನಾಟಕ ಹೈಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿದ್ದರು. ಹಾಗೆಯೇ ಮಹಾರಾಷ್ಟ್ರ ಮತ್ತು ಕರ್ನಾಟಕದ ಗಡಿ ಸಮಸ್ಯೆ ಇತ್ಯರ್ಥವಾಗುವ ತನಕ ಬೆಳಗಾವಿ ಬಗ್ಗೆ ಯಾವುದೇ ನಿರ್ಧಾರ ಕೈಗೊಳ್ಳಬಾರದು ಎಂದು ಎಂಇಎಸ್ ಮಹಾರಾಷ್ಟ್ರ ಸರಕಾರಕ್ಕೆ ಆಗ್ರಹಿಸಿತ್ತು.

ಚವಾಣ್ ಅವರು ಪವಾರ್ ಅವರಿಗೆ ಬರೆದಿರುವ ಪತ್ರದಲ್ಲಿ, 'ಬೆಳಗಾವಿ' ಪ್ರಕರಣ ನ್ಯಾಯಾಲಯದಲ್ಲಿ ರುವ ಕಾರಣ ಅದು ಇತ್ಯರ್ಥವಾಗುವತನಕ ಕರ್ನಾಟಕ ಸರಕಾರ ಅಥವಾ ಕ್ರಿಕೆಟ್ ಮಂಡಳಿ ಯಾವುದೇ ನಿರ್ಧಾರ ಕೈಗೊಳ್ಳುವಂತಿಲ್ಲ.ಕ್ರಿಕೆಟ್ ತಂಡದ ಮಾಲೀಕರು ಕಾನೂನು ಉಲ್ಲಂಘಿಸಿ ಈ ನಿರ್ಧಾರ ತೆಗೊಂಡಿದ್ದಾರೆ .'' ಎಂದು ಅವರು ತಿಳಿಸಿದ್ದಾರೆ.

(ದಟ್ಸ್ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X