ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಷ್ಟ್ರೀಯ ಹೆದ್ದಾರಿ 4ರಲ್ಲಿ ಸಂಚಾರ ಬದಲಾವಣೆ

By Staff
|
Google Oneindia Kannada News

Traffic diverted on NH-4 from Sept 7
ಬೆಂಗಳೂರು, ಸೆ.5: ಬೆಂಗಳೂರು-ಪುಣೆ ರಾಷ್ಟ್ರೀಯ ಹೆದ್ದಾರಿ 4ರಲ್ಲಿ (ಎನ್ಎಚ್4) ರಸ್ತೆ ಅಗಲೀಕರಣ ಹಾಗೂ ರಸ್ತೆ ಮೇಲ್ಸೆತುವೆ ನಿರ್ಮಾಣ ಕಾಮಗಾರಿ ನಡೆಯುತ್ತಿರುವ ಕಾರಣ ವಾಹನಗಳ ಸಂಚಾರವನ್ನು ಬೇರೆಡೆಗೆ ತಿರುಗಿಸಲಾಗಿದೆ. ಸೋಮವಾರದಿಂದ (ಸೆ.7) ಈ ಬದಲಾವಣೆ ಜಾರಿಯಾಗಲಿದೆ.

*ತುಮಕೂರಿನಿಂದ ಹೈದರಾಬಾದ್ ಮತ್ತು ಓಲ್ಡ್ ಮದ್ರಾಸ್ ರಸ್ತೆ ಕಡೆಗೆ ಹೋಗುವ ಬೃಹತ್ ಸರಕು ಸಾಗಣೆ ವಾಹನಗಳು ದಾಬಾಸ್ ಪೇಟೆ ಬಳಿ ಎಡಕ್ಕೆ ತಿರುವು ತೆಗೆದುಕೊಂಡು ದೊಡ್ಡ ಬೆಳಮಂಗಳ-ದೊಡ್ಡಬಳ್ಳಾಪುರ ದೇವನಹಳ್ಳಿ ಜಂಕ್ಷನ್ ನಿಂದ ಬೆಂಗಳೂರು ಬಳ್ಳಾರಿ ರಸ್ತೆ ತಲುಪಿ ಓಲ್ಡ್ ಮದ್ರಾಸ್ ರಸ್ತೆ ಮೂಲಕ ಹೊಸಕೋಟೆ ತಲುಪಲು ಸೂಚಿಸಲಾಗಿದೆ.

*ಓಲ್ಡ್ ಮದ್ರಾಸ್ ರಸ್ತೆ ಮತ್ತು ಹೈದರಾಬಾದ್ ಕಡೆಯಿಂದ ತುಮಕೂರಿಗೆ ಹೋಗುವ ಬೃಹತ್ ಸರಕು ಸಾಗಣೆ ವಾಹನಗಳು ಹೊಸಕೋಟೆ-ಬೂದಿಗೆರೆ ಜಂಕ್ಷನ್ ನಲ್ಲಿ ಬಲಕ್ಕೆ ತಿರುವು ತೆಗೆದುಕೊಂಡು ದೊಡ್ಡಬಳ್ಳಾಪುರದ ಮೂಲಕ ದಾಬಾಸ್ ಪೇಟೆ ತಲುಪಿ ರಾಷ್ಟ್ರೀಯ ಹೆದ್ದಾರಿ 4ನ್ನು ಸೇರಲು ಸೂಚಿಸಲಾಗಿದೆ.

*ಚೆನ್ನೈಯಿಂದ ತುಮಕೂರಿಗೆ ಹೋಗುವ ಇತರೆ ವಾಹನಗಳು ಎಲಕ್ಟ್ರಾನಿಕ್ ಸಿಟಿ ಬಳಿಯ ನೈಸ್ ರಸ್ತೆ ಬಳಸಿ ಅಂಚೆಪಾಳ್ಯ ಮೂಲಕ ನೆಲಮಂಗಲ ಕಡೆಗೆ ಹೋಗಲು ಸೂಚಿಸಲಾಗಿದೆ.

*ತುಮಕೂರಿನಿಂದ ಚೆನ್ನೈ ಕಡೆಗೆ ಹೋಗುವ ವಾಹನಗಳು ದಾಬಾಸ್ ಪೇಟೆ ಬಳಿ ತಿರುವು ತೆಗೆದುಕೊಂಡು ನೆಲಮಂಗಲ ತಲುಪಿ ಅಂಚೆಪಾಳ್ಯದ ಬಳಿ ಬಲ ತಿರುವು ತೆಗೆದುಕೊಂಡು ನೈಸ್ ರಸ್ತೆ ತಲುಪಿ ಅಲ್ಲಿಂದ ಹೊಸೂರು ರಸ್ತೆ ಕಡೆಗೆ ಹೋಗಲು ಸೂಚಿಸಲಾಗಿದೆ.

*ಹಾಸನ ಮತ್ತು ಮಂಗಳೂರಿನಿಂದ ಹೈದರಾಬಾದ್ ಕಡೆಗೆ ಚಲಿಸುವ ವಾಹನಗಳು ನೆಲಮಂಗಲದಿಂದ ಕನಸವಾಡಿ ಬಳಸಿ ರಾಜಾನುಕುಂಟೆ, ದೇವನಹಳ್ಳಿ ಮತ್ತು ಬಳ್ಳಾರಿ ರಸ್ತೆ ತಲುಪಲು ಸೂಚಿಸಲಾಗಿದೆ.

*ಹಾಸನ ಮತ್ತು ಮಂಗಳೂರಿನಿಂದ ಚೆನ್ನೈ ಕಡೆಗೆ ಚಲಿಸುವ ವಾಹನಗಳು ನೆಲಮಂಗಲ ಬಳಿ ಬಲಕ್ಕೆ ತಿರುವು ಪಡೆದು ನೈಸ್ ರಸ್ತೆ ಬಳಸಿ ಅಂಚೆಪಾಳ್ಯದ ಮೂಲಕ ಹೊಸೂರು ರಸ್ತೆ ತಲುಪಲು ಸೂಚಿಸಲಾಗಿದೆ.

(ದಟ್ಸ್ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X