ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜಿಲ್ಲೆಯ ಕೊಳವೆ ಬಾವಿ ಮುಚ್ಚಲು ಆದೇಶ

By Staff
|
Google Oneindia Kannada News

Four year old girl Kanchana
ದೇವರನಿಂಬರಗಿ (ಬಿಜಾಪುರ), ಸೆ.5: ಬಿಜಾಪುರ ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ ಶನಿವಾರ ಕಾಂಚನ ಕುಟುಂಬದವರನ್ನು ಭೇಟಿ ಮಾಡಿ ಸಾಂತ್ವನ ಹೇಳಿದರು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ ಅವರು,ಹದಿನೈದು ದಿನಗಳಲ್ಲಿ ಜಿಲ್ಲೆಯಲ್ಲಿನ ಎಲ್ಲಾ ತೆರೆದ ಕೊಳವೆ ಬಾವಿಗಳನ್ನು ಮುಚ್ಚಬೇಕು ಎಂದು ಸುತ್ತೋಲೆ ಹೊರಡಿಸುವಂತೆ ಜಿಲ್ಲಾಧಿಕಾರಿ ಆರ್ ಶಾಂತರಾಜು ಅವರಿಗೆ ಆದೇಶಿದರು.

ಒಂದು ವೇಳೆ ಅಧಿಕಾರಿಗಳು ವಿಫಲವಾದರೆ ಕೊಳವೆ ಬಾವಿ ಕೊರಸಿದವರು ಹಾಗೂ ಅಧಿಕಾರಿಗಳ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹೂಡುವುದಾಗಿ ಸಚಿವರು ಎಚ್ಚರಿಸಿದರು. ಇದೇ ಸಂದರ್ಭದಲ್ಲಿ ಕಾಂಚನ ಅವರ ಕುಟುಂಬದವರಿಗೆ ರು.10,000 ಪರಿಹಾರದ ಚೆಕ್ಕನ್ನು ವಿತರಿಸಿದರು.

ಹಟ್ಟಿ ಚಿನ್ನದ ಗಣಿ, ಸಿಕಂದರಾಬಾದ್, ಬೆಳಗಾವಿಯಿಂದ ನುರಿತ ಕೆಲಸಗಾರರು ಬಂದು ಕಾಂಚನಾ ಇರುವ ಸ್ಥಳವನ್ನು ತಲುಪಲು ಹರಸಾಹಸ ಪಡುತ್ತಿದ್ದಾರೆ. ಕಾರ್ಯಾಚರಣೆಯನ್ನು ಆದಷ್ಟು ಬೇಗ ಮುಗಿಸಿ ಆಪರೇಷನ್ ಕಾಂಚನಾ ಅಂತ್ಯಗೊಳಿಸಲು 100ಕ್ಕೂ ಹೆಚ್ಚು ಸಿಬ್ಬಂದಿ ಕಾರ್ಯೋನ್ಮುಖರಾಗಿದ್ದಾರೆ.

ಕಾಂಚನಾಗೆ ಮುಕ್ತಿ ಎಂದು?
ಸತತ ಆರು ದಿನಗಳಿಂದ ಆಪರೇಷನ್ ಕಾಂಚನ(4) ಕಾರ್ಯಾಚರಣೆ ಮುಂದುವರಿದಿದೆ. ಶನಿವಾರ(ಸೆ.5) ರಾತ್ರಿ ಕಾರ್ಯಾಚರಣೆಯನ್ನು ಪೂರ್ಣಗೊಳಿಸಿ ಕಾಂಚನಾರನ್ನು ಹೊರತೆಗೆಯುತ್ತೇವೆ ಎಂಬ ಭರವಸೆಯನ್ನು ಹಟ್ಟ್ಟಿ ಚಿನ್ನದ ಗಣಿಯ ತಜ್ಞರು ನೀಡಿದ್ದಾರೆ.

ಸತತವಾಗಿ ಆರು ದಿನಗಳು ಕಳೆಯುತ್ತಿದ್ದರೂ ಕೊಳವೆ ಬಾವಿಯಲ್ಲಿ ಸಿಲುಕಿಕೊಂಡಿರುವ ಕಾಂಚನಾರನ್ನು ಹೊರತೆಗೆಯಲು ಸಾಧ್ಯವಾಗುತ್ತಿಲ್ಲ. ಈಗಾಗಲೇ 54 ಅಡಿ ಗುಳಿ ತೋಡಲಾಗಿದ್ದು ಕಾಂಚನಾ ಇರುವ ಸ್ಥಳವನ್ನು ತಲುಪಲು ಸಮಾನಾಂತರವಾಗಿ ಕೊರೆಯಲಾಗುತ್ತಿದೆ. ಸುರಿಯುತ್ತಿರುವ ಮಳೆಯನ್ನೂ ಲೆಕ್ಕ್ಕಿದಸದೆ ಗೃಹ ರಕ್ಷಕ ದಳ, ಹಟ್ಟಿ ಚಿನ್ನದ ಗಣಿ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ.

ಸೆ.31ರಂದು ಬಾಲಕಿ ಕಾಂಚನಾ ಕೊಳವೆ ಬಾವಿಗೆ ಬಿದ್ದು 52 ಅಡಿ ಆಳದಲ್ಲಿ ಸಿಲುಕಿದ್ದಳು. ಆರು ದಿನಗಳಿಂದ ಸತತ ಕಾರ್ಯಾಚರಣೆ ನಡೆಯುತ್ತಿದ್ದರೂ ಕಾಂಚನಳನ್ನು ತಲುಪಲು ಸಾಧ್ಯವಾಗಿಲ್ಲ. ಇದೀಗ 54 ಅಡಿ ಭೂಮಿ ಕೊರೆಯಲಾಗಿದ್ದು ಸಮಾನಾಂತರವಾಗಿ ಆರು ಅಡಿ ಕೊರೆಯಬೇಕಾಗಿದೆ. ಶನಿವಾರ ರಾತ್ರಿಗೆ ಕಾರ್ಯಾಚರಣೆಯನ್ನು ಮುಗಿಸಿ ಕಾಂಚನಾಳನ್ನು ಹೊರತೆಗೆಯಲು ಹರಸಾಹಸ ಮಾಡಲಾಗುತ್ತಿದೆ.

(ದಟ್ಸ್ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X