ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವೈಎಸ್ಆರ್ ಪಾರ್ಥಿವ ಶರೀರದ ಮೆರವಣಿಗೆ

By Staff
|
Google Oneindia Kannada News

ಹೈದರಾಬಾದ್, ಸೆ. 4 : ಅಕಾಲಿಕ ಮರಣ ಹೊಂದಿದ ಮುಖ್ಯಮಂತ್ರಿ ರಾಜಶೇಖರರೆಡ್ಡಿ ಅವರ ಪಾರ್ಥೀನ ಶರೀರವನ್ನು ನಗರದ ಲಾಲ್ ಬಹದ್ದೂರ್ ಶಾಸ್ತ್ರಿ ಮೈದಾನದಲ್ಲಿ ಸಾರ್ವಜನಿಕ ಸ್ಥಳದಲ್ಲಿ ಇಡುವ ಕಾರ್ಯಕ್ರಮವಿದ್ದು, ಆಂಧ್ರಪ್ರದೇಶದ ಕಾಂಗ್ರೆಸ್ ಕಚೇರಿ ಗಾಂಧಿ ಭವನದಿಂದ ಪಾರ್ಥೀವ ಶರೀರದ ಮೆರವಣಿಗೆ ಹೊರಟಿದ್ದು, ರಾಜ್ಯದ ವಿವಿಧ ಭಾಗಗಳಿಂದ ಸಾವಿರಾರು ಅಭಿಮಾನಿಗಳು, ಕಾರ್ಯಕರ್ತರು ಆಗಮಿಸಿದ್ದಾರೆ. ಇನ್ನೇನು ಕೆಲ ನಿಮಿಷಗಳಲ್ಲಿ ವೈಎಸ್ ಆರ್ ಅವರ ಪಾರ್ಥಿವ ಶರೀರವನ್ನು ಅಂತಿಮ ದರ್ಶನಕ್ಕೆ ಇಡಲಾಗುತ್ತಿದೆ.

ತಮ್ಮ ನೆಚ್ಚಿನ ನಾಯಕನನ್ನು ಕೊನೆಯ ಬಾರಿ ಕಣ್ಣಾರೆ ಕಾಣಬೇಕು ಎಂಬ ಕಾರಣದಿಂದ ಅಭಿಮಾನಿಗಳ, ಕಾರ್ಯಕರ್ತರ ನೂಕು ನುಗ್ಗಲು ಆರಂಭವಾಗಿದೆ. ಭದ್ರತೆಗಾಗಿ ಸಾಕಷ್ಟು ಪೊಲೀಸರನ್ನು ನಿಯೋಜಿಸಲಾಗಿದ್ದು, ನಿರೀಕ್ಷೆಗೂ ಮೀರಿದ ಜನರು ಕೂಡಿದ್ದು ಭದ್ರತೆ ಒದಗಿಸುವುದು ಪೊಲೀಸರಿಗೆ ತಲೆನೋವಾಗಿ ಪರಿಣಮಿಸಿದೆ. ಮೆರವಣಿಗೆಯಲ್ಲಿ ಕೆಲ ಕಡೆ ಪೊಲೀಸರು ಲಘು ಲಾಠಿ ಪ್ರಹಾರ ಮಾಡಿರುವ ಘಟನೆಯೂ ನಡೆದಿದೆ. ಹೈದರಾಬಾದ್ ನಲ್ಲಿ ರಸ್ತೆ ಸಂಚಾರ ಸಂಪೂರ್ಣವಾಗಿ ಅಸ್ತವ್ಯಸ್ತಗೊಂಡಿದೆ.

ವೈಎಸ್ಆರ್ ಅವರ ಅಂತ್ಯಕ್ರಿಯೆಗೆ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ, ಪ್ರಧಾನಮಂತ್ರಿ ಮನಮೋಹನ್ ಸಿಂಗ್, ಕೇಂದ್ರ ಸಚಿವರು ದಂಡು, ರಾಜ್ಯದಿಂದ ವಿ ಎಸ್ ಆಚಾರ್ಯ, ಸುರೇಶಕುಮಾರ್, ಜನಾರ್ದನರೆಡ್ಡಿ, ರಾಮಚಂದ್ರೇಗೌಡ, ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ, ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ, ಸಿದ್ದರಾಮಯ್ಯ, ಡಿ ಕೆ ಶಿವಕುಮಾರ್. ಆರ್ ವಿ ದೇಶಪಾಂಡೆ, ವಿ ಎಸ್ ಉಗ್ರಪ್ಪ, ಎಡಪಕ್ಷದ ಮುಖಂಡ ಸೀತಾರಾಂ ಯೆಚೂರಿ ಮತ್ತಿತರ ನಾಯಕರು ಪಾಲ್ಗೊಳ್ಳಲಿದ್ದಾರೆ.

32 ಅಭಿಮಾನಿಗಳು ಸಾವು

ಮುಖ್ಯಮಂತ್ರಿ ವೈ ಎಸ್ ರಾಜಶೇಖರರೆಡ್ಡಿ ಅವರ ಅಕಾಲಿಕ ಮರಣದಿಂದ ಆಂಧ್ರಪ್ರದೇಶದಾದ್ಯಂತ ಅವರ 32 ಅಭಿಮಾನಿಗಳು ಸಾವನ್ನಪ್ಪಿದ್ದಾರೆ. ನೆಚ್ಚಿನ ನಾಯಕ ಇನ್ನಿಲ್ಲ ಎನ್ನುವುದು ಅವರಿಗೆ ಅರಗಿಸಿಕೊಳ್ಳುವುದು ಸಾಧ್ಯವಾಗುತ್ತಿಲ್ಲ. ಎಪಿಸಿಸಿ ಕಚೇರಿ ಗಾಂಧಿ ಭವನದಲ್ಲಿಂತೂ ಕಾರ್ಯಕರ್ತರ ಆಕ್ರಂದನ ಹೇಳತೀರದಾಗಿದೆ.

(ಏಜನ್ಸೀಸ್)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X