ಪಾದಯಾತ್ರೆಗೆ ಹೆಸರಾಗಿದ್ದರು ವೈಎಸ್ ಆರ್

Y S Rajashekara Reddy and Padayaatra
ಬೆಂಗಳೂರು, ಸೆ.3: ಡಾಕ್ಟರ್ ವೈ ಎಸ್ ರಾಜಶೇಖ ರೆಡ್ಡಿ ಹಲವಾರು ಪಾದಯಾತ್ರೆಗಳನ್ನು ಕೈಗೊಂಡು ಆಂಧ್ರದಾದ್ಯಂತ ಹೆಸರಾಗಿದ್ದರು. ಆಂಧ್ರ ಪ್ರದೇಶದ ಮುಖ್ಯಮಂತ್ರಿ ಸ್ಥಾನವನ್ನು ಅಲಂಕರಿಸುವುದಕ್ಕೂಮುನ್ನ ಅವರು ಪಾದಯಾತ್ರೆಗಳ ಮೂಲಕ ಇಡೀ ರಾಜ್ಯದಲ್ಲಿ ಸುತ್ತಿದ್ದಾರೆ.

2003ರ ಮಧ್ಯ ಬೇಸಿಗೆಯಲ್ಲಿ 1400 ಕಿ.ಮೀಗಳ ಪಾದಾಯಾತ್ರೆಯನ್ನು ಕೈಗೊಂಡಿದ್ದರು. ಪಾದಯಾತ್ರೆ ಮೂಲಕ ರಾಜ್ಯದ ಹಿಂದುಳಿದ ಪ್ರದೇಶಗಳಲ್ಲಿನ ಪರಿಸ್ಥಿತಿಯನ್ನು ಹತ್ತಿರದಿಂದ ಗಮನಿಸಲು ಈ ಪಾದಾಯತ್ರೆ ಕೈಗೊಂಡಿದ್ದರು. ಇದರಿಂದ ಅಲ್ಲಿನ ಜನರ ನೈಜ ಸ್ಥಿತಿಗತಿಗಳನ್ನು ತಿಳಿದುಕೊಳ್ಳಲು ವೈಎಸ್ ಆರ್ ಗೆ ಸಹಾಯವಾಯಿತು.

ರಾಯಲಸೀಮೆ ಪ್ರಾಂತ್ಯದಲ್ಲೂ ವೈಎಸ್ ಆರ್ ಪಾದಯಾತ್ರೆ ಕೈಗೊಂಡಿದ್ದರು. ಕಾಂಗ್ರೆಸ್ ನ ಎಲ್ಲಾ ಶಾಸಕರನ್ನು ಒಟ್ಟುಗೂಡಿಸಿ ಅಲ್ಲಿನ ಕುಡಿಯುವ ನೀರಿನ ಸಮಸ್ಯೆಯನ್ನು ಬಗೆಹರಿಸಲು ಅನಿರ್ದಿಷ್ಟಕಾಲ ಉಪವಾಸ ಸತ್ಯಾಗ್ರಹ ಮಾಡಿದ್ದರು. ಕರ್ನೂಲು ಜಿಲ್ಲೆಯಲ್ಲೂ ಪಾದಯಾತ್ರೆ ಮಾಡಿದ್ದರು. ಲೇಪಾಕ್ಷಿಯಿಂದ ಪೋತಿರೆಡ್ಡಿಪಾಡುವರೆಗೂ ಅವರು ಕಾಲ್ನಡಿಗೆಯಲ್ಲಿ ಕ್ರಮಿಸಿ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸುವಂತೆ ಪಾದಯಾತ್ರೆ ಕೈಗೊಂಡಿದ್ದರು.

(ದಟ್ಸ್ ಕನ್ನಡ ವಾರ್ತೆ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+