ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಉಪ ಚುನಾವಣೆ;ಬಹಿರಂಗ ಪ್ರಚಾರಕ್ಕೆ ತೆರೆ

By Staff
|
Google Oneindia Kannada News

ಬೆಂಗಳೂರು, ಆ. 17: ಮಂಗಳವಾರ (ಆ. 18) ನಡೆಯಲಿರುವ ಐದು ವಿಧಾನಸಭೆ ಕ್ಷೇತ್ರಗಳ ಉಪಚುನಾವಣೆಯ ಬಹಿರಂಗ ಪ್ರಚಾರಕ್ಕೆ ಭಾನುವಾರ ತೆರೆಬಿದ್ದಿದೆ. ಆಡಳಿತ ಮತ್ತು ಪ್ರತಿಪಕ್ಷಗಳಿಗೆ ಸವಾಲಾಗಿ ಪರಿಣಮಿಸಿರುವ ಈ ಉಪಚುನಾವಣೆಗೆ ಎಲ್ಲಾ ರಾಜಕೀಯ ಪಕ್ಷಗಳು ಜಿದ್ದಾಜಿದ್ದಿನ ಪ್ರಚಾರ ಕೈಗೊಂಡಿದ್ದು ಮತದಾರರನ್ನು ಸೆಳೆಯಲು ಭಾರೀ ಕಸರತ್ತು ನಡೆಸಿದೆ.

ಬಿಜೆಪಿಗೆ ಭಾರೀ ಪ್ರತಿಷ್ಠೆಯ ಕಣವಾಗಿರುವ ಗೋವಿಂದರಾಜನಗರ ಕ್ಷೇತ್ರದ ಅಭ್ಯರ್ಥಿ ಸೋಮಣ್ಣ ಮನೆಮನೆಗೆ ತೆರಳಿ ಪ್ರಚಾರ ನಡೆಸಿದರೆ, ಸಮಬಲದ ಪೈಪೋಟಿ ನೀಡುತ್ತಿರುವ ಕಾಂಗ್ರೆಸ್ ಅಭ್ಯರ್ಥಿ ಪ್ರಿಯಕೃಷ್ಣ ತಮ್ಮ ಅಪಾರ ಕಾರ್ಯಕರ್ತರೊಂದಿಗೆ ತೆರಳಿ ಮತದಾರರನ್ನು ಸೆಳೆಯಲು ಪ್ರಯತ್ನ ನಡೆಸಿದ್ದಾರೆ. ರಾಮನಗರ, ಚನ್ನಪಟ್ಟಣ, ಕೊಳ್ಳೆಗಾಲ ಮತ್ತು ಚಿತ್ತಾಪುರದಲ್ಲಿ ಪ್ರಚಾರದ ಅಬ್ಬರ ತಾರಕಕ್ಕೇರಿದೆ.

ಕ್ಷೇತ್ರ ಬಿಟ್ಟು ಇಂದೇ ತೆರಳ ಬೇಕಾಗಿರುವುದರಿಂದ ಎಲ್ಲಾ ರಾಜಕೀಯ ಪಕ್ಷಗಳು ಕೊನೆ ಕಸರತ್ತು ನಡೆಸಿ ಭಾರೀ ಆಮಿಷ ಒಡ್ಡಿರುವ ಬಗ್ಗೆ ವರದಿಯಾಗಿದೆ. ಮತದಾರ ಪಟ್ಟಿಯಲ್ಲಿ ಹೆಸರು ಇಲ್ಲದವರು ಒಂದು ವೇಳೆ ಮತದಾನ ನಡೆಯುವ ಕೇಂದ್ರಗಳಲ್ಲಿ ಕಂಡು ಬಂದರೆ ತಕ್ಷಣವೇ ತಮ್ಮ ವಶಕ್ಕೆ ತೆಗೆದುಕೊಳ್ಳ ಬೇಕೆಂದು ಚುನಾವಣಾ ಆಯೋಗ ಪೊಲೀಸರಿಗೆ ಆದೇಶ ನೀಡಿದೆ.

ಚುನಾವಣೆಯ ದಿನಾಂಕ: ಮಂಗಳವಾರ, ಆಗಸ್ಟ್ 18
ಸಮಯ: ಬೆಳಿಗ್ಗೆ 7ರಿಂದ ಸಂಜೆ 5
ಮತಎಣಿಕೆ: ಶುಕ್ರವಾರ ಆಗಸ್ಟ್ 21

(ದಟ್ಸ್ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X