ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೆಂಗಳೂರಿನಲ್ಲಿ ಹಂದಿಜ್ವರಕ್ಕೆ ಮೊದಲ ಬಲಿ

By Staff
|
Google Oneindia Kannada News

First Swine flu death in Bengaluru
ಬೆಂಗಳೂರು, ಆ. 13 : ಹಂದಿಜ್ವರ ದೇಶದ ವಿವಿಧ ಭಾಗಗಳಲ್ಲಿ ಉಲ್ಭಣಿಸುತ್ತಿರುವ ಬೆನ್ನಲ್ಲೇ ಬೆಂಗಳೂರಿನಲ್ಲಿ ಈ ಮಾರಿಗೆ ಮಹಿಳೆಯೊಬ್ಬರು ಮೃತಪಟ್ಟಿದ್ದಾರೆ. ಬೆಂಗಳೂರಿನಲ್ಲಿ ಸಂಭವಿಸಿದ ಮೊದಲ ಎಚ್ 1 ಎನ್ 1 ಸಾವು ಇದಾಗಿದೆ. ಉಸಿರಾಟದ ತೊಂದರೆ ಮತ್ತು ಸಕ್ಕರೆ ಕಾಯಿಲೆಯಿಂದ ಬಳಲುತ್ತಿದ್ದ ಜಯನಗರದ ಟಿ ಬ್ಲಾಕ್ ನಲ್ಲಿರುವ ಸುದರ್ಶನ ವಿದ್ಯಾಮಂದಿರದ ಶಿಕ್ಷಕಿ ರೂಪ ಆನಂದ್ (26) ಎಚ್1 ಎನ್1 ಸೋಂಕಿನಿಂದ ಸೇಂಟ್ ಫಿಲೋಮಿನಾ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ. ಅವರ ಸಾವು ನಿನ್ನೆ ಸಂಭವಿಸಿತ್ತು. ವೈದ್ಯರು ಇಂದು ಧೃಢಪಡಿಸಿದ್ದಾರೆ.

ಈ ಕುರಿತು ವಿವರ ನೀಡಿರುವ ಸೇಂಟ್ ಫಿಲೋಮಿನಾ ಆಸ್ಪತ್ರೆಯ ನಿರ್ದೇಶಕ ಶಂಕರಪ್ರಸಾದ್, ಕಳೆದ ಆಗಸ್ಟ್ 7 ರಂದು ರೂಪಾ ಎಂಬುವವರು ಉಸಿರಾಟದ ತೊಂದರೆಯಿಂದ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ, ಬುಧವಾರ ಮಧ್ಯಾಹ್ನ 1 ಗಂಟೆಗೆ ಮೃತಪಟ್ಟಿದ್ದರು. ಅವರ ರಕ್ತ ಪರೀಕ್ಷೆ ನಡೆಸಲಾಗಿದ್ದು, ಅವರು ಎಚ್ 1ಎನ್1 ಸೋಂಕಿನಿಂದಲೇ ಸಾವಿಗೀಡಾಗಿದ್ದಾರೆ ಎನ್ನುವುದು ದೃಢಪಟ್ಟಿದೆ ಎಂದು ತಿಳಿಸಿದ್ದಾರೆ. ರೂಪ ಅವರು ಬಿಟಿಎಂ ಲೇಔಟ್ ನ ಎರಡನೇ ಹಂತದ ನಿವಾಸಿಯಾಗಿದ್ದಾರೆ. ರೂಪಾ ಅವರ ಪತಿ ಆನಂದ್, ಮೈಕೋ ಕಂಪನಿಯ ಉದ್ಯೋಗಿ ಆಗಿರುವರು. ರೂಪಾ ಆನಂದ್ ಅವರಿಗೆ ಎರಡು ಸಣ್ಣ ಮಕ್ಕಳಿದ್ದಾರೆ. ರೂಪಾ ಅವರು ಕೆಲಸ ನಿರ್ವಹಿಸುತ್ತಿದ್ದ ಸುದರ್ಶನ ವಿದ್ಯಾಮಂದಿರ ಶಾಲೆಗೆ ರಜೆ ನೀಡಲು ಸೂಚಿಸಲಾಗಿದೆ. ಶಾಲೆಯ ಸಿಬ್ಬಂದಿ ಹಾಗೂ ಮಕ್ಕಳು ಕೂಡಲೇ ಪರೀಕ್ಷೆಗೆ ಒಳಗಾಗಲು ವೈದ್ಯಾದಿಕಾರಿಗಳು ಸೂಚಿಸಿದ್ದಾರೆ.

ಇತ್ತೀಚಿನ ವರದಿಗಳ ಪ್ರಕಾರ ಮೃತ ರೂಪಾ ಅವರ ಪತಿ ಆನಂದ್ ಅವರು ಆಸ್ಪತ್ರೆಯ ವಿರುದ್ಧ ನಿರ್ಲಕ್ಷ್ಯದ ಆರೋಪ ಹೊರಿಸಿದ್ದಾರೆ. ಕೇವಲ ಜ್ವರ ಬಂದಿದೆ ಎಂದು ನಾವು ರೂಪಾಳನ್ನು ಆಸ್ಪತ್ರೆಗೆ ಸೇರಿಸಿದ್ದೆವು. ಆದರೆ ಹಂದಿಜ್ವರ ಬಂದಿರುವ ಕುರಿತು ಆಸ್ಪತ್ರೆ ತಮಗೆ ಯಾವುದೇ ಮಾಹಿತಿ ನೀಡಿರಲಿಲ್ಲ. ಅಲ್ಲದೆ, ಪರಿಣಿತ ವೈದ್ಯರ ನೆರವಿಲ್ಲದೆ ಆಸ್ಪತ್ರೆಯ ಆಡಳಿತ ಮಂಡಳಿ ತರಬೇತಿ ವೈದ್ಯರ ನೆರವಿನಿಂದಲೇ ಚಿಕಿತ್ಸೆ ನಡೆಸುತ್ತಿರುವುದು ದುರಂತ ಎಂದು ಆನಂದ್ ಹೇಳಿದ್ದಾರೆ.

(ದಟ್ಸ್ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X