ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಾಜಿ ಸೈನಿಕರಿಗೆ ನಂದಿನ ಹಾಲಿನ ಏಜೆನ್ಸಿ

By Staff
|
Google Oneindia Kannada News

ಕರ್ನಾಟಕ ಜ್ಞಾನ ಆಯೋಗಕ್ಕೆ ಡಾ: ಬಿ.ಟಿ. ರುದ್ರೇಶ್ ನಾಮ ನಿರ್ದೇಶನ

ಬೆಂಗಳೂರು, ಆ. 7 : ಕರ್ನಾಟಕ ಜ್ಞಾನ ಆಯೋಗಕ್ಕೆ ಹೆಸರಾಂತ ಹೋಮಿಯೋಪತಿ ವೈದ್ಯ ಡಾ: ಬಿ.ಟಿ. ರುದ್ರೇಶ್ ಅವರನ್ನು ಸದಸ್ಯರಾಗಿ ನೇಮಿಸಿ ಸರ್ಕಾರಿ ಆದೇಶ ಹೊರಡಿಸಲಾಗಿದೆ.
*****
ಚುನಾವಣಾ ಸಮೀಕ್ಷೆ ಪ್ರಸಾರ ನಿಷೇಧ

ಮತದಾನ ಮುಕ್ತಾಯವಾಗುವ ಹಿಂದಿನ 48 ಗಂಟೆ ಅವಧಿಯಲ್ಲಿ ಮಾಧ್ಯಮಗಳಲ್ಲಿ ಚುನಾವಣಾ ಸಮೀಕ್ಷೆ, ಮತಗಟ್ಟೆ ಸಮೀಕ್ಷೆ ಪ್ರಸಾರವನ್ನು, ಪ್ರಕಟಣೆ ಮಾಡುವುದನ್ನು ನಿಷೇಧಿಸಲಾಗಿದೆ ಎಂದು ಚುನಾವಣಾ ಆಯೋಗವು ತಿಳಿಸಿದೆ.
******
ಪ್ಲಾಸ್ಟಿಕ್ ಧ್ವಜ ಬಳಸದಿರಲು ಮನವಿ

ಸ್ವಾತಂತ್ರ್ಯೋತ್ಸವ ಹತ್ತಿರ ಬರುತ್ತಿದ್ದು, ಇದರ ಆಚರಣೆಗೆ ಸಾರ್ವಜನಿಕ ಕಛೇರಿ-ಸ್ಥಳಗಳಲ್ಲಿ ಹಾಗೂ ವಾಹನಗಳಲ್ಲಿ ಪ್ಲಾಸ್ಟಿಕ್ ಧ್ವಜ ಬಳಸುವ ಪರಿಪಾಠ ಬೆಳೆಯುತ್ತಿದೆ. ಈ ಪ್ಲಾಸ್ಟಿಕ್ ಧ್ವಜಗಳು ಉತ್ಸವದ ಆಚರಣೆ ನಂತರ ಹರಿದು ಕಸವಾಗಿ ಚರಂಡಿ ಸೇರುತ್ತವೆ. ಇದರಿಂದ ಪ್ಲಾಸ್ಟಿಕ್ ಮಾಲಿನ್ಯ ಹೆಚ್ಚಾಗಿ ಆರೋಗ್ಯಕ್ಕೆ ಹಾನಿ ಉಂಟು ಮಾಡುತ್ತದೆ. ಇದರಲ್ಲಿ ಬಳಸುವ ಕೃತಕ ರಾಸಾಯನಿಕ ಬಣ್ಣಗಳು ನೀರು ಹಾಗೂ ಮಣ್ಣನ್ನು ಕಲುಷಿತಗೊಳಿಸುತ್ತವೆ. ಆದ್ದರಿಂದ ಸಾರ್ವಜನಿಕರು ಪ್ಲಾಸ್ಟಿಕ್ ಬಾವುಟ ಬಿಟ್ಟು ಹತ್ತಿಯ ಬಟ್ಟೆಯ ಅಥವಾ ಖಾದಿಯ ಧ್ವಜ ಬಳಸಿದರೆ ರಾಷ್ಟ್ರಕ್ಕೂ ಗೌರವ ಈ ಬಗ್ಗೆ ನಾಗರಿಕರು ಕಾಳಜಿ ವಹಿಸಲು ಪಶ್ಚಿಮಘಟ್ಟ ಸಂರಕ್ಷಣೆ ಕಾರ್ಯಪಡೆ ಅಧ್ಯಕ್ಷ ಅನಂತ ಹೆಗಡೆ ಆಶೀಸರ ಅವರು ಮನವಿ ಮಾಡಿದ್ದಾರೆ.
*********
ಮಾಜಿ ಸೈನಿಕರಿಗೆ ನಂದಿನ ಹಾಲಿನ ಏಜೆನ್ಸಿ

ಮೈಸೂರು ಮತ್ತು ಚಾಮರಾಜನಗರ ಜಿಲ್ಲೆಗಳಲ್ಲಿ ವಾಸವಿರುವ ಮಾಜಿ ಸೈನಿಕರಿಗೆ ಮೈಸೂರು ಚಾಮರಾಜನಗರ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘ ನಿಯಮಿತ ಇವರಿಂದ ನಂದಿನಿ ಹಾಲನ್ನು ವಿತರಿಸುವ ಏಜೆನ್ಸಿಯನ್ನು ನೀಡಲು ಮಂಜೂರಾತಿ ನೀಡಲಾಗುತ್ತಿದೆ. ಇಚ್ಚೆಯುಳ್ಳ ಮಾಜಿ ಸೈನಿಕರು ಉಪನಿರ್ದೇಶಕರು, ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆ ಇವರನ್ನು 0821-2425240 ರಲ್ಲಿ ಸಂಪರ್ಕಿಸಿ ಮಾಹಿತಿ ಪಡೆಯಬಹುದಾಗಿದೆ ಎಂದು ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆ ಉಪನಿರ್ದೇಶಕ ಆರ್ ಎಸ್ ವಿಶ್ವನಾಥ್ ತಿಳಿಸಿದ್ದಾರೆ.

(ದಟ್ಸ್ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X