ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸತ್ಯಂ ಮುಳುಗಿಸಿದ ರಾಜುಗೆ ರಾಜಮರ್ಯಾದೆ

By Staff
|
Google Oneindia Kannada News

ಹೈದರಾಬಾದ್, ಜು. 27 : ಸತ್ಯಂ ಕಂಪ್ಯೂಟರ್ಸ್ ನ ನಡೆದ ಬಹುಕೋಟಿ ರುಪಾಯಿಗಳ ಹಗರಣದ ಪ್ರಮುಖ ರೂವಾರಿ ರಾಮಲಿಂಗರಾಜು ಇದೀಗ ಜೈಲಿನಲ್ಲಿರುವುದು ಗೊತ್ತಿರುವ ಸಂಗತಿ. ಆದರೆ, ಕಳೆದ ಮೂರು ದಶಕಗಳಿಂದ ಸತ್ಯಂ ಎಂಬ ಚಿಕ್ಕ ಕಂಪನಿಯನ್ನು ದೇಶದ ಪ್ರಮುಖ ಸಾಫ್ಟ್ ವೇರ್ ಕಂಪನಿಯಾಗಿ ರೂಪಿಸುವಲ್ಲಿ ರಾಮಲಿಂಗರಾಜು ಅವರ ಬೆವರನ್ನು ಅಲ್ಲಗಳೆಯಲು ಸಾಧ್ಯವೇ ಇಲ್ಲ.

ಆದರೆ, ರಾಜು ಜೈಲು ಸೇರಿ 200 ದಿನ ಸಂದಿದೆ. ಕೈಗೊಂದು ಕಾಲಿಗೊಂದು ಆಳಿಟ್ಟುಕೊಂಡು ಮಹಾರಾಜನಂತೆ ಮರೆದಿದ್ದ ರಾಜು ಅಲಿಯಾಸ್ ಗೋಲ್ ಮಾಲ್ ರಾಜು, ಜೈಲಿನಲ್ಲಿ ಬೆಳ್ಳಿ, ಮುದ್ದೆ, ನೀರು ಸಾರು ಮೇಯುತ್ತಿರಬಹುದು ಎಂದು ನೀವು ಕನಿಕರ ಪಟ್ಟರೆ ಅದು ಸುಳ್ಳುಂತೆ. ಇದೀಗ ಬಂದಿರುವ ಮಾಹಿತಿ ಪ್ರಕಾರ. ರಾಮಲಿಂಗರಾಜು ಅವರ ಜೈಲಿನಲ್ಲಿ ಕೂಡಾ ಐಷಾರಾಮಿ ಜೀವನ ನಡೆಸುತ್ತಿದ್ದಾರೆ. ಜೈಲಿನ ಎಲ್ಲ ನೀತಿ ನಿಯಮಗಳನ್ನು ಗಾಳಿಗೆ ತೂರಿರುವ ಅವರು, ಐಷಾರಾಮಿ ಜೀವನಕ್ಕೆ ಬೇಕಿರುವ ಎಲ್ಲ ಅಗತ್ಯ ಸೌಲಭ್ಯಗಳನ್ನು ಹೊಂದಿದ್ದಾರೆ ಎಂದು ಆಂಧ್ರಪ್ರದೇಶ ಪ್ರಮುಖ ದೈನಿಕ ಈ ನಾಡು ಪತ್ರಿಕೆಯ ಇಂದಿನ ಸಂಚಿಕೆ ಮುಖಪುಟದಲ್ಲಿ ದಪ್ಪಕ್ಷರದಲ್ಲಿ ವರದಿ ಮಾಡಿದೆ. ರಾಜು ಅವರಿಗೆ ಸಿಗುತ್ತಿರುವ ಸೌಲಭ್ಯಗಳ ಪಟ್ಟಿ ಕೆಳಗಿನಂತಿದೆ.

* ರಾಮಲಿಂಗರಾಜು ಅವರು ಜೈಲು ಸೇರಿ ಬರೋಬ್ಬರಿ 200 ದಿನ
* ರಾಜು ಎಲ್ಲ ಖೈದಿಯಂತೆ ಸಾಮೂಹಿಕ ಊಟ ಮಾಡದೆ, ತಮಗೊಬ್ಬರಿಗೆ ಪ್ರತ್ಯೇಕವಾಗಿ ಅಡಿಗೆ ಮನೆಯನ್ನು ಹೊಂದಿದ್ದಾರೆ. ಜೊತೆಗೆ ಊಟದ ನಂತರ ವಾಯು ವಿಹಾರಕ್ಕೆ ಅವಕಾಶ. ಮತ್ತು ಬೇಸರವಾದರೆ, ಶಟಲ್ ಕಾಕ್ ಆಡಲು ಅವಕಾಶ ಮಾಡಿಕೊಡಲಾಗಿದೆ.
* ರಾಜು ಬಳಿ ಮೊಬೈಲ್ ಫೋನ್ ಇದೆ. ಲ್ಯಾಪ್ ಟಾಪ್ ಜೊತೆಗೆ ಅವರ ದಿನಚರಿ ಆರಂಭವಾಗುತ್ತದೆ.
* ರಾಜು ಅವರು ನಿತ್ಯವೂ ತಮ್ಮ ಮೊಬೈಲ್ ಮೂಲಕ ತಮ್ಮ ಕುಟುಂಬ ಮತ್ತು ಸ್ನೇಹಿತರೊಂದಿಗೆ ಹರಟೆ ಹೊಡೆಯುತ್ತಾರೆ.
* ರಾಜು ಮತ್ತು ಅವರ ಸಹೋದರ ಅವರಿಗೆ ಪ್ರತಿಷ್ಠಿತ ಹೋಟೆಲ್ ಗಳಿಂದ ಅವರಿಗೆ ತಿಂಡಿ ಮತ್ತು ಊಟ ಸರಬರಾಜಾಗುತ್ತದೆ. sea food and other spicy Andhra non-veg dishes ಲಭ್ಯವಿದೆ.
* ಕಾನೂನಿನ ಪ್ರಕಾರ ರಾಜು ಸಹೋದರರು ಜೈಲಿನಲ್ಲಿ ಬಿ ದರ್ಜೆ ಸೌಲಭ್ಯವನ್ನು ಹೊಂದಿದ್ದು, ಒಬ್ಬ ಶ್ರೀಮಂತ ವ್ಯಕ್ತಿ ನಡೆಸುವ ಮಟ್ಟಸವಾದ ಜೀವನವನ್ನು ರಾಜು ಜೈಲಿನಲ್ಲಿದ್ದು ನಡೆಸುತ್ತಿದ್ದಾರೆ. ಆದರೆ, ಒಂದು ವಿಷಯವೆಂದರೆ, ರಾಜುಗೆ ಸದ್ಯಕ್ಕೆ ದೊರೆಯುತ್ತಿರುವ ಅಷ್ಟೂ ಸೌಲಭ್ಯಗಳು ಕಾನೂನು ಬಾಹಿರ. ಆದರೂ ಕೂಡಾ ಅದರ ಸೌಲಭ್ಯ ಪಡೆಯುತ್ತಿದ್ದಾರೆ.

ಇನ್ನೊಂದು ಸಂಗತಿಯಂದರೆ, ರಾಜು ಸಹೋದರು ಇರುವ ಜೈಲಿನಲ್ಲೇ ಕೃಷಿ ಕೋ ಆಪರೇಟೀವ್ ಬ್ಯಾಂಕ್ ನ ಚೇರಮನ್ ಆಗಿದ್ದ ಕೆ ವೆಂಕಟೇಶ್ವರರಾವ್ ಕೂಡಾ ಇದ್ದಾರೆ. ಬ್ಯಾಂಕ್ ನ ಸುಮಾರು 40 ಕೋಟಿ ರುಪಾಯಿಗಳ ವಂಚನೆ ಪ್ರಕರಣಕ್ಕೆ ಅವರು ಜೈಲು ಪಾಲಾಗಿದ್ದಾರೆ. ಅವರು ಜೈಲು ಸೇರಿ ಅನೇಕ ವರ್ಷಗಳು ಕಳೆದಿವೆ. ಅವರೂ ಕೂಡಾ ಶ್ರೀಮಂತ ಜೀವನವನ್ನು ಜೈಲಿನಲ್ಲಿದ್ದುಕೊಂಡೆ ಕಳೆಯತೊಡಗಿದ್ದಾರೆ. ಆಂಧ್ರ ಪೊಲೀಸರು ಮಹಾನ್ ಭ್ರಷ್ಟರು ಎನ್ನುವುದು ತಿಳಿದಿರುವ ಸಂಗತಿ. ಇದನ್ನು ವರವಾಗಿ ಮಾಡಿಕೊಂಡಿರುವ ಈ ಇಬ್ಬರು ಶ್ರೀಮಂತ ಕಳ್ಳರು ಜೈಲಿನಲ್ಲೇ ಸಕತ್ತಾಗಿ ಮಜಾ ಉಡಾಯಿಸತೊಡಗಿದ್ದಾರೆ ಎಂದು ಪತ್ರಿಕೆ ವರದಿ ಮಾಡಿದೆ.

(ಏಜನ್ಸೀಸ್)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X