ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೊದಲ ತ್ರೈಮಾಸಿಕದಲ್ಲಿ ವಿಪ್ರೋ ಗಳಿಕೆ ಇಳಿಮುಖ

By Staff
|
Google Oneindia Kannada News

Wipro Q1 reports decline in net sales
ಮುಂಬೈ, ಜು. 22 : ಭಾರತದ 3 ನೇ ಅತಿದೊಡ್ಡ ಸಾಫ್ಟ್ ವೇರ್ ಕಂಪನಿ ವಿಪ್ರೋ ಸಂಸ್ಥೆ ಮಂಗಳವಾರ ತನ್ನ 2009ನೇ ಆರ್ಥಿಕ ವರ್ಷದ ಹಾಗೂ ಮೊದಲ ತ್ರೈಮಾಸಿಕ (ಜೂನ್ 31) ವರದಿಯನ್ನು ಬಿಡುಗಡೆ ಮಾಡಿದೆ. ಆರ್ಥಿಕ ಕುಸಿತದ ಹಿನ್ನೆಲೆಯಲ್ಲಿ ಮೊದಲ ತ್ರೈಮಾಸಿಕದ ಒಟ್ಟಾರೆ ಲಾಭಾಂಶದಲ್ಲಿ ಇಳಿಮುಖ ಕಂಡಿದೆ ವಿಪ್ರೋ ಸಂಸ್ಥೆ ತಿಳಿಸಿದೆ.

ಕಳೆದ ವರ್ಷದ ಮೊದಲ ತ್ರೈಮಾಸಿಕದಲ್ಲಿ ಶೇ. 12 ರಷ್ಟು ಲಾಭವಾಗಿತ್ತು. ಆದರೆ, ಆರ್ಥಿಕ ಕುಸಿತದ ಪರಿಣಾಮ ಇನ್ನೂ ಮುಂದುವರೆದಿದ್ದು, ಪ್ರಸ್ತುತ ವರ್ಷದ ಶೇ, 0.54 ರಷ್ಟು ಮಾತ್ರ ಲಾಭಾಂಶವಾಗಿದೆ. ಕಳೆದ ವರ್ಷಕ್ಕಿಂತ ಗಣನೀಯ ಪ್ರಮಾಣದಲ್ಲಿ ಕುಸಿತ ಕಂಡಂತಾಗಿದೆ. ಆದರೆ ಕಂಪನಿಯ ಒಟ್ಟಾರೆ ಆದಾಯ 1015.50 ಕೋಟಿ ರುಪಾಯಿ ಆಗಿದೆ.

ವಿಪ್ರೊ ಸಂಸ್ಥೆಯ ನಿವ್ವಳ ಆದಾಯ 6289 ಕೋಟಿ ರು.ಗಳು. ಸಂಸ್ಥೆ ಕಳೆದ ವರ್ಷದ ಇದೇ ತ್ರೈಮಾಸಿಕದಲ್ಲಿ 6482 ಕೋಟಿ ರು.ಗಳಷ್ಟು ನಿವ್ವಳ ಲಾಭ ಗಳಿಸಿತ್ತು. ಜೂನ್.31, 2009ರ ವರ್ಷ್ಯಾಂತ್ಯಕ್ಕೆ ಕಂಪನಿಯ ನಿವ್ವಳ ಲಾಭ ಶೇ.5 ರಷ್ಟು ಅಂದರೆ 6289 ಕೋಟಿ ರು.ಗಳು. ಪ್ರಸ್ತುತ ವರ್ಷದಲ್ಲಿ ಕಂಪನಿಯು ತನ್ನ ಸ್ಥಿರತೆಯನ್ನು ಕಾಯ್ದುಕೊಂಡಿದೆ. ಮುಂದಿನ ದಿನಗಳಲ್ಲಿ ಉದ್ಯಮ ಚೇತರಿಸಿಕೊಳ್ಳುವ ಆಶಾಭಾವನೆ ಇದೆ. ಸಾಫ್ಟ್ ವೇರ್ ಸೇವೆ ಉತ್ತಮಗೊಳ್ಳುವ ವಾತಾವರಣ ನಿರ್ಮಾಣವಾಗತೊಡಗಿದೆ ಎಂದು ವಿಪ್ರೋ ಮುಖ್ಯಸ್ಥ ಅಜೀಂ ಪ್ರೇಮ್ ಜಿ ಹೇಳಿದರು.

(ಏಜನ್ಸೀಸ್)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X