ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಾಳೆ (ಜು.22) ಅಪೂರ್ವ ಸೂರ್ಯಗ್ರಹಣ

By Staff
|
Google Oneindia Kannada News

ನವದೆಹಲಿ, ಜು. 21 : ಅರಬ್ಬೀ ಸಮುದ್ರದಲ್ಲಿ ಬುಧವಾರ ಸ್ಥಳೀಯ ಕಾಲಮಾನ ಬೆಳಿಗ್ಗೆ 5.28 ಕ್ಕೆ ಆರಂಭಗೊಳ್ಳುವ 21ನೇ ಶತಮಾನದ ಸುಧೀರ್ಘ ಸೂರ್ಯಗ್ರಹಣ 10.42 ಕ್ಕೆ ಅಂತ್ಯಗೊಳ್ಳಲಿದೆ. ಮತ್ತೆ ಇದೇ ರೀತಿಯ ಸುಧೀರ್ಘ ಸೂರ್ಯಗ್ರಹಣ ವೀಕ್ಷಿಸಲು 2132ನೇ ಇಸವಿಯವರೆಗೆ ಕಾಯಬೇಕು. ಈ ಹಿಂದೆ 1999 ರಲ್ಲಿ ಸಂಭವಿಸಿತ್ತಾದರೂ ಐರೋಪ್ಯ ದೇಶಗಳಲ್ಲಿ ಮಾತ್ರ ಕಾಣಿಸಿಕೊಂಡಿತ್ತು.

ಗುಜರಾತ್, ಮಧ್ಯಪ್ರದೇಶ, ಉತ್ತರಪ್ರದೇಶ, ಬಿಹಾರ್ ಮತ್ತು ಈಶಾನ್ಯ ರಾಜ್ಯಗಳಲ್ಲಿ ಪೂರ್ಣಗ್ರಹಣ ಗೋಚರವಾಗಲಿದೆ. ಪಾಟ್ನಾ ಮತ್ತು ಸೂರತ್ ಗ್ರಹಣ ವೀಕ್ಷಿಸಲು ಪ್ರಶಸ್ತ ಸ್ಥಳ. ಸೂರ್ಯನ ಅತಿನೇರಳೆ ಕಿರಣಗಳು ಭೂಮಿ ಮೇಲೆ ಬೀಳುವುದರಿಂದ ಬರಿಗಣ್ಣಿನಿಂದ ವೀಕ್ಷಿಸಿದರೆ ಕಣ್ಣಿನ ಸೂಕ್ಷ್ಮ ಪೊರೆಗಳು ಸುಟ್ಟು ಹೋಗುವ ಅಪಾಯವಿರುವುದರಿಂದ ಇದಕ್ಕಾಗಿಯೇ ಸಿದ್ಧಪಡಿಸಿದ ವಿಶೇಷ ಕನ್ನಡಕದಲ್ಲೇ ಗ್ರಹಣ ವಿಕ್ಷೀಸಬೇಕೆಂದು ವಿಜ್ಞಾನಿಗಳು ಹೇಳಿದ್ದಾರೆ.

ರಾಜ್ಯದಲ್ಲಿ ಆಂಶಿಕ ಗ್ರಹಣ ಗೋಚರವಾಗುತ್ತದೆ. ರಾಜ್ಯದಲ್ಲಿ ಬೆಳಗ್ಗೆ 6.03 ಕ್ಕೆ ಗ್ರಹಣ ಸ್ಪರ್ಶಕಾಲ ಮತ್ತು 7.17 ಕ್ಕೆ ಮೋಕ್ಷವಾಗಲಿದೆ. ಈ ಸೂರ್ಯಗ್ರಹಣವು ಪುಷ್ಯ, ಪುನರ್ವಸು, ಆಶ್ಲೇಷಾ, ಅನುರಾಧಾ, ಉತ್ತರಾಭಾದ್ರ ನಕ್ಷತ್ರದವರಿಗೂ ಕರ್ಕಾಟಕ, ಸಿಂಹ, ಧನುಸ್ಸು, ಮತ್ತು ಮೇಷ ರಾಶಿಯವರಲ್ಲೂ ಕಾಣುವುದು ಎಂದು ಜ್ಯೋತಿಷಿ ಕೆ ಎನ್ ಸೋಮಯಾಜಿ ಹೇಳಿದ್ದಾರೆ.

ಚಂದ್ರಗ್ರಹಣ, ಸೂರ್ಯ ಗ್ರಹಣವನ್ನು ಬರಿಗಣ್ಣಿನಿಂದ ನೋಡಬಾರದು. ಭೂಮಿ ಮತ್ತು ಸೂರ್ಯನ ನಡುವೆ ಚಂದ್ರ ಬಂದಾಗ ಸೂರ್ಯನ ಅತಿನೇರಳೆ ಕಿರಣಗಳು ಭೂಮಿ ಮೇಲೆ ಬೀಳುವುದರಿಂದ ಬರಿಗಣ್ಣಿನಿಂದ ವೀಕ್ಷಿಸುವ ಕಣ್ಣಿನ ಸೂಕ್ಷ್ಮ ಪೊರೆಗಳು ಸುಟ್ಟು ಹೋಗುವ ಅಪಾಯವಿದೆ. ಅದ್ದರಿಂದ ಬರಿಗಣ್ಣಿನಿಂದ ಗ್ರಹಣ ನೋಡಲೇಬಾರದು. ಖಗ್ರಾಸ ಅಥವಾ ಭಾಗಶಃ ಸೂರ್ಯಗ್ರಹಣ ವೀಕ್ಷಣೆ ಸುಯೋಗವೇ ಸರಿ. ಅದನ್ನು ನೋಡಬೇಕಾದರೆ ಇದಕ್ಕಾಗಿ ವಿಜ್ಞಾನಿಗಳು ಸಿದ್ಧಪಡಿಸಿದ ವಿಶೇಷ ಕನ್ನಡಕ ಧರಿಸಿ ನೋಡಬೇಕು ಹಾಗೂ ವಿಜ್ಞಾನಿಗಳು ಸೂಚನೆಯನ್ನು ಪಾಲಿಸಿ ಎಂದು ಸಲಹೆ ನೀಡಿದ್ದಾರೆ.

(ದಟ್ಸ್ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X