ಮುಂಬೈ ದಾಳಿ : ಕಸಬ್ ನಿಂದ ಮತ್ತಷ್ಟು ಮಾಹಿತಿ

ಈ ಹೇಳಿಕೆಯನ್ನು ಸ್ಪಷ್ಟವಾಗಿ ತಳ್ಳಿಹಾಕಿರುವ ಕಸಬ್ ಪರ ವಕೀಲ ಅಬ್ಬಾಸ್ ಕಜ್ಮಿ, ಕಸಬ್ ನಿಗೆ ಮಾನಸಿಕ ಹಿಂಸೆ ನೀಡಲಾಗಿದೆ. ಪೊಲೀಸರು ಆತನಿಗೆ ಚಿತ್ರಹಿಂಸೆ ನೀಡಿದ್ದಲ್ಲದೇ ನ್ಯಾಯಾಲಯದಲ್ಲಿ ಸುಳ್ಳು ಹೇಳಿಕೆ ನೀಡವಂತೆ ಒತ್ತಡ ಹೇರಲಾಗಿದೆ. ಈ ಹಿನ್ನೆಲೆಯಲ್ಲಿ ಕಸಬ್ ಹೇಳಿಕೆಯನ್ನು ತಪ್ಪೊಪ್ಪಿಗೆಯಂತೆ ಪರಿಗಣಿಸಬಾರದು ಎಂದು ಕಜ್ಮಿ ನ್ಯಾಯಾಲಯಕ್ಕೆ ಮನವಿ ಮಾಡಿಕೊಂಡಿದ್ದಾರೆ.
ಎಟಿಎಸ್ ಮುಖ್ಯಸ್ಥ ಹೇಮಂತ್ ಕರ್ಕರೆ ಕೊಂದಿದ್ದು, ಕಾಮಾ ಆಸ್ಪತ್ರೆ ಮೇಲೆ ಧಾಳಿ ಸೇರಿದಂತೆ ಮುಂಬೈನಲ್ಲಿ ನಡೆದ ಭಯೋತ್ಪಾದನಾ ಕೃತ್ಯಗಳಿಗೆ ನೇರವಾಗಿ ಭಾಗಿ ಆಗಿದ್ದನ್ನು ಸೋಮವಾರ ಕಸಬ್ ಸ್ಪಷ್ಟಪಡಿಸಿದ್ದ. ವಿಶೇಷ ನ್ಯಾಯಾಲಯದಲ್ಲಿ ಉಗ್ರ ಕಸಬ್ ತಪ್ಪೊಪ್ಪಿಗೆ ಹೇಳಿಕೆ ಅನಿರೀಕ್ಷಿತ ಎಂದು ಕಸಬ್ ಪರ ಸರ್ಕಾರಿ ವಕೀಲ ಉಜ್ವಲ್ ನಿಕ್ಕಂ ಪ್ರತಿಕ್ರಿಯಿಸಿದ್ದಾರೆ.
ಝಾಕೀರ್ ಉರ್ ರಹಮಾನ್ ಲಕ್ವಿಯ ನಿರ್ದೇಶನದ ಮೇರೆಗೆ ಆತ್ಮಾಹುತಿ(ಫಿದಾಯಿನ್) ದಾಳಿ ನಡೆಸಲು ನಮ್ಮ ತಂಡ ಮುಂಬೈಗೆ ಸಣ್ಣ ಬೋಟ್ ಮೂಲಕ ಬಂದೆವು ಎಂದು ಕಸಬ್ ಹೇಳಿದ್ದಾನೆ. ಇದಲ್ಲದೆ ಮುಂಬೈ ಪೊಲೀಸರ ಬಳಿ ಇರುವ ಆರೋಪ ಪಟ್ಟಿಯಲ್ಲಿನ ಹಲವರ ಹೆಸರುಗಳನ್ನು ಕಸಬ್ ಸೂಚಿಸಿದ್ದಾನೆ.
ಇದುವರೆಗೂ 150 ಜನ ಸಾಕ್ಷಿಗಳಲ್ಲಿ 133 ಸಾಕ್ಷಿಗಳ ವಿಚಾರಣೆ ಮುಗಿದಿದೆ. ಮುಂಬೈ ಮೇಲೆ ನಡೆದ 26/11 ದಾಳಿಯಲ್ಲಿ 150ಕ್ಕೂ ಹೆಚ್ಚು ಜನ ಸಾವನ್ನಪ್ಪಿದ್ದರು. ಗಲ್ಲು ಶಿಕ್ಷೆ ತಪ್ಪಿಸಿಕೊಳ್ಳಲು ಕಸಬ್ ಈ ರೀತಿ ಹೇಳಿಕೆನೀಡಿರುವ ಸಾಧ್ಯತೆಯಿದೆ.
(ಎಜೆನ್ಸೀಸ್)












Click it and Unblock the Notifications