ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೆಂಗಳೂರು ಸುಧಾರಿಸಲು ಕೋರಮಂಗಲಕ್ಕೆ ಬನ್ನಿ

By Staff
|
Google Oneindia Kannada News

Rajiv chandrashekher and Ananth Kumar
ಪ್ರಿಯ ಬೆಂಗಳೂರಿಗರೆ,

ಸಹನೀಯ ಬೆಂಗಳೂರಿನ ಭವ್ಯ ಕನಸು ಕಾಣುತ್ತಿರುವ ನಾಗರಿಕರ ಕಾರ್ಯಪಡೆಯ ಹೆಸರು ಎಬಿಐಡಿಇ. ABIDe ಕಾರ್ಯಪಡೆಯ ಧ್ಯೇಯೋದ್ದೇಶ ಮತ್ತು ಕಾರ್ಯಚಟುವಟಿಕೆಗಳನ್ನು ನಿಮಗೆ ಈ ಮೂಲಕ ಪರಿಚಯ ಮಾಡಿಕೊಡಲು ಹರ್ಷಿಸುತ್ತೇವೆ. ನಾಳೆ ಭಾನುವಾರ ನಾವು ಬೆಂಗಳೂರಿನಲ್ಲಿ ಏರ್ಪಡಿಸಿರುವ ಸಾರ್ವಜನಿಕ ಸಮಾವೇಶ ಕಾರ್ಯಕ್ರಮ ಹಾಗೂ ಸಂಸ್ಥೆಯ ಬಗೆಗಿನ ಕೆಲವು ವಿವರಗಳು ಕೆಳಕಂಡಂತಿವೆ. ದಯಮಾಡಿ ಓದಿ, ಭಾಗವಹಿಸಿ, ಬೆಂಗಳೂರು ಬೆಳವಣಿಗೆಗೆ ನಿಮ್ಮ ಅಮೂಲ್ಯ ಸಲಹೆ ಸಹಕಾರ ನೀಡಿರಿ.

ABIDe ಎಂದರೆ ಅಜೆಂಡ ಫಾರ್ ಬೆಂಗಳೂರು ಇನ್ಫ್ರಾಸ್ಟ್ರ ಕ್ಚರ್ ಅಂಡ್ ಡೆವಲಪ್ ಮೆಂಟ್ ಟಾಸ್ಕ್ ಫೋರ್ಸ್.(Agenda for Bengaluru Infrastructure and Development Task Force)ಮಾನ್ಯ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಅವರ ಮಹತ್ವಾಕಾಂಕ್ಷೆಯ ಯೋಜನೆ ಇದಾಗಿದೆ. ಈ ಕಾರ್ಯಪಡೆಯಲ್ಲಿ ನಗರವನ್ನು ಪ್ರೀತಿಸುವ ಬೆಂಗಳೂರಿನ ಗಣ್ಯ ನಾಗರಿಕರು, ನಾಯಕರು ಇರುತ್ತಾರೆ.ಅವರೆಲ್ಲ ಸ್ವಯಂಪ್ರೇರಿತರಾಗಿ ಈ ಯಜ್ಞದಲ್ಲಿ ಭಾಗವಹಿಸುತ್ತಿದ್ದಾರೆ. ಲೋಕಸಭಾ ಸದಸ್ಯ ಅನಂತ್ ಕುಮಾರ್ ಅಬೈಡ್ ನ ಉಪಾಧ್ಯಕ್ಷರಾಗಿ ಮತ್ತು ರಾಜ್ಯ ಸಭಾ ಸದಸ್ಯ ರಾಜೀವ್ ಚಂದ್ರಶೇಖರ್ ಸಂಚಾಲಕರಾಗಿ ಕಾರ್ಯಪಡೆಯ ಉಸ್ತುವಾರಿ ವಹಿಸಿದ್ದಾರೆ. ಬೆಂಗಳೂರಿನ ಸರ್ವತೋಮುಖ ಅಭಿವೃದ್ಧಿಗೆ ಅಬೈಡ್ ಸದಸ್ಯರು ಇದುವರೆಗೆ ಅನೇಕ ಶಿಫಾರಸುಗಳನ್ನು ಮಾಡಿದ್ದಾರೆ. ನಿರ್ದಿಷ್ಟ ಕ್ಷೇತ್ರಗಳು ಹೀಗಿವೆ:

*ಪ್ರಾದೇಶಿಕ ಆಡಳಿತ
*ಸಂಚಾರ ಮತ್ತು ಸಾರಿಗೆ
*ಪರಂಪರೆ

ಮೇಲಿನ ಮೂರೂ ವಿಭಾಗಗಳಿಗೆ ಅನ್ವಯವಾಗುವಂತಹ ಶಿಫಾರಸುಗಳನ್ನು ಈಗಾಗಲೇ ಇಂಟರ್ ನೆಟ್ಟಿನಲ್ಲಿ ಪ್ರಕಟಿಸಲಾಗಿದೆ. ಈ ವರದಿಗಳು ನಿಮಗೆ www.abidebengaluru.in. ಜಾಲತಾಣದಲ್ಲಿ ಲಭ್ಯವಿದೆ. ಇದು ಕೇವಲ ಶಿಫಾರಸ್ಸುಗಳಾಗಿರದೆ ಕಾರ್ಯರೂಪಕ್ಕೆ ತರಲು ಯೋಗ್ಯವಾದ ನೀಲನಕ್ಷೆ ಕೂಡ ಸಿದ್ಧವಾಗಿದೆ. ಗಮನಿಸಿ.

ಮೂಲಸೌಲಭ್ಯ ಕ್ಷೇತ್ರದಲ್ಲಿ ಕಾರ್ಯಪಡೆ ಮಾಡಿರುವ ಅನೇಕ ಸಲಹೆಗಳನ್ನು ಕಾರ್ಯರೂಪಕ್ಕೆ ತರುವ ನಿಟ್ಟಿನಲ್ಲಿ ಸರಕಾರ ಮಾನಸಿಕವಾಗಿ ಸಿದ್ಧವಾಗಿದೆ. ಶಿಫಾರಸುಗಳನ್ನು ಕಾರ್ಯರೂಪಕ್ಕೆ ತರಲು ಬರಲಿರುವ ದಿನಗಳಲ್ಲಿ ಸರಕಾರ ಶಾಸನ ರೂಪಿಸಲೂ ಆಲೋಚಿಸುತ್ತಿದೆ. ಇಂತಹ ಸಂದರ್ಭದಲ್ಲಿ ನಮ್ಮ ಶಿಫಾರಸುಗಳನ್ನು ಮತ್ತೊಮ್ಮೆ ಒರೆಗೆ ತಿಕ್ಕಿ ನೋಡುವ, ಓರೆಕೋರೆಗಳಿದ್ದರೆ ತಿದ್ದುಪಡಿ ಮಾಡುವ, ಹೊಸ ಸಲಹೆಗಳನ್ನು ಸ್ವೀಕರಿಸುವ ಕಾರ್ಯ ಹಮ್ಮಿಕೊಂಡಿದ್ದೇವೆ. ಈ ಸಮಾವೇಶದಲ್ಲಿ ಭಾಗವಹಿಸಿ ನಿಮ್ಮ ಚಿಂತನೆಗಳನ್ನು ಹಂಚಿಕೊಳ್ಳುತ್ತೀರೆಂಬ ಅಭಿಲಾಷೆ ನಮಗಿದೆ.

ಬೆಂಗಳೂರು ನಗರದ ನಾನಾ ಬಡಾವಣೆಗಳಲ್ಲಿ ಇಂತಹ ಸಾರ್ವಜನಿಕ ಸಲಹಾ ಕಮ್ಮಟಗಳನ್ನು ಆಯೋಜಿಸಲಾಗಿದೆ. ಮೊಟ್ಟಮೊದಲ ಸಮಾವೇಶ ನಾಳೆ, ಅಂದರೆ 2009ರ ಜುಲೈ 12ರ ಭಾನುವಾರದಂದು ವ್ಯವಸ್ಥೆಯಾಗಿದೆ. ಸ್ಥಳ : ಬಿಲ್ಡರ್ಸ್ ಕ್ಲಬ್, ನ್ಯಾಷನಲ್ ಗೇಮ್ಸ್ ವಿಲೇಜ್, ಕೋರಮಂಗಲ, ಬೆಂಗಳೂರು.ಸಮಯ ಬೆಳಗ್ಗೆ 11 ಗಂಟೆ.ಈ ಕಾರ್ಯಕ್ರಮಕ್ಕೆ ತಾವು ಆಗಮಿಸುತ್ತೀರೆಂದೂ, ಕಾರ್ಯಪಡೆಗೆ ಉಪಯುಕ್ತ ಸಲಹೆಗಳನ್ನು ನೀಡಿ ಉತ್ತಮ ಬೆಂಗಳೂರನ್ನು ನಿರ್ಮಿಸಲು ಹೆಗಲು ಕೊಡುತ್ತೀರೆಂದೂ ಆಶಿಸುತ್ತೇವೆ.

ನಾಳೆ ಸಿಗೋಣ,

ಸುರೇಶ್ ಎನ್ ಆರ್, ಕಾರ್ಯಕ್ರಮ ಸಂಯೋಜಕ,ಅಬೈಡ್ ಬೆಂಗಳೂರು[email protected]

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X