ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹೊಸ ಮದ್ಯದಂಗಡಿ ನಿರ್ವಹಣೆ ಎಂಎಸ್ಐಎಲ್‌ಗೆ

By Staff
|
Google Oneindia Kannada News

ಬೆಂಗಳೂರು, ಜು.3: ರಾಜ್ಯದಲ್ಲಿ ಹೊಸದಾಗಿ ಆರಂಭವಾಗುವ 450 ಮದ್ಯದಂಗಡಿಗಳನ್ನು ಮೈಸೂರು ಸೇಲ್ಸ್ ಇಂಟರ್ ನ್ಯಾಶನಲ್ ಲಿ. (ಎಂಎಸ್ಐಎಲ್) ಮೂಲಕ ಸರಕಾರವೇ ನಿರ್ವಹಿಸಲಿದೆ. ಸರಕಾರ ಹೊಸದಾಗಿ ಮದ್ಯದಂಗಡಿಗಳನ್ನು ಪ್ರಾರಂಭಿಸುತ್ತಿಲ್ಲ. ಈ ಹಿಂದೆ ಲೈಸೆನ್ಸ್ ಪಡೆದ 450 ಮಂದಿ ಅಂಗಡಿಗಳನ್ನು ಪ್ರಾರಂಭಿಸದೇ ಇರುವ ಕಾರಣ ಅದೇ ಪ್ರಮಾಣದ ಲೈಸೆನ್ಸ್ ನೀಡಲಾಗುತ್ತಿದೆ ಎಂದು ಅಬಕಾರಿ ಸಚಿವ ಕಟ್ಟಾಸುಬ್ರಹ್ಮಣ್ಯ ನಾಯ್ಡು ತಿಳಿಸಿದರು.

ಗ್ರಾಮೀಣ ಪ್ರದೇಶದಲ್ಲಿ 5 ಕಿ.ಮೀ. ವ್ಯಾಪ್ತಿಗೆ ಒಂದರಂತೆ ಒಂದು ಮದ್ಯದಂಗಡಿ ಇರಬೇಕು ಎನ್ನುವುದು ನಿಯಮ. ಕೆಲವು ಪ್ರದೇಶಗಳಲ್ಲಿ ಈ ಪ್ರಮಾಣದ ಅಂಗಡಿಗಳಿಲ್ಲ. ಆದ್ದರಿಂದ ಅಧಿಕೃತ ಅಂಗಡಿಗಳಿಂದ ಮದ್ಯವನ್ನು ತಂದು ದಿನಸಿ ಮತ್ತಿತರ ಅಂಗಡಿಗಳಲ್ಲಿ ದುಬಾರಿ ದರದಲ್ಲಿ ಮಾರಾಟ ಮಾಡುತ್ತಿರುವ ಪ್ರಕರಣ ಸರಕಾರದ ಗಮನಕ್ಕೆ ಬಂದಿದೆ. ಆ ಹಿನ್ನೆಲೆಯಲ್ಲಿ ಬಳಸದೇ ಇರುವ 450ಲೈಸೆ ನ್ಸ್ ಗಳಿಗೆ ಮರುಜೀವ ನೀಡಿ ಎಂಎಸ್ಐಎಲ್ ಮೂಲಕ 450 ಅಂಗಡಿ ತೆರೆಯಲು ನಿರ್ಧರಿಸಲಾಗಿದೆ.

ಇದು ಮದ್ಯ ಸೇವನೆಗೆ ಸರಕಾರವೇ ಉತ್ತೇಜನ ನೀಡುವ ಕ್ರಮ ಅಲ್ಲ ಎಂದು ಕಟ್ಟಾ ಹೇಳಿದರು.ಗ್ರಾಮೀಣ ಮತ್ತು ಸಣ್ಣ ಪಟ್ಟಣ ಪ್ರದೇಶಗಳಲ್ಲಿ ಸನ್ನದು ಶುಲ್ಕವನ್ನು 2ಲಕ್ಷ ರೂ.ಗಳಿಂದ 3 ಲಕ್ಷ ರೂ.ಗೆ ಹಾಗೂ 2.50 ಲಕ್ಷ ರೂ.ನಿಂದ 3.20 ರೂ.ಗೆ ಹೆಚ್ಚಿಸಲಾಗಿದೆ ಎಂದು ಕಟ್ಟಾ ವಿವರ ನೀಡಿದರು.

(ದಟ್ಸ್ ಕನ್ನಡವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X