ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಾಬ್ರಿ ಧ್ವಂಸ : ಲಿಬರ್ಹಾನ್ ಸಮಿತಿ ವರದಿ ಸಲ್ಲಿಕೆ

By Staff
|
Google Oneindia Kannada News

 Liberhan Comm report on Babri demolition submitted to PM
ನವದೆಹಲಿ, ಜೂ. 30 : 1992 ರಲ್ಲಿ ನಡೆದ ವಿವಾದಾತ್ಮಕ ಬಾಬ್ರಿ ಮಸೀದಿ ಧ್ವಂಸ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆಗಾಗಿ ನೇಮಿಸಿದ್ದ ಲಿಬರ್ಹಾನ್ ಸಮಿತಿ ಇಂದು ಪ್ರಧಾನಮಂತ್ರಿ ಮನಮೋಹನ್ ಸಿಂಗ್ ಅವರಿಗೆ ತನ್ನ ವರದಿ ನೀಡಿತು.

ಲಿಬರ್ಹಾನ್ ಸಮಿತಿಯ ನೇತೃತ್ವ ವಹಿಸಿದ್ದ ನಿವೃತ್ತ ನ್ಯಾಯಮೂರ್ತಿ ಎಂ ಎಸ್ ಲಿಬರ್ಹಾನ್ ಅವರು ಇಂದು ಪ್ರಧಾನಮಂತ್ರಿ ನಿವಾಸದಲ್ಲಿ ಮನಮೋಹನ್ ಸಿಂಗ್ ಅವರಿಗೆ ಸುಮಾರು 17 ವರ್ಷಗಳ ನಂತರ ಬಾಬ್ರಿ ಧ್ವಂಸ ಸಂಬಂಧಿಸಿದ ವರದಿಯನ್ನು ನೀಡಿದರು. ಈ ಸಂದರ್ಭದಲ್ಲಿ ಗೃಹ ಸಚಿವ ಪಿ ಚಿದಂಬರಂ ಉಪಸ್ಥಿತರಿದ್ದರು. ಲಿಬರ್ಹಾನ್ ಸಮಿತಿ ನೀಡಿರುವ ವರದಿಯಲ್ಲಿ ಏನಿದೆ ಎನ್ನುವುದು ಈವರೆಗೂ ತಿಳಿದು ಬಂದಿಲ್ಲ. ಸಂಜೆ ವೇಳೆಗೆ ವರದಿಯಲ್ಲಿರುವ ಎಲ್ಲ ಅಂಶಗಳು ಬಹಿರಂಗವಾಗುವ ಸಾಧ್ಯತೆಯಿದೆ.

* ಡಿಸೆಂಬರ್ 6, 1992 ರಂದು ಐತಿಹಾಸಿಕ ಬಾಬ್ರಿ ಮಸೀದಿಯನ್ನು ಧ್ವಂಸಗೊಳಿಸಲಾಯಿತು.
* ಬಾಬ್ರಿ ಮಸೀದಿ ಧ್ವಂಸ ಇಡೀ ಭಾರತಾದ್ಯಂತ ಕೋಮು ಗಲಭೆಗೆ ಕಾರಣವಾಯಿತು.
* ಆಗ ಉತ್ತರ ಪ್ರದೇಶದಲ್ಲಿ ಬಿಜೆಪಿ ಸರಕಾರವಿತ್ತು. ಕಲ್ಯಾಣ ಸಿಂಗ್ ಮುಖ್ಯಮಂತ್ರಿಯಾಗಿದ್ದರು.
* ಕೇಂದ್ರದಲ್ಲಿ ಕಾಂಗ್ರೆಸ್ ಸರಕಾರವಿತ್ತು. ಪಿ ವಿ ನರಸಿಂಹರಾವ್ ಪ್ರಧಾನಿಯಾಗಿದ್ದರು.
* ಕೋಮು ಗಲಭೆಯಲ್ಲಿ ಅನೇಕ ಸಾವು ನೋವುಗಳು ಸಂಭವಿಸಿದ್ದವು.
* ಬಾಬ್ರಿ ಮಸೀದಿ ಧ್ವಂಸಕ್ಕೆ ಬಿಜೆಪಿಯ ಹಿರಿಯ ಎಲ್ ಕೆ ಅಡ್ವಾಣಿ, ಮುರಳಿ ಮನೋಹರ್ ಜೋಶಿ ಹಾಗೂ ಮಾಜಿ ಮುಖ್ಯಮಂತ್ರಿ ಕಲ್ಯಾಣ ಸಿಂಗ್ ಅವರು ನೇತೃತ್ವ ವಹಿಸಿದ್ದರು ಎಂದು ಆರೋಪಿಸಿಲಾಗಿತ್ತು.
* ವರದಿಯಲ್ಲಿ ಏನಿದೆ ಎಂದು ತಿಳಿದಿಲ್ಲ.

1992 ಡಿಸೆಂಬರ್ 6 ರಂದು ಬಾಬ್ರಿ ಮಸೀದಿ ಧ್ವಂಸವಾಯಿತು. ಆಂದಿನ ಕೇಂದ್ರ ಸರಕಾರ ಸಮಗ್ರ ವಿಚಾರಣೆಗೆ ಡಿಸೆಂಬರ್ 16, 1992 ರಂದು ಎಂ ಎಸ್ ಲಿಬರ್ಹಾನ್ ನೇತೃತ್ವದ ಸಮಿತಿ ರಚಿಸಲಾಯಿತು. ಅಂದರೆ ಸುಮಾರು 17 ವರ್ಷಗಳ ನಂತರ ಸಮಿತಿ ಸರಕಾರಕ್ಕೆ ವರದಿ ಸಲ್ಲಿಸಿದೆ. ವರದಿಯ ಪ್ರಸ್ತುತಿ, ಅಪ್ರಸ್ತುತಿಯ ಬಗ್ಗೆ ವಾದ ವಿವಾದಗಳು ಆರಂಭವಾಗಿವೆ.

(ಏಜನ್ಸೀಸ್)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X