ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶಿವರಾಜ್ ಪಾಟೀಲ್ ಗೆ ರಾಜ್ಯಪಾಲರ ಹುದ್ದೆ?

By Staff
|
Google Oneindia Kannada News

Shivraj Patil
ನವದೆಹಲಿ, ಜೂ.29: ಮಾಜಿ ಕೇಂದ್ರ ಗೃಹ ಸಚಿವ ಶಿವರಾಜ್ ಪಾಟೀಲ್ ಅವರಿಗೆ ರಾಜ್ಯಪಾಲ ಹುದ್ದೆ ಸಿಗುವ ಸಾಧ್ಯತೆ ಇದೆ. ಈ ಬಾರಿಯ ಕೇಂದ್ರ ಸಚಿವ ಸಂಪುಟದಲ್ಲಿ ಅವರಿಗೆ ಸಚಿವ ಸ್ಥಾನ ಕೈ ತಪ್ಪಿಹೋಗಿತ್ತು.

ಜುಲೈ-ಆಗಸ್ಟ್ ತಿಂಗಳಲ್ಲಿ 7 ರಾಜ್ಯಗಳ ರಾಜ್ಯಪಾಲ ಹುದ್ದೆಗಳನ್ನು ಕೇಂದ್ರ ಸರಕಾರ ಭರ್ತಿ ಮಾಡಬೇಕಿದ್ದು, ಶಿವರಾಜ್ ಪಾಟೀಲ್ ಸೇರಿ ಕೆಲ ಮಾಜಿ ಕೇಂದ್ರ ಸಚಿವರಿಗೆ ರಾಜ್ಯಪಾಲರ ಹುದ್ದೆ ಸಿಗುವ ಸಾಧ್ಯತೆ ಇದೆ. 26/7 ಮುಂಬೈ ಉಗ್ರರ ದಾಳಿಯ ನಂತರ ಶಿವರಾಜ್ ಪಾಟೀಲ್ ಕೇಂದ್ರ ಗೃಹ ಸಚಿವ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದರು.

ಉತ್ತರ ಪ್ರದೇಶ (ಟಿ ವಿ ರಾಜೇಶ್ವರ್), ಗುಜರಾತ್ (ನವಲ್ ಕಿಶೋರ್ ಶರ್ಮಾ) ಮತ್ತು ಹರ್ಯಾಣ (ಎ ಆರ್ ಕಿದ್ವಾಯಿ)ರಾಜ್ಯಪಾಲರ ಆಡಳಿತಾವಧಿ ಜುಲೈಗೆ ಅಂತ್ಯವಾಗಲಿದೆ. ಹಾಗೆಯೇಆಗಸ್ಟ್ 5 ಕ್ಕೆ ಗೋವಾದ ಎಸ್ ಎಸ್ ಸಿದ್ದು ಅವರ ಆಡಳಿತಾವಧಿ ಮುಗಿಯಲಿದೆ. ತ್ರಿಪುರಾ, ಅಸ್ಸಾಂಗಳಲ್ಲಿ ಈಗಾಗಲೇ ರಾಜ್ಯಪಾಲರ ಹುದ್ದೆ ಖಾಲಿಯಿದೆ. ಪಂಜಾಬ್, ಪಶ್ಚಿಮ ಬಂಗಾಳ , ರಾಜಸ್ತಾನ್ ಮತ್ತು ಜಾರ್ಖಂಡ್ ರಾಜ್ಯಗಳಲ್ಲಿ ಶೀಘ್ರದಲ್ಲೇ ರಾಜ್ಯಪಾಲರ ಹುದ್ದೆ ತೆರವಾಗಲಿದೆ.

(ಏಜೆನ್ಸೀಸ್)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X