• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಅವಿರತದಿಂದ ಸರಕಾರಿ ಶಾಲಾ ಮಕ್ಕಳಿಗೆ ಪುಸ್ತಕ ವಿತರಣೆ

By Staff
|

Book distribution by Aviratha Pratishthana
ಬೆಂಗಳೂರು, ಜೂ. 26 : ಅವಿರತ ಪ್ರತಿಷ್ಠಾನವು 2009-2010ರ ಸಾಲಿನಲಿ ವ್ಯಾಸಂಗ ಮಾಡುತ್ತಿರುವ ರಾಜ್ಯದ ಮಕ್ಕಳನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಆಯ್ದ 25 ಸರ್ಕಾರಿ ಶಾಲೆಗಳ ಮಕ್ಕಳಿಗೆ ಉಚಿತವಾಗಿ ಬರೆಯುವ ಪುಸ್ತಕ ವಿತರಿಸುವ ಕಾರ್ಯಕ್ರಮಕ್ಕೆ ದಿನಾಂಕ ಜೂನ್ 20ರಂದು ಬೆಂಗಳೂರಿನ ಹುಲಿವೇನಹಳ್ಳಿಯಲ್ಲಿ ಚಾಲನೆ ನೀಡಿತು.

ಬೆಂಗಳೂರು ನಗರದಿಂದ ಶನಿವಾರ ಮುಂಜಾನೆ 60 ಸದಸ್ಯರ ತಂಡ ದೊಡ್ಡ ಆಲದಮರ ಸಮೀಪವಿರುವ ಹುಲವೇನಹಳ್ಳಿಗೆ ಪ್ರಯಾಣ ಬೆಳಸಿತು. ಹುಲವೇನಹಳ್ಳಿಯ ಶಾಲೆಯಲ್ಲಿ ಈ ಕೆಳಗಿನ ಶಾಲೆಯ ಶಿಕ್ಷಕರನ್ನೊಳಗೊಂಡಂತೆ ಊರಿನ ಪ್ರಮುಖರು ಸೇರಿ ಕಾರ್ಯಕ್ರಮಕ್ಕೆ ನಾಂದಿ ಹಾಡಿದರು.

ಕಾರ್ಯಕ್ರಮವನ್ನು ವಿದ್ಯುಕ್ತವಾಗಿ ಸ್ಥಳೀಯ ಶಿಕ್ಷಕರಾದ ನಾರಾಯಣಮೂರ್ತಿಯವರು ಅವಿರತ ಸದಸ್ಯರು ಮತ್ತು ಶಿಕ್ಷಕರನ್ನು ಉದ್ದೇಶಿಸಿ ಮಾತನಾಡಿ, ಅವಿರತ ಪ್ರತಿಷ್ಠಾನದ ಸಮಿತಿ ಹಾಗೂ ಸದಸ್ಯರಿಗೆ ಕೃತಜ್ಞತೆಗಳನ್ನು ಸಲ್ಲಿಸಿದರು. ಹುಲವೇನಹಳ್ಳಿ ವ್ಯಾಪ್ತಿಗೆ ಬರುವ ಎಲ್ಲಾ 16 ಶಾಲೆಗಳ ಮೇಲ್ವಿಚಾರಕರಾದ ಕೆಂಪರಾಮಯ್ಯನವರು ಕಾರ್ಯಕ್ರಮಕ್ಕೆ ಮೆಚ್ಚುಗೆ ಮತ್ತು ಸಹಕಾರವನ್ನು ವ್ಯಕ್ತಪಡಿಸಿದಿರು.

ಈ ಕಾರ್ಯಕ್ರಮದ ಮುಖ್ಯ ರೂವಾರಿಗಳಾದ ಸತೀಶ್, ಸ್ವರ್ಣಲತಾ, ಡಾ|| ಹಿಮಾಂಶುರವರನ್ನು ನೆನಪಿಸಿಕೊಳ್ಳಲು ಕೆಂಪರಾಮಯ್ಯ ಮರೆಯಲಿಲ್ಲ. ಅವಿರತದ ಪರವಾಗಿ ಸತೀಶ್ ಮತ್ತು ಡಾ|| ರಾಜೀವ್ ಮಾತನಾಡಿ, ಈ ಕಾರ್ಯಕ್ರಮದ ಯಶಸ್ಸಿಗೆ ತನು ಮನ ಧನ ಧಾರೆ ಎರೆದ ಎಲ್ಲಾ ಸದಸ್ಯರನ್ನೂ ನೆನಪಿಸಿಕೊಂಡು ಧನ್ಯವಾದಗಳನ್ನರ್ಪಿಸಿದರು. ನಂತರ ಎಲ್ಲಾ ಸದಸ್ಯರನ್ನು ನಾಲ್ಕು ತಂಡಗಳನ್ನಾಗಿ ವಿಂಗಡಿಸಿ ಪ್ರತಿಯೊಂದು ತಂಡಕ್ಕೂ 4 ಶಾಲೆಗಳಿಗೆ ಹೋಗಿ ಪುಸ್ತಕ ವಿತರಿಸುವ ಜವಾಬ್ದಾರಿಯನ್ನು ಹೊರಿಸಲಾಯಿತು.

16 ಸರಕಾರಿ ಕಿರಿಯ ಪ್ರಾಥಮಿಕ ಶಾಲೆಗಳು ಕೆಳಗಿನ ಗ್ರಾಮಗಳಲ್ಲಿವೆ.

1. ಹುಲವೇನಹಳ್ಳಿ

2. ಬ್ಯಲಾಳು

3. ಮಾದ ಪಟ್ಟಣ

4. ಚಿಕ್ಕನಹಳ್ಳಿ

5. ಗೊಲ್ಲಹಳ್ಳಿ

6. ಸೂಲಿವಾರು

7. ಕುರುಬರಹಳ್ಳಿ

8. ಹುಣ್ಣಿಗೆರೆ

9 ಬಸಮ್ಮನಹಳ್ಳಿ

10. ಆಲಮ್ಮನ ಪಾಳ್ಯ

11. ದೊನ್ನೇನ ಹಳ್ಳಿ

12. ಮಾಯಸಂದ್ರ

13. ಶಾಂತಿನಗರ

14. ಕಾಳಯ್ಯನ ಪಾಳ್ಯ

15. ಕೂಡುಸಿದ್ಧನ ಪಾಳ್ಯ

16. ಉದ್ದಂಡನಹಳ್ಳಿ

ನಂತರ ಸಮೀಪದಲ್ಲೇ ಇರುವ ಮಂಚನಬಲೆ ಅಣೆಕಟ್ಟಿಗೆ ಸದಸ್ಯರು ಪ್ರಯಾಣ ಬೆಳಸಿದರು. ನಗರದ ಸನಿಹದಲ್ಲೇ ಇಷ್ಟೊಂದು ಮನಮೋಹಕ ಪ್ರಶಾಂತವಾದ ತಾಣವಿರುವುದು ಅನೇಕರಿಗೆ ಅಚ್ಚರಿ ಹಾಗೂ ಸಡಗರ ತಂದಿತು. ಅರ್ಕಾವತಿ ನದಿಗೆ ಅಡ್ಡಲಾಗಿ ಕಟ್ಟಿರುವ ಈ ಅಣೆಕಟ್ಟು ನಿಜಕ್ಕೂ ನಗರ ದೈನಂದಿನ ಜೀವನದಲ್ಲಿ ಜಡ್ಡುಗಟ್ಟಿ ಹೋಗಿದ್ದ ಅನೇಕ ಮನಸ್ಸುಗಳಿಗೆ ನವಚೈತನ್ಯವನ್ನು ತುಂಬಿ ಸಂಭ್ರಮವನ್ನುಂಟು ಮಾಡಿತು. ಕೆಲ ಕಾಲ ಅಲ್ಲಿ ಕಳೆದು ನಂತರ ಅವಿರತದ ಎಲ್ಲಾ ಸದಸ್ಯರು ನಗರಕ್ಕೆ ಹಿಂತಿರುಗಿದರು.

ಪುಸ್ತಕ ವಿತರಣಾ ಕಾರ್ಯಕ್ರಮದ ಮುಂದುವರಿದ ಭಾಗವಾಗಿ ಈ ಕೆಳಗೆ ತಿಳಿಸಿರುವ ಶಾಲೆಗಳಲ್ಲಿ ಬರುವ ವಾರಾಂತ್ಯಗಳಲ್ಲಿ ಪುಸ್ತಕ ವಿತರಿಸುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.

17. ಸರ್ಕಾರಿ ಪ್ರೌಢ ಶಾಲೆ, ಒಳಗೆರೆ ಪುರ, ಅಮೃತೂರು, ಕುಣಿಗಲ್ಲು.

18. ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ, ನೆಲಮಂಗಲ.

19. ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ, ಬಾಣಗಾನ ಹಳ್ಳಿ ಬಡಾವಣೆ, ಚೆನ್ನಪಟ್ಟಣ.

20. ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ, ರಾಮಪುರ, ದೊಡ್ಡಬಳ್ಳಾಪುರ.

21. ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ರಾಯಸಮುದ್ರ, ಕೃಷ್ಣರಾಜಪೇಟೆ, ಮಂಡ್ಯ.

22. ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ, ಚಿನ್ನೇಹಹಳ್ಳಿ, ಕೃಷ್ಣರಾಜಪೇಟೆ, ಮಂಡ್ಯ.

23. ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ, ಯಳಂದೂರು, ಚಾಮರಾಜನಗರ

24. ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ, ಹಿರೇಕುಡಲಿಗೆ, ಹುನಗುಂದ, ಬಾಗಲಕೋಟೆ.

(ದಟ್ಸ್ ಕನ್ನಡ ವಾರ್ತೆ)

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more