ವ್ಯಾನ್ ಪಲ್ಟಿ : ಐಬಿಎಂ ಟೆಕ್ಕಿ ಸಾವು, 7 ಗಾಯ
ಮಂಡ್ಯ, ಜೂ. 15 : ಓವರ್ ಟೇಕ್ ಮಾಡಲು ಹೋದ ವ್ಯಾನೊಂದು ಪಲ್ಟಿಯಾದ ಹಿನ್ನೆಲೆಯಲ್ಲಿ ಐಬಿಎಂ ಸಾಫ್ಟವೇರ್ ಕಂಪನಿಯ ಉದ್ಯೋಗಿಯೊಬ್ಬರು ಮೃತಪಟ್ಟಿದ್ದು, ಏಳು ಜನ ಟೆಕ್ಕಿಗಳಿಗೆ ತೀವ್ರವಾದ ಗಾಯವಾಗಿರುವ ಘಟನೆ ಇಂದು ಬೆಳಗ್ಗೆ ಇಲ್ಲಿಗೆ ಸಮೀಪ ಬುದನೂರು ಗ್ರಾಮದ ಬಳಿ ನಡೆದಿದೆ.
ಬೆಂಗಳೂರಿನಲ್ಲಿರುವ ಐಬಿಎಂ ಸಾಫ್ಟವೇರ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ 8 ಮಂದಿ ಟೆಕ್ಕಿಗಳ ತಂಡ ವೀಕೆಂಡ್ ಗೆ ಮೈಸೂರಿಗೆ ತೆರಳಿದ್ದರು. ಇಂದು ಬೆಳಗ್ಗೆ ಮೈಸೂರಿನಿಂದ ಬೆಂಗಳೂರಿಗೆ ಬರುವಾಗ ಮಂಡ್ಯದ ಸಮೀಪದ ಬೂದನೂರು ಗ್ರಾಮದ ಬಳಿ ವಾಹನವೊಂದನ್ನು ಓವರ್ ಟೇಕ್ ಮಾಡು್ತಿರುವ ಸಂದರ್ಭದಲ್ಲಿ ವ್ಯಾನ್ ಪಲ್ಟಿಯಾಗಿದೆ. ಅದರಲ್ಲಿ ಎಂಟು ಮಂದಿಗಳ ಪೈಕಿ ಒಬ್ಬ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾನೆ.
ಉಳಿದ ಏಳು ಜನರಿಗೆ ಗಂಭೀರವಾದ ಗಾಯಗಳಾಗಿವೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಬಾಸ್ಕರ್(25) ಮೃತಪಟ್ಟ ಟೆಕ್ಕಿಯಾಗಿದ್ದಾನೆ. ಕೆಲವರನ್ನು ಮಂಡ್ಯ ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದರೆ, ಗಂಭೀರವಾಗಿ ಗಾಯಗೊಂಡವರನ್ನು ಬೆಂಗಳೂರಿನ ನಿಮ್ಹಾನ್ಸ್ ಆಸ್ಪತ್ರೆಗೆ ಸೇರಿಸಲಾಗಿದೆ.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications