ಗಂಗೂಬಾಯಿಗೆ ಆನಾರೋಗ್ಯ : ಆಸ್ಪತ್ರೆಗೆ ದಾಖಲು
ಹುಬ್ಬಳ್ಳಿ,
ಜೂ. 8 : ಖ್ಯಾತ ಹಿಂದೂಸ್ತಾನಿ ಗಾಯಕಿ ಡಾ ಗಂಗೂಬಾಯಿ ಹಾನಗಲ್ ತೀವ್ರ ಅನಾರೋಗ್ಯದಿಂದ ಬಳಲುತ್ತಿರುವ ಹಿನ್ನೆಲೆಯಲ್ಲಿ ಇಲ್ಲಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಆತಸ್ಮಿಕವಾಗಿ ಮೈನಡುಕು ಹೆಚ್ಚಿದ್ದರಿಂದ ಶನಿವಾರ ಅವರನ್ನು ಇಲ್ಲಿನ ಗೋಕುಲ ರಸ್ತೆಯ ಕಲಮದಾನಿ ಆಸ್ಪತ್ರೆಗೆ ಸೇರಿಸಲಾಗಿದೆ. id="toptextpromo">ಡಾ
ಅಶೋಕ್ ಕಮಲದಾನಿ, ಡಾ ದತ್ತಾ ಹಾಗೂ ನಾಡಿಗೇರ ಎಂಬ ನುರಿತ ವೈದ್ಯರು ಗಂಗೂಬಾಯಿ ಅವರನ್ನು ನೋಡಿಕೊಳ್ಳುತ್ತಿದ್ದಾರೆ. ಎಲ್ಲ ತಪಾಸಣೆಗಳನ್ನು ಮಾಡಲಾಗಿದ್ದು, ಅಂಥ ಗಂಭೀರ ಸಮಸ್ಯೆ ಇಲ್ಲ. ಚಿಕಿತ್ಸೆ ಮುಂದುವರೆದಿದ್ದು, ತುಸು ವಿಶ್ರಾಂತಿ ಬೇಕಿದೆ ಅಷ್ಟೇ ಎಂದು ವೈದ್ಯರು ತಿಳಿಸಿದ್ದಾರೆ. ಗಂಗೂಬಾಯಿ ಅವರಿಗೆ ಇದೀಗ 97 ವರ್ಷವಾಗಿದೆ. id='are-slot-1' class='oiad oi-axt oiadv'> id='top-searched-articles'>(ದಟ್ಸ್
ಕನ್ನಡ ವಾರ್ತೆ)











Click it and Unblock the Notifications