ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಾಯಕತ್ವದ ಗೊಂದಲವೇ ಸೋಲಿಗೆ ಕಾರಣ : ಕುಲಕರ್ಣಿ

By Staff
|
Google Oneindia Kannada News

LK Advani
ನವದೆಹಲಿ, ಜೂ. 8 : ಇತಿಹಾಸದಲ್ಲೇ ಮೊದಲ ಬಾರಿಗೆ ಬಿಜೆಪಿಯ ಉನ್ನತ ಹಂತದಲ್ಲಿದ್ದಾಗ ಅತಿ ಹೆಚ್ಚಿನ ಗೊಂದಲ ಉಂಟಾಯಿತು. ಪ್ರಧಾನಿ ಅಭ್ಯರ್ಥಿಯಾಗಿದ್ದ ಎಲ್ ಕೆ ಅಡ್ವಾಣಿ ಅವರಿಗೂ ನಿರ್ಣಾಯಕ ಹಂತದಲ್ಲಿ ನಾಯಕತ್ವ ಒದಗಿಸಲಾಗಲಿಲ್ಲ ಎಂದು ಬಿಜೆಪಿಯ ಚುನಾವಣಾ ಸೋಲಿನ ಕಾರಣಗಳನ್ನು ಪಕ್ಷದ ಪ್ರಮುಖ ಕಾರ್ಯತಂತ್ರಗಾರ ಹಾಗೂ ಅಡ್ವಾಣಿ ಅವರ ನಿಕಟವರ್ತಿ ಸುಧೀಂದ್ರ ಕುಲಕರ್ಣಿ ಹೇಳಿದ್ದಾರೆ.

ಅವರ ಪ್ರಕಾರ ಹಿಂದುತ್ವದ ಗೊಂದಲ, ಪಕ್ಷದ ಸೀಮಿತ ಸಾಮಾಜಿಕ ವ್ಯಾಪ್ತಿಯನ್ನು ಹಿಗ್ಗಿಸಿಕೊಳ್ಳಲಾಗದ ವೈಫಲ್ಯ, ನಕಾರಾತ್ಮಕ ಪ್ರಚಾರ ಹಾಗೂ ನಾಯಕತ್ವದಲ್ಲಿನ ಗೊಂದಲವೇ ಸೋಲಿಗೆ ಕಾರಣಗಳು. ಬಿಜೆಪಿ ಸೋಲಿಗೆ ಕಾರಣಗಳನ್ನು ವಿಶ್ಲೇಷಿಸಿರುವ ಕುಲಕರ್ಣಿ, ಮುಸ್ಲಿಮರು, ಹಿಂದುತ್ವ, ಬಡವರು, ಆರೆಸ್ಸೆಸ್ ಹಾಗೂ ತನ್ನ ಸ್ವಂತದ ಬಗ್ಗೆ ತಾಳಬೇಕಾದ ನಿಲುವಿನ ಕುರಿತು ಪಕ್ಷ ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ ಎಂದಿದ್ದಾರೆ.

ವಾಸ್ತವದಲ್ಲಿ ದುರ್ಬಲರಾಗಿರುವ ಪ್ರಧಾನಿ ಮನಮೋಹನ್ ಸಿಂಗ್ ಅವರನ್ನು ಸೋನಿಯಾ ಹಾಗೂ ರಾಹುಲ್ ಪ್ರಬಲರಂತೆ ಬಿಂಬಿಸಿದರು. ಆದರೆ, ವ್ಯಂಗ್ಯವೆಂದರೆ ಪಕ್ಷದ ಬೆಳವಣಿಗೆಗೆ ಅತ್ಯಮೂಲ್ಯ ಕೊಡುಗೆ ನೀಡಿದ್ದ ಅವರನ್ನು ಬಿಜೆಪಿ ಮತ್ತು ಅರೆಸ್ಸೆಸ್ ದುರ್ಬಲರಂತೆ ಬಿಂಬಿಸಿದವು. ಅನೇಕ ಕಾರ್ಯಕರ್ತರು ಹೇಳುವಂತೆ ಅಡ್ವಾಣಿಯವರ ಸ್ವಾಮಿ, ಪ್ರಾಮಾಣಿಕತೆಯಿಂದ ವಾಜಪೇಯಿ ಪ್ರಧಾನಿಯಾದರು. ಆದರೆ, ಅಡ್ವಾಣಿ ಪ್ರಧಾನಿಯಾಗಲು ಹೊರಟಾಗ ಹೀಗೆ ಬೆಂಬಲ ನೀಡಲು ಯಾರೂ ಬರಲಿಲ್ಲ ಎಂದು ಕುಲಕರ್ಣಿ ಮಾರ್ಮಿಕವಾಗಿ ವಿಶ್ಲೇಷಿಸಿದ್ದಾರೆ.

(ಏಜನ್ಸೀಸ್)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X