ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೆಡಿಕಲ್ ಸೀಟ್ ಬೇಕೇ? 20-40 ಲಕ್ಷ ಕೊಡಿ !!

By Staff
|
Google Oneindia Kannada News

BS Jagathrakshakan
ಚೆನ್ನೈ ಜೂ 3: ಕೇಂದ್ರದಲ್ಲಿ ಯುಪಿಎ ಸರಕಾರ ಅಧಿಕಾರಕ್ಕೆ ಬಂದು ಒಂದು ವಾರ ಕಳೆದಿದಸ್ಟೇ. ಸರ್ವೋಚ್ಚ ನ್ಯಾಯಾಲಯದ ನಿಯಮವನ್ನು ಖಾಸಗಿ ಕಾಲೇಜ್ ಗಳು ಯಾವರೀತಿ ಗಾಳಿಗೆ ತೂರುತ್ತಾರೆ ಎನ್ನುವುದಕ್ಕೆ ಒಂದು ಉದಾಹರಣೆ. ಚೆನ್ನೈ ಮೂಲದ ಕಾಲೇಜ್ ಶ್ರೀ ರಾಮಚಂದ್ರ ಯುನಿವರ್ಸಿಟಿ ಮತ್ತು ಶ್ರೀ ಬಾಲಾಜಿ ಮೆಡಿಕಲ್ ಕಾಲೇಜ್, ಮೆಡಿಕಲ್ ಸೀಟ್ ಒಂದಕ್ಕೆ ಕ್ರಮವಾಗಿ 40 ಲಕ್ಷ ಮತ್ತು 20 ಲಕ್ಷ ರೂಪಾಯಿಗಳನ್ನು 'ಡೋನೇಷನ್ ' ರೂಪದಲ್ಲಿ ತೆಗೆದುಕೊಂಡು ಹಗಲು ದರೋಡೆ ನಡೆಸುತ್ತಿದೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ. ಈ ಎರಡೂ ಕಾಲೇಜ್ ಯುಪಿಎ ಸರಕಾರದ ಪಾಲುದಾರ ಪಕ್ಷವಾಗಿರುವ ಡಿಎಂಕೆ ಸಂಸದರ ಒಡೆತನದ್ದು.

ಈ ಎರಡೂ ಕಾಲೇಜ್ ನಲ್ಲಿ ಎಂಬಿಬಿಎಸ್ ವಿಭಾಗದಲ್ಲಿ 150 ಸೀಟ್ ಗಳಿವೆ. ಡಿಎಂಕೆ ಸಂಸದ, ಕೇಂದ್ರ ವಾರ್ತಾ ಮತ್ತು ಪ್ರಸಾರ ಇಲಾಖೆ ರಾಜ್ಯ ಸಚಿವ ಜಗತ್ರಕ್ಷಕನ್ ಅವರು ಶ್ರೀ ಬಾಲಾಜಿ ಮೆಡಿಕಲ್ ಕಾಲೇಜ್ ಸಂಸ್ಥಾಪಕರಾದರೆ, ಡಿಎಂಕೆ ಬೆಂಬಲಿತ ವಾಣಿಜ್ಯೋಧ್ಯಮಿ ವಿ ಆರ ವೆ೦ಕಟಾಚಲ೦ ಶ್ರೀ ರಾಮಚಂದ್ರ ಯುನಿವರ್ಸಿಟಿಯ ಧರ್ಮದರ್ಶಿ. ಈ ವಿಷಯವನ್ನು ಸರಕಾರದ ಗಮನಕ್ಕೆ ತಂದಾಗ ಸಂಬಂಧಪಟ್ಟ ಅಧಿಕಾರಿಗಳಿಂದ ವಿಚಾರಣೆ ನಡೆಸುವುದಾಗಿ ಪೊಳ್ಳು ಭರವಸೆ ನೀಡಿದೆ.

ಬಾಲಾಜಿ ಮೆಡಿಕಲ್ ಕಾಲೇಜ್ ಅಧಿಕಾರಿ ಜಾನ್ಸನ್ ಎನ್ನುವವರು ಚೆನ್ನೈನ ಲಕ್ಷ್ಮಿ ಅಮ್ಮಾಳ್ ಟ್ರಸ್ಟ್, 20, ತಿಲಕ್ ಮಾರ್ಗ, ಚೆನ್ನೈ ನಲ್ಲಿ ವಿಧ್ಯಾರ್ಥಿಗಳ ಡೋನೇಷನ್ ವಿಷಯದಲ್ಲಿ 20 ಲಕ್ಷ ರುಪಾಯಿ ನೀಡಬೇಕೆಂದು ಚೌಕಾಸಿ ಮಾಡುತ್ತಿದ್ದಾಗ ಟೈಮ್ಸ್ ಆಫ್ ಇಂಡಿಯಾದ ಕ್ಯಾಮರಾ ಕಣ್ಣಿಗೆ ಬಿದ್ದಿದ್ದಾರೆ. ಈ ವಿಷಯದ ಬಗ್ಗೆ ಜಾನ್ಸನ್ ಅವರನ್ನು ವಿಚಾರಿಸಿದಾಗ ಇದು ಸಚಿವ ಜಗತ್ರಕ್ಷಕನ್ ಅವರ ಆದೇಶ ಅಲ್ಲದೆ ಯಾವುದೇ ಶಿಫಾರಸು ಪತ್ರಕ್ಕೆ ಈ ಕಾಲೇಜ್ ನಲ್ಲಿ ಅವಕಾಶವಿಲ್ಲ ಎಂದು ಹೇಳಿದ್ದಾರೆ.

(ಏಜೆನ್ಸೀಸ್)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X