ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಸಬ್ ಪರ ವಕೀಲರಿಗೆ ದಿನಕ್ಕೆ ರು.2,500 ಭತ್ಯೆ!

By Staff
|
Google Oneindia Kannada News

ಮುಂಬೈ, ಜೂ 3: ಉಗ್ರ ಅಜ್ಮಲ್ ಕಸಬ್ ಪರ ವಾದಿಸಲು ಮಹಾರಾಷ್ಟ್ರ ಸರಕಾರ ಈತನ ಪರ ವಕೀಲ ಅಬ್ಬಾಸ್ ಕಜ್ಮಿ ಗೆ ನೀಡುವ ಭತ್ಯೆ ಎಷ್ಟು ಗೊತ್ತೇ? ದಿನ ಒಂದಕ್ಕೆ ರುಪಾಯಿ 2500. ವಾರದಲ್ಲಿ ಐದು ಸಲ ವಿಚಾರಣೆ ನಡೆಯುತ್ತದೆ ಅಂದರೆ ವಾರಕ್ಕೆ ರು.12,500, ತಿಂಗಳಿಗೆ 50,000 ರುಪಾಯಿ!

ಮಾಡಿದ್ದು ಪೈಶಾಚಿಕ ಕೆಲಸ. ಅವನ ಪರ ವಾದಿಸಲು ವಕೀಲರು ಬೇರೆ. ಆ ವಕೀಲರಿಗೆ ಸರಕಾರದಿಂದ ತಿಂಗಳಿಗೆ ಭತ್ಯೆ. ದೇಶದ ವಾಣಿಜ್ಯ ನಗರಿ ಮುಂಬೈ ನಗರವನ್ನು ತಮ್ಮ ಮುಷ್ಠಿಯಲ್ಲಿ ಇಟ್ಟುಕೊಂಡು ನೂರಾರು ಜೀವಗಳನ್ನು ಬಲಿತೆಗೆದುಕೊಂಡು ಇಡೀ ದೇಶವೇ ತಲೆ ತಗ್ಗಿಸುವಂತೆ ಭಯೋತ್ಪಾದನಾ ಕೆಲಸ ಮಾಡಿದ್ದಕ್ಕೆ ಕೊಡುತ್ತಿರುವ ಬಳುವಳಿ.

ಭಾರತದ ಸಂವಿಧಾನದ ಕಾನೂನಿನಡಿ ಆರೋಪಿ ಪರ ವಾದಿಸಲು ಯಾರೂ ಮುಂದೆ ಬರದಿದ್ದರೆ, ರಾಜ್ಯ ಸರಕಾರದ ಕಾನೂನು ಇಲಾಖೆಯ ವಕೀಲರನ್ನು ಕೇಸ್ ಪರ ವಾದಿಸಲು ಕೋರ್ಟ್ ನೇಮಕ ಮಾಡಬಹುದು. ನಿಯಮದ ಅನ್ವಯ ಕೇಸ್ ಸಂಪೂರ್ಣ ಮುಗಿದ ನಂತರ ರು.900 ಭತ್ಯೆ ನೀಡಬೇಕು.

ಆದರೆ ಈ ಕೇಸ್ ನ ಸೂಕ್ಷ್ಮತೆಯಿಂದಾಗಿ ಕೋರ್ಟ್ ವಕೀಲರಿಗೆ ನೀಡುವ ಭತ್ಯೆಯನ್ನು ಸ್ವಲ್ಪ ಮಟ್ಟಿಗೆ ಹೆಚ್ಚಿಸುವಂತೆ ಸರಕಾರವನ್ನು ಕೇಳಿಕೊಂಡಿತ್ತು. ಇದಕ್ಕೆ ಸ್ಪಂದಿಸಿದ ಮಹಾರಾಷ್ಟ್ರ ಸರಕಾರ ಈ ನಿರ್ಧಾರ ತೆಗೆದುಕೊಂಡಿದೆ ಮತ್ತು ಸರಕಾರದ ಆದೇಶದ ಪ್ರತಿ ತನಗೆ ತಲುಪಿದೆ ಎಂದು ವಕೀಲ ಅಬ್ಬಾಸ್ ಕಜ್ಮಿ ಹೇಳಿದ್ದಾರೆ.

(ಏಜೆನ್ಸೀಸ್)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X